ಮದ್ವೆ ಬಗ್ಗೆ ಮೌನ ಮುರಿದ ದಕ್ಷಿಣ ಭಾರತದ ಬ್ಯೂಟಿ ಸಾಯಿ ಪಲ್ಲವಿ!

First Published | Apr 22, 2020, 5:54 PM IST

ಸೌತ್‌ ಇಂಡಿಯಾದ ಸುಂದರಿ ಸಾಯಿ ಪಲ್ಲವಿ ಯಾರಿಗೆ ಗೊತ್ತಿಲ್ಲ ಹೇಳಿ? ತನ್ನ ಸಹಜ ಸೌಂದರ್ಯ, ನಟನೆ ಮತ್ತು ಡ್ಯಾನ್ಸ್‌ ಮೂಲಕ ಫುಲ್‌ ಫೇಮಸ್‌ ಈ ನಟಿ. ತೆಲಗು, ತಮಿಳು ಹಾಗೂ ಮಲೆಯಾಳಿ ಚಿತ್ರಗಳಲ್ಲಿ ನಟಿಸುತ್ತಾರೆ ಈಕೆ.  ಸಾಯಿ ಪಲ್ಲವಿ ಎಂದಿಗೂ ಮದುವೆಯಾಗದಿರಲು ನಿರ್ಧರಿಸಿದ್ದಾರೆ ಎಂಬುದು ಈಗ ಸಖತ್‌ ಸುದ್ದಿಯಾಗಿದೆ. ತಮ್ಮ ಮದುವೆ ಬಗ್ಗೆ ಫ್ಯಾನ್‌ ಒಬ್ಬರು ಕೇಳಿದ ಪ್ರಶ್ನೆಗೆ ನಟಿಯ ಈ ಉತ್ತರ ವೈರಲ್‌ ಆಗಿದೆ.

ಮದುವೆ ಮುಂದೆ ಅಡಚಣೆಯಾಗುತ್ತದೆ ಎಂದುಭಾವಿಸುತ್ತಾರಂತೆ ಸಾಯಿ ಪಲ್ಲವಿ.
ಪ್ರೇಮಂ ಮತ್ತು ಕಾಳಿ ಚಿತ್ರದೊಂದಿಗೆ ಚಿತ್ರೋದ್ಯಮದಲ್ಲಿ ಛಾಪು ಮೂಡಿಸಿರುವ ಸಹಜ ಸುಂದರಿ ಸಾಯಿ ಪಲ್ಲವಿ ಅಭಿಮಾನಿಗಳೊಂದಿಗೆ ಟ್ವಿಟರ್ ಚಾಟ್ ಮಾಡುವಾಗ ತಮ್ಮ ಮದುವೆಯೋಜನೆಗಳನ್ನು ಹಂಚಿಕೊಂಡಿದ್ದಾರೆ.
Tap to resize

ಅವರು ಎಂದಿಗೂ ಮದುವೆಯಾಗದಿರಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ಹೆತ್ತವರೊಂದಿಗೆ ಇರಲು ಮತ್ತು ಅವರನ್ನು ನೋಡಿಕೊಳ್ಳಲು ಮದುವೆ ಒಂದು ಅಡಚಣೆಯಾಗುತ್ತದೆ ಎಂದು ಭಾವಿಸುತ್ತಾರೆ ಸೌತ್‌ಇಂಡಿಯಾದ ಬ್ಯೂಟಿ.
ಅಭಿಮಾನಿಯೊಬ್ಬರು ಅವರ ಮದುವೆಯ ಪ್ಲಾನ್‌ ಹಾಗೂ ಲವ್‌ ಮತ್ತು ಅರೇಂಜ್ಡ್‌ ಮ್ಯಾರೇಜ್‌ ಬಗ್ಗೆ ನಿಲುವನ್ನು ಕೇಳಿದಾಗ ನಟಿ ಹೀಗೆ ಟ್ವೀಟ್‌ ಮಾಡಿದ್ದಾರೆ.
ಇನ್ನೊಬ್ಬ ಅಭಿಮಾನಿ ಅವರ ಒಲವಿನ ವೃತ್ತಿಬಗ್ಗೆ ಕೇಳಿದ್ದರು - ಡಾಕ್ಟರ್‌ ಮತ್ತು ಸಿನಿಮಾ ನಡುವೆ ಆಯ್ಕೆ ಮಾಡುವುದು ತುಂಬಾ ಕಷ್ಟ, ಆದರೆ ವೈದ್ಯೆರಾಗಿರುವುದು ಅತ್ಯಂತ ತೃಪ್ತಿಕರವಾದ ಕೆಲಸ ಎಂದು ಸಾಯಿ ಉತ್ತರಿಸಿದರು.
ಸಸ್ಯಾಹಾರಮತ್ತು 'ರಸಮ್' ಫೆವರೇಟ್‌ ಡಿಶ್‌ಎಂದು ಬಹಿರಂಗಪಡಿಸಿದ್ದಾರೆ ಪಲ್ಲವಿ.
ಪಾತ್ರಗಳ ಬಗ್ಗೆ ತುಂಬಾ ಚೂಸಿ ಹಾಗೂ ಮೇಕಪ್‌ಗೆ ಯಾವಾಗಲೂ ನೋ ಎನ್ನುತ್ತಾರೆ ಸಿನಿ ರಸಿಕರ ಹಾರ್ಟ್‌ಥ್ರೋಬ್‌ ಸಾಯಿ.
ಅಜಯ್ ಭೂಪತಿ ನಿರ್ದೇಶನದ 'RX100'ಫಿಲ್ಮಂನಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ.
ಪ್ರೇಮಂ ಮತ್ತು ಫಿದಾ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಎರಡು ಫಿಲ್ಮ್‌ಫೇರ್ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ.
ಸೌತ್‌ನ ಮಾಧುರಿ ಧಿಕ್ಷೀತ್‌ ಎಂದೇ ಫೇಮಸ್‌ ಆಗಿರುವ ಇವರು ಟ್ರೈನ್ಡ್‌ ಡ್ಯಾನ್ಸರ್‌ ಅಲ್ಲವಂತೆ.

Latest Videos

click me!