ಪತನವಾಗುವಾಗ ವಿಮಾನದೊಳಗಿನ ಪರಿಸ್ಥಿತಿ ಹೇಗಿರುತ್ತೆ? ಎದೆ ಝಲ್ ಅನ್ನೋ ಸಿನಿಮಾ ನೋಡಿದ್ದೀರಾ?

Published : Jun 12, 2025, 03:27 PM IST

ಜೆಟ್‌ಏರ್‌ವೇಸ್ ಫ್ಲೈಟ್ 9W-555 ವಿಮಾನದ ಘಟನೆಯಿಂದ ಪ್ರೇರಿತವಾಗಿದೆ. ಪ್ರತಿಕೂಲ ಹವಾಮಾನದಲ್ಲಿ ವಿಮಾನವನ್ನು ಲ್ಯಾಂಡ್ ಮಾಡಲು ಪೈಲಟ್ ಹೆಣಗಾಡುವುದನ್ನು ಚಿತ್ರ ತೋರಿಸುತ್ತದೆ. ಪ್ರಯಾಣಿಕರ ಭಯ ಮತ್ತು ಪೈಲಟ್‌ಗಳ ಮೇಲಿನ ಒತ್ತಡವನ್ನು ಚಿತ್ರ ಬಿಂಬಿಸುತ್ತದೆ.

PREV
17

ಗುಜರಾತಿನ ಅಹಮದಾಬಾದ್ ಇಂಟರ್‌ನ್ಯಾಷನಲ್ ಏರ್ಪೋಟ್ ಸಮೀಪದಲ್ಲಿಯೇ 242 ಪ್ರಯಾಣಿಕರನ್ನು ಹೊತ್ತಿದ್ದ ವಿಮಾನ ಪತನವಾಗಿದೆ. ಕಳೆದ ಆರೇಳು ತಿಂಗಳ ಹಿಂದೆಯಷ್ಟೇ ವಿದೇಶದಲ್ಲಿ ಸರಣಿ ವಿಮಾನಗಳು ತಾಂತ್ರಿಕ ಕಾರಣಗಳಿಂದ ಪತನಗೊಂಡಿವೆ. ವಿಮಾನ ಪತನಗಳು ಹೇಗೆ ಪತನವಾಗುತ್ತವೆ ಎಂಬುದನ್ನು ತೋರಿಸುವ ಹಲವು ಸಿನಿಮಾಗಳಿವೆ.

27

2022ರಲ್ಲಿ ಬಿಡುಗಡೆಯಾದ ಅಜಯ್ ದೇವಗನ್, ರಕುಲ್ ಪ್ರೀತ್ ಸಿಂಗ್ ಮತ್ತು ಅಮಿತಾಬ್‌ ಬಚ್ಚನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ರನ್‌ವೇ 34 ಸಿನಿಮಾ ವಿಮಾನ ಪ್ರಯಾಣದ ಕುರಿತ ಕಥೆಯನ್ನು ಹೊಂದಿದೆ. ಅಜಯ್ ದೇವಗನ್ ಮತ್ತು ರಕುಲ್ ಪ್ರೀತ್ ಸಿಂಗ್ ಚಿತ್ರದಲ್ಲಿ ಪೈಲಟ್‌ಗಳಾಗಿ ನಟಿಸಿದ್ದಾರೆ.

37

ರನ್‌ವೇ 34 ಸಿನಿಮಾ ಆಗಸ್ಟ್ 17, 2015 ರಂದು ದೋಹಾದಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದ ಜೆಟ್‌ಏರ್‌ವೇಸ್ ಫ್ಲೈಟ್ 9W-555 ವಿಮಾನದ ಘಟನೆಯಿಂದ ಪ್ರೇರಿತವಾಗಿದೆ. ಸಿನಿಮಾದಲ್ಲಿಯೂ ವಿಮಾನ ದುಬೈನಿಂದ ಕೊಚ್ಚಿಗೆ ಪ್ರಯಾಣ ಬೆಳೆಸುತ್ತಿರುತ್ತದೆ. ಆದರೆ ಕೊಚ್ಚಿಯಲ್ಲಿ ವಾಯುಭಾರ ಕುಸಿತದಿಂದ ಭಾರೀ ಮಳೆಯಾಗುತ್ತಿರುತ್ತದೆ.

47

ಈ ಹಿನ್ನೆಲೆ ಮುಂಜಾಗ್ರತ ಕ್ರಮವಾಗಿ ಕೊಚ್ಚಿಯಲ್ಲಿ ಲ್ಯಾಂಡ್‌ ಆಗಬೇಕಿರುವ ವಿಮಾನಗಳನ್ನು ಬೆಂಗಳೂರಿಗೆ ತಿರುಗಿಸಲಾಗಿರುತ್ತದೆ. ಆದ್ರೆ ಈ ಮಾಹಿತಿ ತಿಳಿಯದ ಪೈಲಟ್ ವಿಮಾನವನ್ನು ತ್ರಿವೇಂದ್ರಂನತ್ತ ತೆಗೆದುಕೊಂಡು ಹೋಗುತ್ತಾರೆ. ಆದರೆ ಇಲ್ಲಿ ಕೊಚ್ಚಿಗಿಂತ ಕೆಟ್ಟ ಹವಾಮಾನ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ.

57

ತ್ರಿವೇಂದ್ರಂನಿಂದ ಬೆಂಗಳೂರಿಗೆ ಹಿಂದಿರುಗಲು ವಿಮಾನದಲ್ಲಿ ಸಾಕಷ್ಟು ಇಂಧನವಿಲ್ಲದ ಕಾರಣ, ಪ್ರತಿಕೂಲ ಹವಾಮಾನದಲ್ಲಿಯೂ ವಿಮಾನ ಲ್ಯಾಂಡ್ ಮಾಡಲು ಪೈಲಟ್ ನಿರ್ಧರಿಸುತ್ತಾನೆ. 

67

ಈ ವೇಳೆ ವಿಮಾನದಲ್ಲಿದ್ದ ಸಿಬ್ಬಂದಿ ಸೇರಿದಂತೆ ಪ್ರಯಾಣಿಕರೆಲ್ಲರೂ ಭಯಗೊಂಡಿರುತ್ತಾರೆ. ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗುತ್ತಾ ಅನ್ನೋದು ಚಿತ್ರದ ಕತೆ.

77

ಇನ್ನು ಅಮಿತಾಬ್ ಬಚ್ಚನ್ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. 7 ರೇಟಿಂಗ್ ಪಡೆದಿರುವ ಈ ಸಿನಿಮಾವನ್ನು ಅಮೆಜಾನ್ ಪ್ರೈಮ್ ನಲ್ಲಿ ವೀಕ್ಷಿಸಬಹುದಾಗಿದೆ. ಚಿತ್ರದಲ್ಲಿ ವಿಮಾನ ದುರಂತಗಳು ಹೇಗೆ ಸಂಭವಿಸುತ್ತವೆ? ಪೈಲಟ್‌ಗಳ ಮೇಲೆ ಎಷ್ಟು ಒತ್ತಡವಿರುತ್ತೆ ಎಂಬುದನ್ನು ತೋರಿಸಲಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories