ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರಕ್ಕೆ ಆಲಿಯಾ ಮತ್ತು ರಣವೀರ್‌ ಪಡೆದ ಹಣ ಎಷ್ಟು ಗೊತ್ತಾ?

First Published | Jun 25, 2023, 5:23 PM IST

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ (Rocky Aur Rani Kii Prem Kahani) ಚಿತ್ರದ ಮೂಕಲ ಏಳು ವರ್ಷಗಳ ನಂತರ ಕರಣ್ ಜೋಹರ್ (Karan Johar) ಮತ್ತೆ ನಿರ್ದೇಶಕರ ಕುರ್ಚಿಗೆ ಬಂದಿದ್ದಾರೆ. ಇತ್ತೀಚಿಗೆ ಬಿಡುಗೆಡೆಯಾದ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯ ಟ್ರೇಲರ್‌ ಬಿಡುಗಡೆಯಾಗಿದ್ದು ಪ್ರೇಕ್ಷಕರು ಉತ್ತಮವಾಗಿ ಪ್ರತಿಕ್ರಿಯಿಸಿದ್ದಾರೆ. ರಣವೀರ್ ಸಿಂಗ್ (Ranveer Singh) ಮತ್ತು ಆಲಿಯಾ ಭಟ್ (Alia Bhatt) ತಮ್ಮ ಎರಡನೇ ಬಾರಿ ತೆರೆಯ ಮೇಲೆ  ಮತ್ತೆ ಒಂದಾಗುತ್ತಿದ್ದಾರೆ ಎಂಬ ಅಂಶವು ಎಲ್ಲರನ್ನೂ ಸೆಳೆದಿದೆ. ಈ ಸ್ಟಾರ್‌ಗಳು ಪಾತ್ರಕ್ಕಾಗಿ ತೆಗೆದು ಕೊಂಡಿರುವ ಮೊತ್ತವೆಷ್ಟು ಗೊತ್ತಾ?

ರಣವೀರ್ ಮತ್ತು ಆಲಿಯಾ ಜೊತೆಗೆ,  ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದಲ್ಲಿ ಧರ್ಮೇಂದ್ರ, ಶಬಾನಾ ಅಜ್ಮಿ ಮತ್ತು ಜಯಾ ಬಚ್ಚನ್ ಅವರ ಪ್ರಮುಖ ಪಾತ್ರದಲ್ಲಿದ್ದಾರೆ. ಜುಲೈ 28 ರಂದು ಚಿತ್ರದ ಪ್ರಥಮ ಪ್ರದರ್ಶನವನ್ನು ನಿಗದಿಪಡಿಸಲಾಗಿದೆ.
 

ರಣವೀರ್ ಸಿಂಗ್: ಚಿತ್ರದಲ್ಲಿ ರಣವೀರ್ ಸಿಂಗ್ ರಾಕಿ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ನಟಿಸಲು ರನವೀರ್‌ 25 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. 

Tap to resize

ಆಲಿಯಾ ಭಟ್‌: ಅವರು ಚಿತ್ರದ ಮುಖ್ಯ ಪಾತ್ರ ರಾಣಿಯಾಗಿ ನಟಿಸುತ್ತಿದ್ದಾರೆ. ಟೀಸರ್‌ನಲ್ಲಿ ನಟಿ ತರತರದ ಸೀರೆಯಲ್ಲಿ ಬೆರಗುಗೊಳಿಸಿದ್ದು, ಆಕೆಯ ಸೌಂದರ್ಯಕ್ಕೆ ಅಭಿಮಾನಿಗಳು ಬೆರಗಾಗಿದ್ದಾರೆ. ಪ್ರಾಜೆಕ್ಟ್‌ನ ನಾಯಕಿಯಾಗಿ ನಟಿಸಲು ಆಲಿಯಾ 10 ಕೋಟಿ ರೂಪಾಯಿ ಶುಲ್ಕವನ್ನು ಬೇಡಿಕೆಯಿಟ್ಟಿದ್ದಾರೆ ಎಂದು ವರದಿಯಾಗಿದೆ.
 

ಧರ್ಮೇಂದ್ರ: ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯೊಂದಿಗೆ, ಹೆಸರಾಂತ ಸೂಪರ್‌ಸ್ಟಾರ್ ಧರ್ಮೇಂದ್ರ ಮತ್ತೆ ದೊಡ್ಡ ಪರದೆಗೆ ಮರಳುತ್ತಿದ್ದಾರೆ. ಟೀಸರ್ ಪ್ರಕಾರ, ಅವರು ಚಿತ್ರದಲ್ಲಿ ಮಹತ್ವದ ಪಾತ್ರವನ್ನು ಹೊಂದಿರುತ್ತಾರೆ. ವರದಿಗಳ ಪ್ರಕಾರ, ನಟ ಚಿತ್ರಕ್ಕಾಗಿ 1 ಕೋಟಿ ರೂ ಚಾರ್ಜ್‌ ಮಾಡಿದ್ದಾರೆ.

ಶಬಾನಾ ಅಜ್ಮಿ: ಚಿತ್ರದ ಟೀಸರ್‌ನಲ್ಲಿ ಹಿರಿಯ ನಟಿ ಶಬಾನಾ ಅಜ್ಮಿ ಕೂಡ ಸೇರಿದ್ದಾರೆ.  ಈ ಚಿತ್ರಕ್ಕಾಗಿ ನಟಿ ಸುಮಾರು 1 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ.
 

Jaya Bachchan in Rocky Aur Rani Kii Prem Kahaani teaser

ಜಯಾ ಬಚ್ಚನ್: ವದಂತಿಗಳ ಪ್ರಕಾರ, ಜಯಾ ಬಚ್ಚನ್ ಕೂಡ ಸುದೀರ್ಘ ಅನುಪಸ್ಥಿತಿಯ ನಂತರ ದೊಡ್ಡ ಪರದೆಯ ಮೇಲೆ ಮರಳುತ್ತಾರೆ. ಕರಣ್ ಜೋಹರ್ ಅವರ ಚಿತ್ರದಲ್ಲಿ ಕಾಣಿಸಿಕೊಳ್ಳಲು ನಟಿ 1 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ.

Latest Videos

click me!