ಬಹುಕೋಟಿ ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಹಲವು ಬಾರಿ ನೋಟಿಸ್ ಕೊಟ್ಟರೂ ವಿಕ್ರಾಂತ್ ರೋಣ ಚೆಲುವೆ ಮಾತ್ರ ವಿಚಾರಣೆಗೆ ಹಾಜರಾಗಿಲ್ಲ. ಬರೋಬ್ಬರಿ 4 ಬಾರಿ ನಟಿ ವಿಚಾರಣೆಯನ್ನು ಸ್ಕಿಪ್ ಮಾಡಿ ಇಡಿ ಕೋಪಕ್ಕೆ ತುತ್ತಾಗಿದ್ದಾರೆ.
29
ಸುಕೇಶ್ ಚಂದ್ರಶೇಖರ್ ಬಹುಕೋಟಿ ವಂಚನೆ ಪ್ರಕರಣದಲ್ಲಿ ಶ್ರೀಲಂಕಾ ಸುಂದರಿ ಜಾಕ್ವೆಲಿನ್ ಫರ್ನಾಂಡಿಸ್(Jacqueline Fernandez) ಪ್ರಮುಖ ಸಾಕ್ಷಿ ಎನ್ನಲಾಗಿದೆ. ಹಲವು ಬಾರಿ ವಿಚಾರಣೆಗೆ ಕರೆದು ನೋಟಿಸ್ ಕಳುಹಿಸಿದರೂ ನಟಿ ಮಾತ್ರ ಬ್ಯುಸಿ ಇದ್ದಾರೆ.
39
ಜಾಕಿ 4ನೇ ನೋಟಿಸ್ ಪ್ರಕಾರ ಅ.18ರಂದು 10ರಿಂದ 11 ಗಂಟೆ ನಡುವೆ ವಿಚಾರಣೆ ಹಾಜರಾಗಬೇಕಿತ್ತು. ಆದರೆ ನಟಿ ವಿಚಾರಣೆಗೆ ಹಾಜರಾಗಿಲ್ಲ. ಆಗಸ್ಟ್ 30ರಂದು ನಟಿ ಈ ಕೇಸ್‌ಗೆ ಸಂಬಂಧಿಸಿ ಇಡಿಗೆ ಹೇಳಿಕೆ ದಾಖಲಿಸಿದ್ದರು.
49
ಅಂದಿನಿಂದ ಜಾಕ್ವೆಲಿನ್ ಸೆಪ್ಟೆಂಬರ್ 25, ಅಕ್ಟೋಬರ್ 15, 16 ಮತ್ತು 18ರಂದು ಸಮನ್ಸ್ ಪ್ರಕಾರ ವಿಚಾರಣೆಗೆ ಹಾಜರಾಗಿಲ್ಲ. ಮೂಲಗಳ ಪ್ರಕಾರ, ನಟಿ ತನ್ನ ಗೈರಿಗೆ ಕಾರಣದಲ್ಲಿ ವೃತ್ತಿಪರ ಬದ್ಧತೆಗಳ ಕಾರಣವನ್ನು ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.
59
ನಟಿಯ ಪುನರಾವರ್ತಿತ ಗೈರಿನ ಸಂಬಂಧ ಜಾರಿ ನಿರ್ದೇಶನಾಲಯವು ಈಗ ಕೇಸ್ ಕೋರ್ಟ್‌ಗೆ ಸ್ಥಳಾಂತರಿಸಲು ಪರಿಗಣಿಸುತ್ತಿದೆ ಎನ್ನಲಾಗಿದೆ.
ಈ ಹಿಂದೆ ಆಗಸ್ಟ್ 30 ರಂದು ದೆಹಲಿಯಲ್ಲಿ ಜಾರಿ ನಿರ್ದೇಶನಾಲಯವು ಸುಮಾರು ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದಾಗ ದಂಧೆಗೆ ಸಿಕ್ಕಿಕೊಂಡಿದ್ದೇನೆ ಎಂದು ಹೇಳಿದ್ದರು. ನಟಿ ನಿರ್ಣಾಯಕ ವಿವರಗಳನ್ನು ಇಡಿ ಅಧಿಕಾರಿಗಳೊಂದಿಗೆ ಹಂಚಿಕೊಂಡರು.
79
ಗಮನಾರ್ಹವಾಗಿ ಚಂದ್ರಶೇಖರ್ ಜಾಕ್ವೆಲಿನ್ ಗೆ ಚಾಕೊಲೇಟ್ ಮತ್ತು ಹೂವುಗಳನ್ನು ಕಳುಹಿಸುತ್ತಿದ್ದರು. ಸಂವಹನಕ್ಕಾಗಿ ಸ್ಪೂಫಿಂಗ್ ತಂತ್ರಜ್ಞಾನವನ್ನು ಬಳಸುತ್ತಿದ್ದರು. ಅವರ ನೈಜ ಗುರುತನ್ನು ಮರೆಮಾಚಿದರು. ಜಾಕ್ವೆಲಿನ್ ತನ್ನ ಗೆಳತಿ ಮತ್ತು ಪಾಲುದಾರ ಲೀನಾ ಪೌಲ್ ಮೂಲಕ ಸುಕೇಶ್ ಚಂದ್ರಶೇಖರ್ ಅವರ ರಾಕೆಟ್‌ಗೆ ಬಲಿಯಾಗಿದ್ದಾರೆ ಎಂದಿದ್ದಾರೆ.
89
ಸುಕೇಶ್ ಜೈಲಿನೊಳಗಿಂದ ತನ್ನ ವಂಚನೆ ರಾಕೆಟ್ ನಡೆಸುತ್ತಿದ್ದ. 200 ಕೋಟಿ ರೂಪಾಯಿಗಳನ್ನು ಉದ್ಯಮಿಯೊಬ್ಬರಿಂದ ಸುಲಿಗೆ ಮಾಡಿದ. ಏತನ್ಮಧ್ಯೆ, ಈ ಪ್ರಕರಣದಲ್ಲಿ ಜಾಕ್ವೆಲಿನ್ ಅವರ ಹೆಸರು ಮಾತ್ರವಲ್ಲ. ಇತ್ತೀಚೆಗೆ, ನೋರಾ ಫತೇಹಿ ಕೂಡ ಈ ಪ್ರಕರಣದಲ್ಲಿ ಎನ್ಸಿಬಿಯಿಂದ ಸಮನ್ಸ್ ಪಡೆದರು.
99
ನಂತರ ಅವರು ಅಕ್ಟೋಬರ್ 14 ರಂದು ದೆಹಲಿಯ ಇಡಿ ಕಚೇರಿಗೆ ಹಾಜರಾದರು. ಇದನ್ನು ಪೋಸ್ಟ್ ಮಾಡಿ, ನಟಿಯ ಪರವಾಗಿ, ಆಕೆಯ ವಕ್ತಾರರು ನೋರಾ ಯಾವುದೇ ಮನಿ ಲಾಂಡರಿಂಗ್ ಚಟುವಟಿಕೆಯ ಭಾಗವಾಗಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಬರೋಬ್ಬರಿ 8 ಗಂಟೆಗಳ ಕಾಲ ನೋರಾ ವಿಚಾರಣೆ ನಡೆದಿತ್ತು.