ಬಹುಭಾಷಾ ನಟಿ ಪೂಜಾ ಹೆಗ್ಡೆ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಬ್ಯುಸಿಯಾಗಿರುವ ನಟಿ ಪೂಜಾ ಹೆಗ್ಡೆ ಇತ್ತೀಚಿಗಿನ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸೋಲು ಕಂಡಿವೆ. ಕರಾವಳಿ ಸುಂದರಿ ನಟಿಸಿರುವ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಫ್ಲಾಪ್ ಆಗಿವೆ.
2020ರಲ್ಲಿ ಬಂದ ಅಲಾ ವೈಕುಂಠಪುರಂಲೋ ಸಿನಿಮಾ ಬಳಿಕ ಬಂದ ಯಾವ ಸಿನಿಮಾಗಳು ಸಹ ಸಕ್ಸಸ್ ಕಂಡಿಲ್ಲ. ಹಾಗಾಗಿ ಪೂಜಾ ದೊಡ್ಡ ಹಿಟ್‌ಗಾಗಿ ಕಾಯುತ್ತಿದ್ದಾರೆ. ತೆಲುಗು ಮತ್ತು ತಮಿಳಿನಲ್ಲಿ ಅನೇಕ ಸಿನಿಮಾಗಳನ್ನು ಮಾಡಿರುವ ಪೂಜಾ ಸದ್ಯ ಸಲ್ಮಾನ್ ಖಾನ್ ಜೊತೆ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಾಮಾದಲ್ಲಿ ನಟಿಸುತ್ತಿದ್ದಾರೆ.
ಸಾಲು ಸಾಲು ಸೋಲುಕಂಡ ಕಾರಣ ಪೂಜಾ ಹೆಗ್ಡೆ ತನ್ನ ಲುಕ್ ಬದಲಾಯಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಪೂಜಾ ಅವರಿಗೆ ತನ್ನ ಮೂಗು ಮೈನಸ್ ಆಗಿದೆಯಂತೆ. ಹಾಗಾಗಿ ಪೂಜಾ ತನ್ನ ಮೂಗಿನ ಸರ್ಜರಿಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಮೂಗಿನ ಸರ್ಜರಿ ಬಳಿಕವಾದರೂ ಪೂಜಾ ಸಕ್ಸಸ್ ಟ್ರ್ಯಾಕ್‌ಗೆ ಮರಳುತ್ತಾರಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಅಂದಹಾಗೆ ಸಾಕಷ್ಟು ನಟಿಯರು ಸರ್ಜರಿಗೆ ಒಳಗಾಗಿದ್ದಾರೆ. ತನ್ನ ದೇಹದ ಯಾವ ಭಾಗ ಚೆನ್ನಾಗಿ ಇರುವುದಿಲ್ಲವೋ, ಅಥವಾ ಲುಕ್ ಬದಲಾಯಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿ ಮೊರೆಹೋಗುತ್ತಾರೆ. ಆದರೆ ಸುಂದರವಾಗಿಯೇ ಇದ್ದ ಕರಾವಳಿ ಸುಂದರಿ ಸರ್ಜರಿ ಮಾಡಿಸಿಕೊಳ್ಳುವುದು ಅಚ್ಚರಿ ಮೂಡಿಸಿದೆ.
ಸಾಲು ಸಾಲು ಸಿನಿಮಾಗಳ ಸೋಲಿನಿಂದ ಪೂಜಾ ಹೆಗ್ಡೆ ಐರನ್ ಲೆಗ್ ಎನ್ನುವ ಟ್ಯಾಗ್ ಲೈನ್ ಪಡೆದಿದ್ದಾರೆ. ಹಾಗಾಗಿ ಈ ಟ್ಯಾಗ್ ತೆಗೆದಾಕಿ ಲಕ್ಕಿ ಹೀರೋಯಿನ್ ಎನ್ನುವ ಪಟ್ಟ ಪಡೆಯಲು ಸಜ್ಜಾಗುತ್ತಿದ್ದಾರೆ. ಹಾಗಾಗಿಯೇ ಮೂಗಿನ ಸರ್ಜರಿ ಮಾಡಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಪೂಜಾ ಹೆಗ್ಡೆ ಎಲ್ಲಿಯೂ ಬಹಿರಂಗ ಪಡಿಸಿಲ್ಲ.
ಪೂಜಾ ಹೆಗ್ಡೆ ಸದ್ಯ ಸಲ್ಮಾನ್ ಖಾನ್ ಜೊತೆ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾ ಜೊತೆಗೆ ಸರ್ಕಸ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಇನ್ನು ತೆಲುಗಿನಲ್ಲಿ ಮತ್ತೆ ಮಹೇಶ್ ಬಾಬು ಜೊತೆ ನಟಿಸಲು ಸಜ್ಜಾಗಿದ್ದಾರೆ. ಮಹೇಶ್ ಬಾಬು ಮುಂದಿನ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ. ಈಗಾಗಲೇ ಮಹೇಶ್ ಬಾಬು ಜೊತೆ ಮಹರ್ಷಿ ಸಿನಿಮಾದಲ್ಲಿ ಮಿಂಚಿದ್ದರು.