ಟಾಲಿವುಡ್‌ನ ಸೂಪರ್‌ಸ್ಟಾರ್ ಮಹೇಶ್ ಬಾಬು ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರ ಯಾವುದೇ ಹೊಸ ಸಿನಿಮಾವಲ್ಲ. ಅವರ ಹೊಚ್ಚಹೊಸ ರೇಂಜ್ ರೋವರ್ ಆಗಿದೆ.
ರೇಂಜ್ ರೋವರ್ ಸೆಲೆಬ್ರಿಟಿಗಳ ಅಚ್ಚುಮೆಚ್ಚಿನದ್ದಾಗಿದೆ ಮತ್ತು ಮೋಹನ್‌ಲಾಲ್, ಜೂನಿಯರ್ ಎನ್‌ಟಿಆರ್, ಚಿರಂಜೀವಿ ಮತ್ತು ಇತರರು ಸೇರಿದಂತೆ ಹಲವರು ಒಂದನ್ನು ಖರೀದಿಸಿದ್ದಾರೆ.
ಆದರೆ ಹೈದ್ರಾಬಾದ್‌ನಲ್ಲಿ ಚಿನ್ನದ ಬಣ್ಣದ ರೇಂಜ್ ರೋವರ್ ಹೊಂದಿರುವ ಏಕೈಕ ವ್ಯಕ್ತಿ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರಾಗಿದ್ದಾರೆ. ಹೀಗಾಗಿ ಅವರ ಈ ಕಾರು ಸಖತ್ ಸದ್ದು ಮಾಡುತ್ತಿದೆ.
ನಟನ ಕಾರಿನ ಖರೀದಿ ಮತ್ತು ವೆಚ್ಚದ ಸುತ್ತ ಸಾಕಷ್ಷು ಸುದ್ದಿಗಳು ಹರಿದಾಡುತ್ತಿವೆ. ಇದು ಅತ್ಯಂತ ದುಬಾರಿ ವಾಹನಗಳಲ್ಲಿ ಒಂದಾಗಿದ್ದು , ಈಗ ಭಾರತದಲ್ಲಿ ಮಾರಾಟವಾಗಿದೆ. ಇದರ ಬೆಲೆ 5.4 ಕೋಟಿ ರೂ.
ಮಹೇಶ್ ಬಾಬು ಅವರ ಹೊಸ ರೇಂಜ್ ರೋವರ್ ಕಾರಿನ ಆಕರ್ಷಕ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಅದನ್ನು ನೋಡಿ ಫುಲ್ ಫಿದಾ ಆಗಿದ್ದಾರೆ.
ಮುಂಬರುವ ಚಿತ್ರ ಗುಂಟೂರು ಕಾರಮ್‌ಗಾಗಿ ಮಹೇಶ್ ಬಾಬು ಅವರು ಚಲನಚಿತ್ರ ನಿರ್ಮಾಪಕ ತ್ರಿವಿಕ್ರಮ್ ಶ್ರೀನಿವಾಸ್ ಅವರೊಂದಿಗೆ ಸೇರಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಚಿತ್ರತಂಡ ಮತ್ತು ತಾರಾಬಳಗದ ವಿವಾದಗಳು ಸೇರಿದಂತೆ ನಾನಾ ಕಾರಣಗಳಿಂದ ಸುದ್ದಿಯಲ್ಲಿದೆ.
ಚಿತ್ರದ ನಾಯಕಿ ಪೂಜಾ ಹೆಗ್ಡೆ ಮತ್ತು ಸಂಗೀತ ನಿರ್ದೇಶಕರಾದ ಎಸ್ ಥಮನ್ ಇನ್ನು ಮುಂದೆ ಈ ತಂಡದಲ್ಲಿ ಇಲ್ಲ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಚಿತ್ರೀಕರಣ, ಚಿತ್ರಕಥೆ ಮತ್ತು ಯೋಜನೆಯ ಇತರ ಅಂಶಗಳ ಮಾರ್ಪಾಡುಗಳು ಪೂಜಾ ಹೆಗ್ಡೆ ಸಿನಿಮಾವನ್ನು ತ್ಯಜಿಸಲು ಕಾರಣವಾಯಿತು.
ಸಂಯುಕ್ತಾ ಮತ್ತು ಮೀನಾಕ್ಷಿ ಚೌಧರಿ ಅವರ ಹೆಸರನ್ನು ಮಹಿಳಾ ನಾಯಕಿಯ ಸಂಭಾವ್ಯ ಅಭ್ಯರ್ಥಿಗಳೆಂದು ಪ್ರಕಟಣೆಗಳಲ್ಲಿ ಉಲ್ಲೇಖಿಸಲಾಗಿದೆ. ತಾರಾಗಣ ಮತ್ತು ಸಿಬ್ಬಂದಿಯ ಬಗ್ಗೆ ಗೊಂದಲಗಳಿದ್ದರೂ ಚಿತ್ರೀಕರಣ ನಾಳೆ ಪ್ರಾರಂಭವಾಗಲಿದೆ.