ನೃತ್ಯ ಚಿತ್ರೀಕರಣ ಇದ್ದಾಗಲೇ ಪೀರಿಯಡ್ಸ್ ಇರುತ್ತಿತ್ತು ಎಂದ ಸಾಯಿಪಲ್ಲವಿ; 'ಆ ದಿನಗಳ' ಬಗ್ಗೆ ನಟಿ ಹೇಳಿಕೆ ವೈರಲ್

First Published | Mar 13, 2024, 6:04 PM IST

ನೃತ್ಯ ಮಾಡುವಾಗ ಸಾಯಿ ಪಲ್ಲವಿಯ ಎನರ್ಜಿಯನ್ನು ಜೊತೆಯಲ್ಲಿದ್ದವರು ಮ್ಯಾಚ್ ಮಾಡುವುದು ಕಷ್ಟ. ಇಂಥ ಈ ಸಾಯಿಪಲ್ಲವಿ ತಮ್ಮ ಫಿಲ್ಮಿ ಡ್ಯಾನ್ಸ್‌ಗಳ ಬಗ್ಗೆ ವಿಶೇಷ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. 

ತಮ್ಮ ಅದ್ಭುತ ಅಭಿನಯದಿಂದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುವ ನಾಯಕಿಯರು ಅಪರೂಪ. ಇನ್ನು ನಾಯಕಿಗಾಗಿಯೇ ಸಿನಿಮಾ ಮಂದಿರಕ್ಕೆ ಪ್ರೇಕ್ಷಕ ಬರುವುದೂ ಅಪರೂಪ.

ಆದರೆ, ನಟಿ ಸಾಯಿಪಲ್ಲವಿಗೆ ಜನರನ್ನು ಚಿತ್ರಮಂದಿರಕ್ಕೆ ಸೆಳೆವ ಆಕರ್ಷಣೆ ಇದೆ. ಆಕೆ ನಟನೆಯಷ್ಟೇ ಅಲ್ಲ, ಕುಣಿಯಲು ನಿಂತರೆ ಯಾವ ನವಿಲೂ ಇಲ್ಲ- ಹಾಗೆ ಮನಸೋ ಇಚ್ಛೆ ಕುಣಿಯುತ್ತಾರೆ. 

Tap to resize

ನೃತ್ಯ ಮಾಡುವಾಗ ಸಾಯಿ ಪಲ್ಲವಿಯ ಎನರ್ಜಿಯನ್ನು ಜೊತೆಯಲ್ಲಿದ್ದವರು ಮ್ಯಾಚ್ ಮಾಡುವುದು ಕಷ್ಟ. ಇಂಥ ಈ ಸಾಯಿಪಲ್ಲವಿ ತಮ್ಮ ಫಿಲ್ಮಿ ಡ್ಯಾನ್ಸ್‌ಗಳ ಬಗ್ಗೆ ವಿಶೇಷ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. 

ಶಾಮ್ ಸಿಂಗಾ ರಾಯ್ ಚಿತ್ರದ ನೃತ್ಯವೂ ಸೇರಿಸಿ ಚಿತ್ರೀಕರಣದಲ್ಲಿ ತಾವು ಮಾಡಿದ ಕ್ಲಾಸಿಕಲ್ ನೃತ್ಯಗಳೆಲ್ಲವೂ ಕಾಕತಾಳೀಯವಾಗಿ ಪೀರಿಯಡ್ಸ್ ಸಮಯದಲ್ಲೇ ಚಿತ್ರೀಕರಿಸಿದವು ಎಂದು ಸಾಯಿಪಲ್ಲವಿ ಬಹಿರಂಗಪಡಿಸಿದ್ದಾರೆ. 

'ನಾನು ನೃತ್ಯ ಮಾಡಿದ ನಂತರ ದೈಹಿಕವಾಗಿ ಬರಿದಾಗುತ್ತಿದ್ದೆ. ನಾನು ಈ 2-3 ದಿನಗಳನ್ನು ಎಳೆಯಬೇಕಾಗಿತ್ತು. ಮತ್ತು ನಂತರ ಒಂದೇ ಬಾರಿಗೆ ವಿಶ್ರಾಂತಿ ತೆಗೆದುಕೊಳ್ಳಬೇಕಾಗಿತ್ತು. ನೋವು ಕಡಿಮೆ ಮಾಡಲು ನನ್ನ ತಂದೆ ನನ್ನ ಪಾದಗಳಿಗೆ ಮಸಾಜ್ ಮಾಡುತ್ತಿದ್ದರು. ಇದು ನಿಜವಾಗಿಯೂ ಕಷ್ಟದ ಸಂಗತಿಯಾಗಿತ್ತು ' ಎಂದು ನಟಿ ಹೇಳಿದ್ದಾರೆ.

ಸದ್ಯ ಆಕೆಯ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಂಥಾ ನೋವಿನಲ್ಲೂ, ದೈಹಿಕ ವೇದನೆಯ ಸಮಯದಲ್ಲೂ ಸಾಯಿಪಲ್ಲವಿ ಅದ್ಬುತವಾಗಿ ನೃತ್ಯ ಮಾಡಿರುವುದು ಅಚ್ಚರಿಯ ವಿಷಯವಾಗಿದೆ.

ತಮ್ಮ ಭಾವನೆಗಳ ವ್ಯಕ್ತಪಡಿಸುವಿಕೆಯಲ್ಲಾಗಲೀ, ನೃತ್ಯದ ಚಲನೆಯಲ್ಲಾಗಲೀ ಕೊಂಚವೂ ವ್ಯತ್ಯಯವಾಗದಂತೆ ನಟಿ ಪೀರಿಯಡ್ಸ್ ನೋವಿನಲ್ಲೂ ಕುಣಿದಿದ್ದಾರೆ. 

ನಟಿಯು ಕಡೆಯದಾಗಿ 2022ರಲ್ಲಿ ವಿರಾಟ ಪರ್ವಂ ಮತ್ತು ಗಾರ್ಗಿಯಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಅರ ನಟನೆಯ 'ಪುಷ್ಪ 2' ಈ ವರ್ಷ ಬಿಡುಗಡೆಯಾಗಬೇಕಿದೆ. 

ಸಾಮಾನ್ಯವಾಗಿ ಯಾರೂ ಮಾತಾಡಬಯಸದ ವಿಷಯವನ್ನು ಸಾಯಿಪಲ್ಲವಿ ಮಾತಾಡಿದ್ದು, ಈ ಮಾತುಗಳೀಗ ವೈರಲ್ ಆಗಿವೆ ಮತ್ತು ಮೆಚ್ಚುಗೆಗೆ ಪಾತ್ರವಾಗಿವೆ. 

ಈ ಹಿಂದೆ ಸಾಯಿಪಲ್ಲವಿ ಸಿನಿಪಯಣದ ಆರಂಭದಲ್ಲಿ ತಮ್ಮ ಮೊಡವೆಗಳ ವಿಷಯದಲ್ಲಿ ತಾವು ಅನುಭವಿಸಿದ್ದ ಇನ್‌ಸೆಕ್ಯೂರಿಟಿ ಬಗ್ಗೆಯೂ ಮಾತಾಡಿದ್ದರು. 

ಸಾಮಾನ್ಯವಾಗಿ ಹೆಚ್ಚು ಮೇಕಪ್ ಮಾಡದ, ಹೇರ್‌ಸ್ಟೈಲ್ ಬಗ್ಗೆ ತಲೆಕೊಡಿಸಿಕೊಳ್ಳದ- ಟ್ಯಾಲೆಂಟ್‌ನಿಂದಲೇ ಎಲ್ಲರ ಮನ ಗೆದ್ದಿರುವ ಸಾಯಿಪಲ್ಲವಿ- ಜಾರ್ಜಿಯಾದಲ್ಲಿ ಮೆಡಿಕಲ್ ಓದಿದ್ದರು. ಫಾರಿನ್ ಹುಡುಗಿಯರ ಹೊಳೆಯುವ ತ್ವಚೆ ನಡುವೆ ತಮಗೆ ಮಾತ್ರ ಮೊಡವೆಗಳಿದ್ದಿದು ಅವರಿಗೆ ಅಭದ್ರತೆ ತರುತ್ತಿತ್ತು. 

ಈ ಭಯದಲ್ಲೇ ಪ್ರೇಮಂ‌ನಲ್ಲಿ ನಟಿಸಿದರು. ಜನ ತಮ್ಮನ್ನು ಒಪ್ಪದಿದ್ದರೆ ಎಂಬ ಭಯ ಪ್ರೇಮಂ ಉದ್ದಕ್ಕೂ ಅವರಿಗೆ ಕಾಡುತ್ತಿತ್ತಂತೆ. ಯಾವಾಗ ಪ್ರೇಮಂ ನಟನೆಗೆ ಅದ್ಬುತ ರೆಸ್ಪಾನ್ಸ್ ಸಿಕ್ಕಿತೋ ಆಗ ಸಾಯಿಪಲ್ಲವಿ ಮೊಡವೆಗಳ ಬಗ್ಗೆ ಕೂಡಾ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟರಂತೆ. 

ಈಗ ಆಕೆ ಕ್ಲಿಯರ್ ಸ್ಕಿನ್ ಹೊಂದಿದ್ದಾರೆ. ಆದರೆ, ಮೊಡವೆಗಳೇನೇ ಇರಲಿ- ಆತ್ಮವಿಶ್ವಾಸ ಇದ್ದರೆ ಜನರು ಒಪ್ಪುತ್ತಾರೆ ಎಂದು ಅರಿವಾಗಿದೆ ಎನ್ನುತ್ತಾರೆ ನಟಿ

Latest Videos

click me!