ಅಫ್ತಾಬ್ ಶಿವದಾಸನಿ ಜೂನ್ 25, 1978ರಂದು ಮುಂಬೈನಲ್ಲಿ ಜನಿಸಿದರು. ಅಫ್ತಾಬ್ 'ಮಸ್ತಿ', 'ಗ್ರ್ಯಾಂಡ್ ಮಸ್ತಿ' ಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಆದರೆ, ಅವರು ಬಾಲ ಕಲಾವಿದರಾಗಿ ಸಿನಿ ಕೆರಿಯರ್ ಪ್ರಾರಂಭಿಸಿದರು ಎಂಬುದು ಹಲವರಿಗೆ ತಿಳಿದಿಲ್ಲ. ಒಂಬತ್ತನೇ ವಯಸ್ಸಿನಲ್ಲಿ, ಅಫ್ತಾಬ್ ಅನಿಲ್ ಕಪೂರ್ ಅವರ ಸೂಪರ್‌ಹಿಟ್ ಚಲನಚಿತ್ರ 'ಮಿಸ್ಟರ್ ಇಂಡಿಯಾ'ದಲ್ಲಿ ಮೊದಲು ಕಾಣಿಸಿಕೊಂಡರು.
19 ವರ್ಷ ವಯಸ್ಸಿನವರೆಗೂ ಜಾಹೀರಾತುಗಳಲ್ಲಿ ಅಭಿನಯಿಸಿದರು. ಎಚ್.ಆರ್.ಕಾಲೇಜಿನಲ್ಲಿ ಓದುತ್ತಿದ್ದರು. ಈ ಸಂದರ್ಭದಲ್ಲಿಯೇ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ 'ಮಸ್ತ್' ಚಿತ್ರದಲ್ಲಿ ಊರ್ಮಿಳಾ ಮಾತೋಂಡ್ಕರ್ ಎದುರು ನಟಿಸಲು ಅವಕಾಶ ದೊರೆಯಿತು. ಈ ಚಿತ್ರ ಸೂಪರ್ ಹಿಟ್ ಆಗಿತ್ತು.
'ಮಸ್ತಿ', 'ಪಾಗಲ್ ದೀವಾನಾ', 'ಹಂಗಾಮಾ' ಸೇರಿದಂತೆ ಹಲವು ಚಿತ್ರಗಳಲ್ಲಿ ಅಫ್ತಾಬ್ ತಮ್ಮ ನಟನೆಯ ಮ್ಯಾಜಿಕ್ ತೋರಿಸಿದ್ದಾರೆ. ಮಲ್ಟಿ-ಸ್ಟಾರರ್ ಹಾಸ್ಯ ಚಿತ್ರಗಳಲ್ಲಿ ಅವರು ತಮ್ಮ ವಿಶೇಷ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾದರು.
ಫ್ಲ
ಇದಲ್ಲದೆ, ಈಗ, ಅವರು ಪ್ರಚಾರಕ್ಕೆ ಬರಲು ಇಷ್ಟಪಡುವುದಿಲ್ಲ. ಬಾಕ್ಸ್ ಆಫೀಸ್ ಇಂಡಿಯಾದಲ್ಲಿನ ವರದಿಯ ಪ್ರಕಾರ, ಅಫ್ತಾಬ್ ಶಿವದಾಸನಿ ಇದುವರೆಗೆ ತಮ್ಮ ವೃತ್ತಿಜೀವನದಲ್ಲಿ ಒಟ್ಟು 40 ಫ್ಲಾಪ್ ಚಲನಚಿತ್ರಗಳನ್ನು ನೀಡಿದ್ದಾರೆ.
ಆದರೆ, ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿದರೂ, ಅಫ್ತಾಬ್ ಪ್ರೇಕ್ಷಕರ ಹೃದಯವನ್ನು ಗೆಲ್ಲಲು ವಿಫಲರಾದರು. ಬಾಲಿವುಡ್‌ನಲ್ಲಿ ಅಫ್ತಾಬ್ ಅವರ ವೃತ್ತಿಜೀವನವು ವಿಫಲವಾಯಿತು. ಈಗ ಸಿನಿಮಾದಿಂದ ದೂರ ಉಳಿದಿದ್ದಾರೆ.
2012ರಲ್ಲಿ, ಲಂಡನ್ ಮೂಲದ ಪಂಜಾಬಿ ನಿನ್ ದುಸಾಂಜ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಲಂಡನ್‌ನಲ್ಲಿ ಸ್ಪಲ್ಪ ಸಮಯ ಇದ್ದ ಬಳಿಕ ನಂತರ ಹಾಂಗ್ ಕಾಂಗ್‌ಗೆ ತೆರಳಿದರು. ಜೂನ್ 2014ರಲ್ಲಿ, ನಿನ್ ದುಸಾಂಜ್ ಅವರನ್ನು ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಇದರಲ್ಲಿ ಎರಡೂ ಕುಟುಂಬಗಳು ಭಾಗವಹಿಸಿದ್ದವು. 2020ರಲ್ಲಿ ನೆವಾಹ್ ಎಂಬ ಮಗಳು ಜನಿಸಿದಳು.
1988ರ ಚಲನಚಿತ್ರ 'ಶಾಹೆನ್‌ಶಾ' ದಲ್ಲಿ ಇನ್ಸ್‌ಪೆಕ್ಟರ್ ವಿಜಯ್‌ಕುಮಾರ್ ಶ್ರೀವಾಸ್ತವ್ ಅವರ ಮಗುವಿನ ಪಾತ್ರವನ್ನು ನಿರ್ವಹಿಸಿದರು, ನಂತರ ಚಿತ್ರದ ಉಳಿದ ಭಾಗಕ್ಕೆ ಅಮಿತಾಭ್ ಬಚ್ಚನ್ ನಟಿಸಿದರು. ಬಾಲ ಕಲಾವಿದರಾಗಿ, ಅಫ್ತಾಬ್ ಶಿವದಾಸನಿ ಅವರು 'ಅವ್ವಲ್ ನಂಬರ್', 'ಚಾಲ್ಬಾಜ್' ಮತ್ತು 'ಇನ್ಸಾನಿಯತ್' ಚಿತ್ರಗಳಲ್ಲಿ ಕಾಣಿಸಿಕೊಂಡರು.
ಅಫ್ತಾಬ್ ಇಂದು ಚಲನಚಿತ್ರಗಳಲ್ಲಿ ಕೆಲಸ ಮಾಡದಿದ್ದರೂ, ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಮುಂಬೈನಲ್ಲಿ ತಮ್ಮದೇ ಆದ ಐಷಾರಾಮಿ ಮತ್ತು ಸಂಪೂರ್ಣ ಸುಸಜ್ಜಿತ ಅಪಾರ್ಟ್‌ಮೆಂಟ್ ಹೊಂದಿದ್ದಾರೆ. ಇದರೊಂದಿಗೆ, ಆಡಿ ಆರ್‌ಎಸ್ 5 (1.09 ಕೋಟಿ) ಮತ್ತು ಬಿಎಂಡಬ್ಲ್ಯು ಎಕ್ಸ್6 (1.22 ಕೋಟಿ) ಕಾರುಗಳನ್ನು ಹೊಂದಿದ್ದಾರೆ.
ವರದಿಗಳ ಪ್ರಕಾರ, ಅಫ್ತಾಬ್ ತನ್ನ ಪ್ರೊಡಕ್ಷನ್ ಹೌಸ್ ಮತ್ತು ಇತರ ಕಾರ್ಯಕ್ರಮಗಳ ಮೂಲಕ ವಾರ್ಷಿಕವಾಗಿ 3 ಕೋಟಿ ರೂ. ಗಳಿಸುತ್ತಾರೆ. ಅಫ್ತಾಬ್ ಶಿವದಾಸನಿ ನಿವ್ವಳ ಮೌಲ್ಯ 51 ಕೋಟಿ ರೂ. ಆಗಿದೆ.