ಮಿರ್ಜಾಪುರದ ಸಲೋನಿ ಬಾಬಿಯ ಹಾಟ್ ಅವತಾರ

First Published | Jul 10, 2024, 12:47 PM IST

ಸದ್ಯ ಯಾರನ್ನೂ ಕೇಳಿದ್ರೂ ಮಿರ್ಜಾಪುರ-3 ವೆಬ್ ಸಿರೀಸ್ ಬಗ್ಗೆಯೇ ಮಾತನಾಡುತ್ತಿದ್ದಾರೆ. ಜುಲೈ 5ರಂದು ಅಮೆಜಾನ್ ಓಟಿಟಿಯಲ್ಲಿ ಮಿರ್ಜಾಪುರ ಮೂರನೇ ಭಾಗದ ವೆಬ್ ಸಿರೀಸ್ ಬಿಡುಗಡೆಯಾಗಿದೆ.

ಮೊದಲ ಎರಡು ಭಾಗದ ಮಿರ್ಜಾಪುರ ಓಟಿಟಿ ಅಂಗಳವನ್ನೇ ನಡುಗಿಸಿತ್ತು. ಭಾರೀ ನಿರೀಕ್ಷೆ ಹುಟ್ಟಿಸಿದ್ದ ಮೂರನೇ ಭಾಗ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಆದ್ರೂ ನೆಟ್ಟಿಗರು ಪೂರ್ಣವಾಗಿ ನೆಗಟಿವ್ ಕಮೆಂಟ್ ನೀಡುತ್ತಿಲ್ಲ.

ವೆಬ್‌ ಸಿರೀಸ್‌ ಎರಡನೇ ಭಾಗದಲ್ಲಿ ಸಿವಾನ್ ವ್ಯಾಪಾರಿಯ ತ್ಯಾಗಿ ಕುಟುಂಬವನ್ನು ಪರಿಚಯ ಮಾಡಿಸಲಾಗಿತ್ತು. ತ್ಯಾಗಿ ಕುಟುಂಬದ ಹಿರಿಯ ಸೊಸೆ, ಮುದ್ದಿನ ಅಮ್ಮನಾಗಿ, ಪತಿಯ ನೆಚ್ಚಿನ ಮಡದಿಯಾಗಿ ಸಲೋನಿ ಪಾತ್ರದಲ್ಲಿ ನಟಿಸಿದ್ದು ನೇಹಾ ಸರಗಮ್.

Tap to resize

ಈ ಹಿಂದೆಯೂ ಧಾರಾವಾಹಿಗಳಲ್ಲಿ ನಟಿಸಿದ್ದರೂ ನೇಹಾ ಸರಗಮ್ ಅವರಿಗೆ ಮಿರ್ಜಾಪುರ ದೊಡ್ಡಮಟ್ಟದ ಯಶಸ್ಸು ತಂದುಕೊಟ್ಟಿದೆ. ಮಿರ್ಜಾಪುರ ಎರಡನೇ ಭಾಗ ರಿಲೀಸ್ ಆದಾಗಿನಿಂದಲೂ ಸಲೋನಿ ಬಾಬಿ ಅಂತಾನೇ ನೇಹಾ ಅವರನ್ನು ಗುರುತಿಸಲಾಗುತ್ತದೆ.

ನೇಹಾ ಸರಗಮ್ ಗಾಯಕಿ ಆಗಬೇಕೆಂದು ಮುಂಬೈಗೆ ಬಂದಿದ್ದರು. ಹಾಗಾಗಿ ಖಾಸಗಿ ವಾಹಿನಿ ಚಾಂದ್ ಚುಪಾ ಬಾದಲ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಆದ್ರೆ ಈ ಶೋ ಬಳಿಕ ನೇಹಾ ಕೆಲ ವರ್ಷ ಕಾಣಿಸಿಕೊಂಡಿರಲಿಲ್ಲ.

ಒಂದು ಲಾಂಗ್ ಬ್ರೇಕ್ ಬಳಿಕ ರಾಮಾಯಾಣ ಧಾರಾವಾಹಿಯಲ್ಲಿ ಸೀತೆ ಪಾತ್ರದ ಬಳಿಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಮುದ್ದು ಮುಖದ ಸೀತೆಯ ಪಾತ್ರದಲ್ಲಿ ನಟಿಸಿ ನೇಹಾ ಸೈ ಅನ್ನಿಸಿಕೊಂಡಿದ್ದರು.

ಇದಾದ ಬಳಿಕ ಯಶೋಮತಿ ನಂದಲಾಲ ಧಾರಾವಾಹಿಯಲ್ಲಿಯೂ ನೇಹಾ ಅವಕಾಶ ಪಡೆದುಕೊಂಡಿದ್ದರು. ಈ ಧಾರಾವಾಹಿಯಲ್ಲಿ ಯಶೋಮತಿಯಾಗಿ ನೇಹಾ ನಟಿಸಿದ್ದರು. ಯಶೋಮತಿ ಪಾತ್ರದಿಂದ ನೇಹಾ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿತ್ತು.

ಸೀರಿಯಲ್, ವೆಬ್ ಸಿರೀಸ್ ನಲ್ಲಿ ಹೋಮ್‌ಲಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ನೇಹಾ ನಿಜ ಜೀವನದಲ್ಲಿ ಸಿಕ್ಕಾಪಟ್ಟೆ ಸ್ಟೈಲಿಷ್ಟ್. ವೆಸ್ಟರ್ನ್ ಬಟ್ಟೆಗಳೆಂದ್ರೆ ನೇಹಾಗೆ ತುಂಬಾ ಇಷ್ಟವಂತೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

Latest Videos

click me!