ಇನ್ನು ಇವರೆಲ್ಲರಿಗೂ ಅನ್ ಎಕ್ಸ್‌ಪೆಕ್ಟೆಡ್ ಶಾಕ್ ಕೊಡ್ತಿದ್ದಾರೆ ಸಾಯಿ ಪಲ್ಲವಿ. ಅವರ ಸಂಭಾವನೆಯನ್ನ ಸಡನ್ನಾಗಿ ಡಬಲ್, ಟ್ರಿಬಲ್ ಮಾಡಿದ್ದಾರೆ. `ತಂಡೇಲ್` ಮೂವಿಗೆ ಐದು ಕೋಟಿ ತನಕ ತಗೊಂಡಿದ್ದ ಅವರು ಈಗ ಬಾಲಿವುಡ್‌ಗೆ ಎಂಟ್ರಿ ಕೊಟ್ಟು `ರಾಮಾಯಣ್` ಮೂವಿಯಲ್ಲಿ ನಟಿಸ್ತಿದ್ದಾರೆ. ಇದರಲ್ಲಿ ರಣ್‌ಬೀರ್ ಕಪೂರ್ ರಾಮನಾಗಿ ನಟಿಸ್ತಿದ್ರೆ, ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ತಿದ್ದಾರೆ. ಯಶ್ ರಾವಣನಾಗಿ ಕಾಣಿಸ್ತಾರೆ ಅಂತ ಮಾಹಿತಿ. ಈ ಸಿನಿಮಾಗೆ ಸಾಯಿ ಪಲ್ಲವಿ ಬರೋಬ್ಬರಿ 15 ಕೋಟಿ ಸಂಭಾವನೆ ತಗೊಳ್ತಿದ್ದಾರೆ ಅಂತ ಮಾಹಿತಿ. ಆದ್ರೆ ಇದು ಎರಡು ಪಾರ್ಟ್ ಆಗಿ ಬರುತ್ತೆ ಅಂತ ಮಾಹಿತಿ.