ಕಾಂತಾರ 1 ವಿಜಯ ಯಾತ್ರೆ ಮುಂದುವರಿದಿದ್ದು, ವಿಶ್ವಾದ್ಯಂತ 717.50 ಕೋಟಿ ರು.ಗೂ ಗಳಿಕೆ ಮಾಡಿದೆ. ಭಾರತದಲ್ಲಿ 500 ಕೋಟಿ ರು.ಗೂ ಅಧಿಕ ಕಲೆಕ್ಷನ್ ಮಾಡಿದೆ. ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಈ ಗಳಿಕೆಯನ್ನುಘೋಷಣೆ ಮಾಡಿದೆ.
ರಿಷಬ್ ಶೆಟ್ಟಿಯವರ ‘ಕಾಂತಾರ ಚಾಪ್ಟರ್ 1’ ವಿಜಯ ಯಾತ್ರೆ ಮುಂದುವರಿದಿದ್ದು, ವಿಶ್ವಾದ್ಯಂತ 717.50 ಕೋಟಿ ರು.ಗೂ ಗಳಿಕೆ ಮಾಡಿದೆ. ಭಾರತದಲ್ಲಿ 500 ಕೋಟಿ ರು.ಗೂ ಅಧಿಕ ಕಲೆಕ್ಷನ್ ಮಾಡಿದೆ. ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಈ ಗಳಿಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.
25
1000 ಕೋಟಿ ದಾಟುವ ನಿರೀಕ್ಷೆ
ಈ ಬಾರಿ ವೀಕೆಂಡ್ ಹಾಗೂ ದೀಪಾವಳಿ ಹಬ್ಬ ಜೊತೆಯಾಗಿ ಬಂದಿದ್ದು ಸಿನಿಮಾ ಗಳಿಕೆಯನ್ನು ಶೀಘ್ರ 1000 ಕೋಟಿ ಹೊಸ್ತಿಲು ದಾಟಿಸುವ ನಿರೀಕ್ಷೆ ಇದೆ. ಸಿನಿಮಾ ಸಕ್ಸಸ್ ಓಟ ಇದೇ ರೀತಿ ಮುಂದುವರಿದರೆ ಇದು ‘ಕೆಜಿಎಫ್ 2’ ದಾಖಲೆಯನ್ನೂ ಮುರಿಯುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
35
ಕೌನ್ ಬನೇಗಾ ಕರೋಡ್‌ಪತಿ
ರಿಷಬ್ ಶೆಟ್ಟಿ ಲುಂಗಿ ಉಡುವ ಕಲೆಗೆ ಮರುಳಾದ ಅಮಿತಾಬ್ ಬಚ್ಚನ್: ರಿಷಬ್ ಶೆಟ್ಟಿ ಅವರು ಅಮಿತಾಬ್ ಬಚ್ಚನ್ ಸಾರಥ್ಯದ ‘ಕೌನ್ ಬನೇಗಾ ಕರೋಡ್‌ಪತಿ’ಯಲ್ಲಿ ವಿಶೇಷ ಆಹ್ವಾನದ ಮೇರೆಗೆ ಭಾಗವಹಿಸಿದ್ದಾರೆ.
ಎಂದಿನಂತೆ ತನ್ನ ಲುಂಗಿ ಲುಕ್‌ನಲ್ಲಿ ಶೋಗೆ ಎಂಟ್ರಿಕೊಟ್ಟ ರಿಷಬ್ ಅವರ ಲುಂಗಿ ಉಡುವ ಕಲೆಯನ್ನು ಅಮಿತಾಬ್ ಬಚ್ಚನ್ ಮೆಚ್ಚಿಕೊಂಡಿದ್ದಾರೆ. ಈ ವೇಳೆ ರಿಷಬ್ ಅವರು ಅಮಿತಾಬ್ ಅವರಿಗೆ ವಿಶೇಷ ಉಡುಗೊರೆಯನ್ನೂ ನೀಡಿದ್ದಾರೆ.
55
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ
ಅಮಿತಾಬ್, ‘ರಿಷಬ್ ಅವರೇ ನೀವು ಉಟ್ಟಿರುವಂಥಾ ಲುಂಗಿಯನ್ನು ನಾನು ಧರಿಸುವುದಕ್ಕೂ ಮುನ್ನ ಅದನ್ನು ಉಡುವುದನ್ನು ಕಲಿಯಬೇಕು. ಇಲ್ಲದೇ ಹೋದರೆ ಇಲ್ಲೇ ಏನಾದರೂ ಕಳಚಿ ಹೋದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತದೆ’ ಎಂದು ತಮಾಷೆ ಮಾಡಿದ್ದಾರೆ.