ಈಸ್‌ ಮೈ ಟ್ರಿಪ್ ಸಂಸ್ಥಾಪಕನ ಜೊತೆ ಕಂಗನಾ ಡೇಟಿಂಗ್?; ನಿಶಾಂತ್ ಜೊತೆಗಿನ ನಟಿಯ ಫೋಟೋ ವೈರಲ್

Published : Jan 24, 2024, 01:06 PM ISTUpdated : Jan 24, 2024, 02:21 PM IST

ರಾಮಮಂದಿರ ಪ್ರಾಣ ಪ್ರತಿಷ್ಠೆಗಾಗಿ ಅಯೋಧ್ಯೆಗೆ ತೆರಳಿರುವ ಕಂಗನಾ ಅಲ್ಲಿನ ವಿವಿಧ ಧಾರ್ಮಿಕ ಸ್ಥಳಗಳನ್ನು ಅನ್ವೇಷಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಈಸ್‌ ಮೈ ಟ್ರಿಪ್ ಸಂಸ್ಥಾಪಕ ನಿಶಾಂತ್ ಪಿಟ್ಟಿ ಜೊತೆ ತೆಗೆಸಿಕೊಂಡಿರುವ ಫೋಟೋಗಳು ಇಬ್ಬರೂ ಡೇಟಿಂಗ್ ಮಾಡುತ್ತಿರಬಹುದು ಎಂಬ ಅನುಮಾನ ಕೆರಳಿಸಿವೆ. 

PREV
19
ಈಸ್‌ ಮೈ ಟ್ರಿಪ್ ಸಂಸ್ಥಾಪಕನ ಜೊತೆ ಕಂಗನಾ ಡೇಟಿಂಗ್?; ನಿಶಾಂತ್ ಜೊತೆಗಿನ ನಟಿಯ ಫೋಟೋ ವೈರಲ್

ಬಾಲಿವುಡ್ ನಟಿ ಕಂಗನಾ ರಣಾವತ್ ಈಸ್‌ ಮೈ ಟ್ರಿಪ್ ಸಂಸ್ಥಾಪಕ ನಿಶಾಂತ್ ಪಿಟ್ಟಿ ಜೊತೆ ಡೇಟಿಂಗ್ ನಡೆಸುತ್ತಿದ್ದಾರಾ? ಇಂಥದೊಂದು ರೂಮರ್ ಈಗ ವ್ಯಾಪಕವಾಗಿ ಹಬ್ಬುತ್ತಿದೆ. 

29

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗಾಗಿ ತೆರಳಿರುವ ಕಂಗನಾ ಇನ್ನೂ ಅಲ್ಲಿಯೇ ಇದ್ದು ಅಯೋಧ್ಯೆಯ ವಿವಿಧ ಧಾರ್ಮಿಕ ಸ್ಥಳಗಳನ್ನು ಅನ್ವೇಷಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ನಿಶಾಂತ್ ಪಿಟ್ಟಿ ಅವರಿಗೆ ಜೊತೆಯಾಗಿದ್ದಾರೆ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಇದಕ್ಕೆ ಕಾರಣ ಇವರಿಬ್ಬರೂ ಒಟ್ಟಿಗೆ ತೆಗೆಸಿಕೊಂಡ ಕೆಲ ಫೋಟೋಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗಿರುವುದು. 

 

39

ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ತಾರೆಗಳಲ್ಲಿ ಕಂಗನಾ ಕೂಡ ಒಬ್ಬರು. ಅದಾದ ಒಂದು ದಿನದ ನಂತರ, ನಿಶಾಂತ್ ಜೊತೆ ಕಂಗನಾ ಪೋಸ್ ನೀಡಿರುವ ಒಂದೆರಡು ಫೋಟೋಗಳನ್ನು ಪಾಪಾರಾಜಿಗಳು ಹಂಚಿಕೊಂಡಿದ್ದಾರೆ.

49

ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಫೋಟೋಗಳಲ್ಲಿ ನಟಿ ಮತ್ತು ನಿಶಾಂತ್ ಪರಸ್ಪರರ ಕಂಪನಿಯಲ್ಲಿ ತುಂಬಾ ಆರಾಮದಾಯಕವಾಗಿರುವುದನ್ನು ಕಾಣಬಹುದಾಗಿದೆ. ಜೋಡಿಯು ಎರಡು ಬಾರಿ ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿದ್ದಾರೆ. ಉದ್ಘಾಟನೆಯ ದಿನದಂದು, ಕಂಗನಾ ಮತ್ತು ನಿಶಾಂತ್ ದೇವಸ್ಥಾನದ ಹಿನ್ನೆಲೆಯಲ್ಲಿ ಪೋಸ್ ನೀಡುತ್ತಿರುವುದು ಕಂಡುಬಂದಿದೆ.

59

 ಅದಲ್ಲದೆ ಮಂಗಳವಾರ, ಉದ್ಘಾಟನೆಯ ಒಂದು ದಿನದ ನಂತರ, ಕಂಗನಾ ಮತ್ತು ನಿಶಾಂತ್ ಮತ್ತೆ ಒಟ್ಟಿಗೆ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಹಾಗಾಗಿ, ಅವರ ಫೋಟೋಗಳು ಡೇಟಿಂಗ್ ವದಂತಿಗಳನ್ನು ಹುಟ್ಟುಹಾಕಿದೆ. 

69

ಈ ಫೋಟೋಗಳನ್ನು ನೋಡಿದ ರೆಡ್ಡಿಟ್ ಬಳಕೆದಾರರು,  ಅವರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಊಹಿಸಲು ಪ್ರಾರಂಭಿಸಿದ್ದಾರೆ. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಅವರು ಒಟ್ಟಿಗೆ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ ಎಂದು ಗಮನಿಸಿದ್ದಾರೆ. ಕೆಲವು ವಾರಗಳ ಹಿಂದೆ ಕಂಗನಾ ನಿಶಾಂತ್ ಮನೆಗೆ ಭೇಟಿ ನೀಡಿದ್ದರು ಎಂದು ಹೇಳಿದ್ದಾರೆ.

79

ಯಾರು ಈ ನಿಶಾಂತ್ ಪಿಟ್ಟಿ?
ನಿಶಾಂತ್ ಪಿಟ್ಟಿ 2000 ರ ದಶಕದ ಆರಂಭದಲ್ಲಿ ಆನ್‌ಲೈನ್ ಟ್ರಾವೆಲ್ ಪ್ಲಾಟ್‌ಫಾರ್ಮ್ EaseMyTripನ ಸಹ-ಸ್ಥಾಪಕ. ಪ್ಲಾಟ್‌ಫಾರ್ಮ್ ಇಂದು ಭಾರತದಲ್ಲಿ ಅತ್ಯಂತ ಜನಪ್ರಿಯ ಏರ್ ಟ್ರಾವೆಲ್ ಬುಕ್ಕಿಂಗ್ ವೆಬ್‌ಸೈಟ್ ಆಗಿದೆ. 2022ರಲ್ಲಿ ಪ್ಲಾಟ್‌ಫಾರ್ಮ್ ₹3,716 ಕೋಟಿಗಳ ಒಟ್ಟು ಬುಕಿಂಗ್ ಆದಾಯವನ್ನು ಮತ್ತು 106 ಕೋಟಿ ರೂಪಾಯಿಗಳ PAT ಅನ್ನು ಹೊಂದಿದೆ ಎಂದು ಫಾರ್ಚೂನ್ ಇಂಡಿಯಾ 2023 ರಲ್ಲಿ ವರದಿ ಮಾಡಿದೆ. 
 

89

ಇದಲ್ಲದೆ, ಅವರು ಬಾಲಿವುಡ್‌ನಲ್ಲಿ ಸಹ-ನಿರ್ಮಾಪಕರಾಗಿದ್ದಾರೆ. ಕಾಕತಾಳೀಯವಾಗಿ, ಅವರು ಕಂಗನಾ ರಣಾವತ್ ಅವರ ಚಿತ್ರಗಳನ್ನು ಸಹ-ನಿರ್ಮಾಣ ಮಾಡಿದ್ದಾರೆ.

99

IMDb ಕಂಗನಾ ಅವರ 2019 ರ ಚಲನಚಿತ್ರ ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿಯಲ್ಲಿ ಸಹ-ನಿರ್ಮಾಪಕರಾಗಿ ನಿಶಾಂತ್ ಹೆಸರನ್ನು ಉಲ್ಲೇಖಿಸಿದೆ.

ಕಂಗನಾ ಅಭಿನಯದ 'ಎಮರ್ಜೆನ್ಸಿ' ಚಿತ್ರ ಬಿಡುಗಡೆಗೆ ಸಜ್ಜಾಗಿದೆ. 

Read more Photos on
click me!

Recommended Stories