ಒಂದೇ ಪಾರ್ಟಿ, ಹೊಸ ಪಾರ್ಟನರ್ಸ್ ಜೊತೆ ಎಕ್ಸ್‌ ಕಪಲ್‌ Hrithik -Sussanne

Published : Apr 07, 2022, 05:23 PM IST

ಹೃತಿಕ್ ರೋಷನ್ ( Hrithik Roshan) ಮತ್ತು ಅವರ ಮಾಜಿ ಪತ್ನಿ ಸುಸೇನ್‌ ಖಾನ್ (Sussanne Khan)  ಈಗ ತಮ್ಮ ಜೀವನದಲ್ಲಿ ಮೂವ್‌ ಆನ್‌ ಆಗಿದ್ದಾರೆ. ಇಬ್ಬರ ಹೃದಯವೂ ಈಗ ಬೇರೆಯವರಿಗಾಗಿ ಮಿಡಿಯುತ್ತಿದೆ. ನಟನ ಹೆಸರು ಸಬಾ ಆಜಾದ್ (Saba Azad) ಜೊತೆ ಕೇಳಿಬರುತ್ತಿದೆ. ಅದೇ ಸಮಯದಲ್ಲಿ, ಸುಸೇನ್‌ ಜೀವನದಲ್ಲಿ ಆರ್ಸ್ಲಾನ್ ಗೋನಿ (Arslan Goni) ಬಂದಿದ್ದಾರೆ. ಹೃತಿಕ್ ರೋಷನ್‌ ಮತ್ತು ಸುಸೇನ್‌ ಇಬ್ಬರೂ ಪರಸ್ಪರ ಸಂತೋಷವಾಗಿರುವಂತೆ ತೋರುತ್ತಿದೆ. ಒಂದೇ ಪಾರ್ಟಿಯಲ್ಲಿ ಇಬ್ಬರೂ ತಮ್ಮ ತಮ್ಮ ಹೊಸ ಪಾರ್ಟ್‌ನರ್‌ ಜೊತೆ ಎಂಜಾಯ್‌ ಮಾಡುತ್ತಿರುವ ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. 

PREV
16
 ಒಂದೇ ಪಾರ್ಟಿ,  ಹೊಸ ಪಾರ್ಟನರ್ಸ್ ಜೊತೆ ಎಕ್ಸ್‌ ಕಪಲ್‌ Hrithik -Sussanne

ಸುಸೇನ್ ಖಾನ್ ಗೋವಾದಲ್ಲಿ ಪಾರ್ಟಿಯೊಂದನ್ನು ಆಯೋಜಿಸಿದ್ದರು. ಇದರಲ್ಲಿ ಹೃತಿಕ್ ರೋಷನ್ (Hritihik Roshan) ತನ್ನ ಪ್ರಸ್ತುತ ಗರ್ಲ್‌ಫ್ರೆಂಡ್‌ (Girl Friend) ಸಾಬಾ ಆಜಾದ್ ಜೊತೆ ಆಗಮಿಸಿದ್ದರು. ಇದಲ್ಲದೆ, ಅವರ ಸಹೋದರಿ ಫರಾ ಅಲಿ ಖಾನ್, ಪೂಜಾ ಬೇಡಿ (Pooja Bedi) ಸೇರಿದಂತೆ ಅನೇಕ ಸೆಲಬ್ರೆಟಿಗಳು ಈ ಪಾರ್ಟಿಗೆ ಆಗಮಿಸಿದರು.


 

26

ಪಾರ್ಟಿಗೆ ನಾವೆಲ್ಲರೂ ತಲುಪಿದೆವು. ಈ ಕೆಫೆಯನ್ನು ಸುಸೇನ್ ವಿನ್ಯಾಸಗೊಳಿಸಿದ್ದಾರೆ ಎಂದು ಹೇಳಿದರು ಪೂಜಾ ಬೇಡಿ. ಫರ್ಹಾ ಅಲಿ ಖಾನ್ ಮತ್ತು ಪೂಜಾ ಬೇಡಿ ಅವರು ಪಾರ್ಟಿಯ ಕೆಲವು ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. 

36

ಈ ಹಿಂದೆ ಪೂಜಾ ಬೇಡಿ ಪಾರ್ಟಿ ನಡೆಸಿಕೊಟ್ಟಿದ್ದಾರೆ ಎಂದು ಹೇಳಲಾಗಿತ್ತು. ಆದರೆ ETimes ನೊಂದಿಗಿನ ಸಂಭಾಷಣೆಯಲ್ಲಿ, ಅವರು ಅದನ್ನು ನಿರಾಕರಿಸಿದರು, ಪಂಜಿಮ್‌ನಲ್ಲಿ ಕೆಫೆಯನ್ನು ಪ್ರಾರಂಭಿಸಲು ಸುಸೇನ್‌ ಪಾರ್ಟಿಯನ್ನು ಆಯೋಜಿಸಿದ್ದಾರೆ ಎಂದು ಹೇಳಿದರು.

46

ಪಾರ್ಟಿಯ ಫೋಟೋಗಳು ಸಖತ್‌  ವೈರಲ್ ಆಗುತ್ತಿವೆ. ಈ ಫೋಟೋಗಳನ್ನು ನೋಡಿದಾಗ ಹೃತಿಕ್ ಸಬಾ ಜೊತೆ ಡೇಟಿಂಗ್ ಮಾಡುತ್ತಿರುವುದು ದೃಢಪಟ್ಟಿದೆ. ಅದೇ ಸಮಯದಲ್ಲಿ, ಸುಸೇನ್ ಜೀವನದಲ್ಲಿ ಆರ್ಸ್ಲಾನ್ ಗೋನಿ ಬಂದಿರುವುದು ಸಹ ಕನ್ಫರ್ಮ್‌ ಆಗಿದೆ.

56

ಮಂಗಳವಾರ ಮೊದಲು ವಿಮಾನ ನಿಲ್ದಾಣದಲ್ಲಿ (Airport) ಹೃತಿಕ್ ಸಬಾ ಅವರ ಕೈ ಹಿಡಿದು ಕಾಣಿಸಿಕೊಂಡಿದ್ದರು. ಸ್ವಲ್ಪ ಹೊತ್ತಿನ ನಂತರ ಸುಸೇನ್ ಖಾನ್‌   ಅರ್ಸ್ಲಾನ್ ಗೋಣಿಯ ಕೈ ಹಿಡಿದು ವಿಮಾನ ನಿಲ್ದಾಣದಿಂದ ಹೊರ ಬಂದರು. ಆದರೆ, ಹೃತಿಕ್ ಅಥವಾ ಸುಸೇನ್ ತಮ್ಮ ಹೊಸ ಸಂಬಂಧದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. 

66

2014 ರಲ್ಲಿ ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ ವಿಚ್ಛೇದನ ಪಡೆದರು. ಆದರೆ ಅವರು ಇನ್ನೂ ಕುಟುಂಬದಂತೆ ಬದುಕುತ್ತಾರೆ. ಇಬ್ಬರೂ ತಮ್ಮ ಮಕ್ಕಳಾದ ಹೃದಯಾನ್ ಮತ್ತು ಹರೇನ್ ಅವರನ್ನು ಒಟ್ಟಿಗೆ ಬೆಳೆಸುತ್ತಿದ್ದಾರೆ. ಅನೇಕ ಬಾರಿ, ಮಕ್ಕಳೊಂದಿಗೆ, ಅವರು ತಮ್ಮ ರಜೆಯನ್ನು ಆನಂದಿಸಲು ದೇಶದಿಂದ ಹೊರ ಹೋಗುತ್ತಾರೆ.

Read more Photos on
click me!

Recommended Stories