ಸಹೋದರಿ ನಿಶ್ಚಿತಾರ್ಥ ಸಮಾರಂಭದಲ್ಲಿ ಕುಣಿದು ಸಂಭ್ರಮಿಸಿದ ಸಾಯಿ ಪಲ್ಲವಿ

First Published | Jan 24, 2024, 4:42 PM IST

ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ (Sai Pallavi) ಸಹೋದರಿ ಪೂಜಾ ಕಣ್ಣನ್ ಅವರ ನಿಶ್ಚಿತಾರ್ಥ ಸಮಾರಂಭವು ಇತ್ತೀಚೆಗೆ ನಡೆದಿದ್ದು,  ತಂಗಿಯ ನಿಶ್ಚಿತಾರ್ಥದಲ್ಲಿ ಸಾಯಿ ಪಲ್ಲವಿ ಕುಣಿದು ಸಂಭ್ರಮಿಸಿದ್ದಾರೆ. 
 

ಬಹುಭಾಷಾ ನಟಿ ಸಾಯಿ ಪಲ್ಲವಿ (Sai Pallavi) ಮನೆಯಲ್ಲಿ ಮಂಗಳ ಕಾರ್ಯವೊಂದು ಸಂಭ್ರಮದಿಂದ ನಡೆದಿದ್ದು, ಈ ಸಡಗರದಲ್ಲಿ ನಟಿ ತಮ್ಮ ಫ್ಯಾಮಿಲಿ ಜೊತೆ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಆದರೆ ಇದು ಖಂಡಿತಾ ಸಾಯಿ ಪಲ್ಲವಿ ಮದುವೆ ಸಂಭ್ರಮವಂತೂ ಅಲ್ವೇ ಅಲ್ಲ. ಅವರ ಸಹೋದರಿಯ ನಿಶ್ಚಿತಾರ್ಥ ಸಂಭ್ರಮ. 
 

ಹೌದು, ಸಾಯಿ ಪಲ್ಲವಿ ಅವರ ಮುದ್ದಿನ ತಂಗಿ ಪೂಜಾ ಕಣ್ಣನ್ (Pooja Kannan) ಅವರ ನಿಶ್ಚಿತಾರ್ಥ ಸಮಾರಂಭ ಜನವರಿ 21 ರಂದು ಕುಟುಂಬ ಭಾಂಧವರ ಸಮ್ಮುಖದಲ್ಲಿ ಅದ್ಧೂರಿಯಾಗಿ, ಸಂಪ್ರಾದಾಯಿಕವಾಗಿ ನಡೆದಿದೆ. 
 

Tap to resize

ಪೂಜಾ ಕಣ್ಣನ್ ಕೂಡ ನಟಿಯಾಗಿದ್ದು, ಇವರು ತಮಿಳಿನ ಚಿತ್ತಿರಿ ಸೆವ್ವನಮ್ ಎನ್ನುವ ಸಿನಿಮಾದಲ್ಲೂ ನಟಿಸಿದ್ದರು. ಈ ಸಿನಿಮಾ 2021ರಲ್ಲಿ ತೆರೆ ಕಂಡಿತ್ತು, ಇದಾದ ಬಳಿಕ ಪೂಜಾ ಸಿನಿಮಾದಿಂದ ದೂರವೇ ಉಳಿದಿದ್ದರು. 
 

ಇತ್ತೀಚೆಗಷ್ಟೇ ಪೂಜಾ ತಮ್ಮ ಲವ್ ಆಫ್ ಲೈಫ್ ವಿನೀತ್ ಅವರ ವಿಡಿಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ (social media) ಅಪ್ ಲೋಡ್ ಮಾಡುವ ಮೂಲಕ ಮದುವೆಯಾಗುವ ಸುಳಿವು ನೀಡಿದ್ದರು. 
 

ಅಲ್ಲದೇ ಅವರು ಸೆಲ್ಫ್ ಲೆಸ್ ಆಗಿ ಒಬ್ಬರನ್ನು ಪ್ರೀತಿ ಮಾಡುವುದು ಹೇಗೆಂದು ನಾನು ಕಲಿತಿದ್ದು ಈ ವ್ಯಕ್ತಿಯಿಂದಲೇ. ಪ್ರೀತಿಯಲ್ಲಿ ಮತ್ತು ಜೀವನದಲ್ಲಿ ತಾಳ್ಮೆ ಮುಖ್ಯ ಎಂದು ತೋರಿಸಿಕೊಟ್ಟಿರುವ ನನ್ನ ಪಾರ್ಟ್ನರ್ ಇನ್ ಕ್ರೈಂ ಎಂದು ಬರೆದುಕೊಂಡಿದ್ದರು, ಇದೀಗ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 
 

ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಪೂಜಾ ಕಣ್ಣನ್ ನಿಶ್ಚಿತಾರ್ಥದ ಹಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಪೂಜಾ ಬೂದು ಬಣ್ಣದ ಸೀರೆಯುಟ್ಟು ಅದಕ್ಕೆ ಮಿನಿಮಲ್ ಜ್ಯುವೆಲ್ಲರಿ ಕಂಬೈನ್ ಮಾಡಿದ್ರೆ, ವರ ವಿಕ್ರಮ್ ಅದಕ್ಕೆ ಮ್ಯಾಚ್ ಆಗುವ ಕುರ್ತಾ ತೊಟ್ಟಿದ್ದಾರೆ. 
 

ಪೂಜಾ ಮತ್ತು ವಿಕ್ರಮ್ ಇಬ್ಬರು ಕೈ ಕೈ ಹಿಡಿದು ನಡೆಯುವ ಫೋಟೋ, ಜೊತೆಗೆ ಇಬ್ಬರ ಫ್ಯಾಮಿಲಿ ಜೊತೆಗಿನ ಫೋಟೋಗಳನ್ನು ಪೂಜಾ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ತಂಗಿಯ ನಿಶ್ಚಿತಾರ್ಥದ ಸಂಭ್ರಮದಲ್ಲಿ ಸಾಯಿ ಪಲ್ಲವಿ ಸಂತೋಷದಿಂದ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಹ ವೈರಲ್ ಆಗುತ್ತಿದೆ. 
 

ಯಾವಾಗಲೂ ಸಿಂಪಲ್ ಆಗಿ ಕಾಣಿಸಿಕೊಳ್ಳುವ ನ್ಯಾಚುರಲ್ ನಾಯಕಿ ಸಾಯಿ ಪಲ್ಲವಿ ಗೋಲ್ಡನ್ ಮತ್ತು ಹಳದಿ ಬಣ್ಣದ ಸೀರೆಯಲ್ಲಿ ಮಿಂಚಿದ್ದು, ಸಿಂಪಲ್ ಆಗಿರೋ ಗೋಲ್ಡ್ ಚೈನ್ (Gold Chian) ಧರಿಸಿ, ತುಂಬಾನೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. 

ಪೂರ್ತಿ ಕುಟುಂಬದ ಜೊತೆಯಾಗಿ ಪೂಜಾ ಕಣ್ಣನ್ ಮತ್ತು ವಿಕ್ರಮ್ ಗೆ ಶುಭ ಕೋರಿ ಫ್ಯಾಮಿಲಿ ಫೋಟೋ ತೆಗೆಸಿಕೊಂಡಿದ್ದು, ಹೀಗೆ. ಈ ಫೋಟೊ ಕೂಡ ಸೋಶಿಯಲ್ ಮೀಡಿಯಾದಲ್ಲಿ (Social Media) ಸದ್ದು ಮಾಡುತ್ತಿದೆ. 
 

Latest Videos

click me!