ಮತ್ತೆ ಒಂದಾದ ರಶ್ಮಿಕಾ ಮತ್ತು ವಿಜಯ್‌ ದೇವರಕೊಂಡ ; ಒಟ್ಟಾಗಿರುವ ವೀಡಿಯೋ ವೈರಲ್‌!

Published : Jun 24, 2023, 03:52 PM IST

ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್‌ ದೇವರಕೊಂಡ (Vijay Deverakonda ) ಅವರ ಜೋಡಿ ಸಾಕಷ್ಷು ಕಾಲದಿಂದ ಸುದ್ದಿಯಲ್ಲಿದೆ. ಕೆಲವು ಸಮಯದ ಹಿಂದೆ ಅವರು ಬೇರ್ಪಟ್ಟಿದ್ದಾರೆ ಎಂಬ ವದಂತಿ ಕೂಡ ಇತ್ತು. ಬ್ರೇಕಪ್ ವದಂತಿ ನಡುವೆ ಈಗ ಮತ್ತೆ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ, ಇಬ್ಬರೂ ಒಟ್ಟಿಗೆ ಇರುವ  ಹೊಸ ವೀಡಿಯೊ ಸಖತ್‌ ಸದ್ದು ಮಾಡುತ್ತಿದೆ. 

PREV
18
ಮತ್ತೆ ಒಂದಾದ ರಶ್ಮಿಕಾ ಮತ್ತು ವಿಜಯ್‌ ದೇವರಕೊಂಡ ; ಒಟ್ಟಾಗಿರುವ ವೀಡಿಯೋ ವೈರಲ್‌!

ವಿಜಯ್ ದೇವರಕೊಂಡ ಮತ್ತುರಶ್ಮಿಕಾ ಮಂದಣ್ಣ ಅವರು ಗೀತಾ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್‌ನಂತಹ ಹಿಟ್ ಚಿತ್ರಗಳ ಭಾಗವಾಗಿದ್ದಾರೆ . ಈ ಜೋಡಿ ಆನ್‌ಸ್ಕ್ರೀನ್ ಕಾಣಿಸಿಕೊಂಡಾಗಿನಿಂದ, ಅವರ ಆಫ್‌ಸ್ಕ್ರೀನ್ ಪ್ರಣಯದ ಬಗ್ಗೆ ಊಹಾಪೋಹಗಳು ಅವರ ಅಭಿಮಾನಿಗಳಲ್ಲಿ ಆಸಕ್ತಿಯನ್ನು ಹುಟ್ಟುಹಾಕುತ್ತಿವೆ.

28

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಕಳೆದ ಕೆಲವು ವರ್ಷಗಳಿಂದ ಪರಸ್ಪರ ಡೇಟಿಂಗ್ (Dating) ಮಾಡುತ್ತಿದ್ದಾರೆ ಎಂದು ವದಂತಿಗಳಿವೆ, ಆದರೆ ಇಬ್ಬರೂ ಇದನ್ನು ಖಚಿತಪಡಿಸಿಲ್ಲ ಅಥವಾ ನಿರಾಕರಿಸಿಲ್ಲ.

38

ಇದರ ನಡುವೆಯೇ ಅವರ ಬ್ರೇಕಪ್‌ ವರದಿಗಳು ಸಹ ಕಾಣಿಸಿಕೊಂಡಿದ್ದವು. ಈಗ ಅವರು ಒಟ್ಟಿಗೆ ಊಟ ಮಾಡುವ ಇತ್ತೀಚಿನ ವೀಡಿಯೊ ಮತ್ತೊಮ್ಮೆ ಅವರ ಅಭಿಮಾನಿಗಳಲ್ಲಿ ಕೂತೂಹಲ ಮೂಡಿಸಿದೆ

48

ವೀಡಿಯೊದಲ್ಲಿ, ವಿಜಯ್ ಮತ್ತು ರಶ್ಮಿಕಾ ಸ್ನೇಹಿತರ ಗುಂಪಿನೊಂದಿಗೆ ರೆಸ್ಟೋರೆಂಟ್‌ನಲ್ಲಿ ನೋಡಬಹುದು. ವಿಜಯ್ ಅವರ ಸಹೋದರ ಆನಂದ್ ಕೂಡ ಈ ಗುಂಪಿನ ಭಾಗವಾಗಿದ್ದಾರೆ. 

58

ಈ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಅಭಿಮಾನಿಗಳ ಪುಟಗಳಲ್ಲಿ ಹಂಚಿಕೊಳ್ಳಲಾಗಿದೆ, ಅಲ್ಲಿ ಅಭಿಮಾನಿಗಳು ಅವರಿಬ್ಬರನ್ನು ಒಟ್ಟಿಗೆ ನೋಡಿದ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. 

68

'ಅವರು ಇನ್ನೂ ಒಟ್ಟಿಗೆ ಇದ್ದಾರೆ ಎಂದು ನಾನು ಭಾವಿಸುತ್ತೇನೆ'  ಎಂದು ಒಬ್ಬರು ಬರೆದಿದ್ದಾರೆ. 'ಹೇ, ಅವರು ಈಗಾಗಲೇ ನಮ್ಮ ವಿರೋಶ್ - ಪರಿಪೂರ್ಣ ದಂಪತಿ' ಎಂದು ಅಭಿಮಾನಿಯೊಬ್ಬರು ವೀಡಿಯೊದಲ್ಲಿ ಕಾಮೆಂಟ್ ಮಾಡಿದ್ದಾರೆ.

78

ರಶ್ಮಿಕಾ ಮತ್ತು ವಿಜಯ್ ಆಗಾಗ್ಗೆ ಒಟ್ಟಿಗೆ ಸುತ್ತಾಡುತ್ತಾರೆ ಮತ್ತು ಪರಸ್ಪರ ಪ್ರೀತಿಯಿಂದ ಮಾತನಾಡುತ್ತಾರೆ. ಮೇ ತಿಂಗಳಲ್ಲಿ ರಶ್ಮಿಕಾ ಹುಟ್ಟುಹಬ್ಬದಂದು ಅವರಿಬ್ಬರೂ ಒಂದೇ ಮನೆಯಲ್ಲಿದ್ದಾರೆ ಎಂದು ವರದಿಗಳು ಹರಿದಾಡಿದ್ದವು.

88

 ಅವರು ಹೊಸ ವರ್ಷದಂದು ಗೋವಾದಲ್ಲಿ ಒಟ್ಟಿಗೆ ರಜೆಯನ್ನು ಕಳೆಯುತ್ತಿದ್ದಾರೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ ಈ ಹಿಂದೆ, ರಶ್ಮಿಕಾ ಈ ಡೇಟಿಂಗ್ ವದಂತಿಗಳನ್ನು ಉದ್ದೇಶಿಸಿ ಕ್ಯೂಟ್‌ ಎಂದು ಕರೆದಿದ್ದರು.

Read more Photos on
click me!

Recommended Stories