ಕನ್ನಡದ ನಟ ಕಂ ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಒಟ್ಟಿಗೆ ಬಂದು ಡಿವೋರ್ಸ್ ಪಡೆದುಕೊಂಡಿದ್ದರು. ನಂತರ ಇಬ್ಬರೂ ಪ್ರೆಸ್ ಮೀಟ್ ಮಾಡಿ ಪರಸ್ಪರ ಒಪ್ಪಿಕೊಂಡೇ ಡಿವೋರ್ಸ್ ಕೊಡುವುದಾಗಿ ಹೇಳಿದ್ದರು. ಇದೀಗ ದಕ್ಷಿಣ ಭಾರತ ಚಿತ್ರರಂಗದ ಮತ್ತೊಂದು ಜೋಡಿ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ. ಜಿ.ವಿ. ಪ್ರಕಾಶ್ ಮತ್ತು ಸೈಂಧವಿ ಇದೀಗ ಒಂದೇ ಕಾರಿನಲ್ಲಿ ಬಂದು ವಿಚ್ಛೇದನ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಸಿನಿಮಾ ನಟರ ಡಿವೋರ್ಸ್ ದಿನೇ ದಿನೇ ಜಾಸ್ತಿಯಾಗುತ್ತಿದೆ. ತಮಿಳಲ್ಲಿ ಧನುಷ್, ರವಿ ಮೋಹನ್, ಎ.ಆರ್. ರೆಹಮಾನ್ ಡಿವೋರ್ಸ್ ಅನೌನ್ಸ್ ಮಾಡಿದ್ದರು. ಈಗ ಜೀವಿ ಪ್ರಕಾಶ್, ಸೈಂಧವಿ ಕೂಡ ಡಿವೋರ್ಸ್ ತಗೋತಾರೆ ಅಂತ ಹೇಳಿ ಶಾಕ್ ಕೊಟ್ಟಿದ್ದಾರೆ.
ಸಿನಿಮಾ ನಟರಿಗೆ ಪೈಪೋಟಿ ಕೊಡುವ ಹಾಗೆ ಕ್ರಿಕೆಟ್ ಪ್ಲೇಯರ್ಸ್ ಕೂಡ ಸೀರಿಯಲ್ ಆಗಿ ಡಿವೋರ್ಸ್ ಅನೌನ್ಸ್ ಮಾಡ್ತಿದ್ದಾರೆ. ಲಾಸ್ಟ್ ಇಯರ್ ಹಾರ್ದಿಕ್ ಪಾಂಡ್ಯ, ನಟಾಷಾ ಜೊತೆ ಡಿವೋರ್ಸ್ ಅನೌನ್ಸ್ ಮಾಡಿದ್ರು. ಈಗ ಕ್ರಿಕೆಟರ್ ಯುಜ್ವೇಂದ್ರ ಚಾಹಲ್ ತನ್ನ ಹೆಂಡತಿ ಧನಶ್ರೀ ವರ್ಮಾ ಜೊತೆ ಡಿವೋರ್ಸ್ ತಗೋತಿದ್ದಾರೆ.
ಇಂಥ ಡಿವೋರ್ಸ್ ಸುದ್ದಿ ಕೇಳಿ ಫ್ಯಾನ್ಸ್ ಶಾಕ್ ಆಗ್ತಿದ್ದಾರೆ. ಜೀವಿ, ಸೈಂಧವಿ ಕೋರ್ಟ್‌ನಲ್ಲಿ ಡಿವೋರ್ಸ್‌ಗೆ ಅಪ್ಲೈ ಮಾಡಿದ್ದಾರೆ (Sainthavi divorce case). 2013ರಲ್ಲಿ ಮ್ಯೂಸಿಕ್ ಡೈರೆಕ್ಟರ್ ಜೀವಿ ಪ್ರಕಾಶ್, ಸೈಂಧವಿ ಪ್ರೀತಿಸಿ ಮದುವೆ ಮಾಡಿಕೊಂಡ್ರು. ತನ್ನ ಚಿಕ್ಕಂದಿನ ಗೆಳತಿನೇ ಜೀವಿ ಪ್ರಕಾಶ್ ಮದುವೆ ಮಾಡಿಕೊಂಡಿದ್ದು. ಇವರಿಗೆ ಅನ್ವಿ ಅನ್ನೋ ಮಗಳು ಕೂಡ ಇದ್ದಾಳೆ.
ಮದುವೆಯಾಗಿ 11 ವರ್ಷ ಆದ್ಮೇಲೆ ಇಬ್ಬರೂ ಬೇರೆ ಆಗ್ತಿದ್ದೀವಿ ಅಂತ ಲಾಸ್ಟ್ ಇಯರ್ ಮೇ 13ಕ್ಕೆ ಅನೌನ್ಸ್ ಮಾಡಿದ್ರು. ಹತ್ತತ್ರ 10 ತಿಂಗಳಿಂದ ಇಬ್ಬರೂ ದೂರ ದೂರ ಇದ್ದಾರೆ. ಆದ್ರೆ ಮಕ್ಕಳ ವಿಚಾರದಲ್ಲಿ, ಪ್ರೊಫೆಷನಲ್ ಫ್ರೆಂಡ್‌ಶಿಪ್ ಕಂಟಿನ್ಯೂ ಆಗಿದೆ. ಜೀವಿ ಪ್ರಕಾಶ್ ಮ್ಯೂಸಿಕ್ ಕಚೇರಿಯಲ್ಲಿ ಸೈಂಧವಿ ಹಾಡು ಹಾಡಿದ್ರು. ಇದು ತುಂಬಾನೇ ಆಶ್ಚರ್ಯ ಕೊಟ್ಟಿತ್ತು. ಈಗ ಇಬ್ಬರೂ ಚೆನ್ನೈ ಫ್ಯಾಮಿಲಿ ಕೋರ್ಟ್‌ನಲ್ಲಿ ಡಿವೋರ್ಸ್‌ಗೆ ಅಪ್ಲೈ ಮಾಡಿದ್ದಾರೆ (Sainthavi divorce case).
ಚೆನ್ನೈ ಫಸ್ಟ್ ಅಡಿಷನಲ್ ಫ್ಯಾಮಿಲಿ ಕೋರ್ಟ್ ಜಡ್ಜ್ ಮುಂದೆ ಜೀವಿ ಪ್ರಕಾಶ್, ಸೈಂಧವಿ ಇಬ್ಬರೂ ಹಾಜರಾದ್ರು. ಇಬ್ಬರೂ ಇಷ್ಟಪೂರ್ವಕವಾಗಿ ಬೇರೆ ಆಗ್ತಿದ್ದೀವಿ ಅಂತ ಹೇಳಿದ್ದಾರೆ. ಇದರಿಂದ ಡಿವೋರ್ಸ್ ಕೇಸ್ ಮುಂದಕ್ಕೆ ಹೋಯ್ತು. ಡಿವೋರ್ಸ್ ಪಿಟಿಷನ್ ಹಾಕಿದ್ಮೇಲೆ ಇಬ್ಬರೂ ಸೇರಿ ಒಂದೇ ಕಾರಲ್ಲಿ ಹೋಗಿದ್ದು ಎಲ್ಲರಿಗೂ ಆಶ್ಚರ್ಯ ತರಿಸಿತು.
ಬೇಗ ಡಿವೋರ್ಸ್ ಆಗ್ಬೇಕು ಅಂತಾನೇ ಇಷ್ಟು ತಿಂಗಳುಗಳಿಂದ ಇಬ್ಬರೂ ಬೇರೆ ಬೇರೆಯಾಗಿ ಇದ್ದಾರೆ ಅಂತ ಹೇಳ್ತಿದ್ದಾರೆ. ಇಬ್ಬರೂ ಕೆಲವು ತಿಂಗಳು ಬೇರೆ ಬೇರೆಯಾಗಿ ಇದ್ದರೆ ಡಿವೋರ್ಸ್ ತಗೊಳೋಕೆ ಸುಲಭವಾಗುತ್ತದೆ ಎಂದು ಮೊದಲೇ ಬೇರೆ ಬೇರೆ ಆಗಿದ್ದರು. ಇದೀಗ ಇಬ್ಬರೂ ಒಟ್ಟಿಗೆ ಬಂದು ಡಿವೋರ್ಸ್‌ಗೆ ಅರ್ಜಿ ಹಾಕಿ