ತಂದೆಯೊಂದಿಗೆ ವಿವಾದ, ಮೂವರಿಗೆ ಡಿವೋರ್ಸ್… 43ನೇ ವಯಸ್ಸಲ್ಲಿ 4ನೇ ಮದುವೆಯಾದ್ರ ಈ ನಟಿ!

Published : Oct 16, 2025, 09:32 PM IST

ಈಕೆ ಖ್ಯಾತ ನಟಿ, ತಮ್ಮ ಸ್ವಂತ ತಂದೆಯೊಂದಿಗಿನ ವಿವಾದ ಮೂಲಕ ಸುದ್ದಿಯಲ್ಲಿದ್ದ ನಟಿ, ಮೂವರನ್ನು ಮದುವೆಯಾಗಿ ಡಿವೋರ್ಸ್ ಪಡೆದಿರುವ ಮೂವರು ಮಕ್ಕಳ ತಾಯಿ. ಕಳೆದ ವರ್ಷ ತಮ್ಮ 43ನೇ ವಯಸ್ಸಲ್ಲಿ 4ನೇ ಮದುವೆಯಾಗಿ ಭಾರಿ ಸುದ್ದಿಯಾಗಿದ್ದರು ಈ ನಟಿ. 

PREV
19
43ನೇ ವಯಸ್ಸಲ್ಲಿ 4ನೇ ಮದುವೆ

ಈಕೆ ತಮಿಳಿನ ಖ್ಯಾತ ನಟಿ, ವಿವಾದದಿಂದಲೇ ಜನಪ್ರಿಯತೆ ಪಡೆದವರು ಇವರು. ತಂದೆಯೊಂದಿಗೆ ವಿವಾದ, ಮೂವರು ಗಂಡಂದಿರಿಗೆ ಡಿವೋರ್ಸ್, ಮೂವರು ಮಕ್ಕಳ ತಾಯಿ. 43ನೇ ವಯಸ್ಸಿನಲ್ಲಿ ನಾಲ್ಕನೇ ಮದುವೆಯಾಗುವ ಮೂಲಕ ಸುದ್ದಿಯಲ್ಲಿದ್ದರು. ಆದರೆ ಆಗಿದ್ದು ನಿಜವಾದ ಮದುವೇನಾ?

29
ನಟಿ ವನಿತಾ ವಿಜಯಕುಮಾರ್

ತಮಿಳು ನಟಿ ವನಿತಾ ವಿಜಯಕುಮಾರ್, ಇವರು ತಮಿಳಿನ ಖ್ಯಾತ ಹಿರಿಯ ನಟ ವಿಜಯಕುಮಾರ್ ಮತ್ತು ಮಂಜುಳಾ ದಂಪತಿಯ ಹಿರಿಯ ಮಗಳು. ವಿವಾದಗಳು ಮತ್ತು ತಮ್ಮ ಕುಟುಂಬದೊಂದಿಗೆ ಭಿನ್ನಾಭಿಪ್ರಾಯಗಳಿಗೆ ಅವರು ಹೆಚ್ಚು ಹೆಸರುವಾಸಿಯಾಗಿದ್ದಾರೆ.

39
ಸಹೋದರ-ಸಹೋದರಿಯರು

ವನಿತಾ ವಿಜಯ್ ಕುಮಾರ್ ಗೆ ಪ್ರೀತಾ ಮತ್ತು ಶ್ರೀದೇವಿ ಎಂಬ ಇಬ್ಬರು ಕಿರಿಯ ಸಹೋದರಿಯರಿದ್ದಾರೆ. ಶ್ರೀದೇವಿ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ಇವರು ವಿಜಯ್ ಕುಮಾರ್ ಅವರ ಎರಡನೇ ಹೆಂಡತಿಯ ಮಕ್ಕಳು. ವಿಜಯಕುಮಾರ್ ಅವರ ಮೊದಲ ಪತ್ನಿಯಿಂದ ಜನಿಸಿದ ಅರುಣ್ ವಿಜಯ್, ಕವಿತಾ ಮತ್ತು ಅನಿತಾ ಎಂಬ ಮೂವರು ಮಲ ಸಹೋದರರೂ ಇದ್ದಾರೆ.

49
ವಿಜಯ್ ಗೆ ನಾಯಕಿಯಾಗಿ ಎಂಟ್ರಿ

ವನಿತಾ ವಿಜಯ್ ಕುಮಾರ್ 1995 ರಲ್ಲಿ ವಿಜಯ್ ಎದುರು 'ಚಂದ್ರಲೇಖ' ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ನಂತರದ 'ಮಾಣಿಕ್ಕಂ' (1996), 'ಹಿಟ್ಲರ್ ಬ್ರದರ್ಸ್' (1997) ಮತ್ತು 'ದೇವಿ' (1999) ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದರು. ಬಳಿಕ ದೀರ್ಘ ವಿರಾಮದ ನಂತರ, 'ನಾನ್ ರಾಜಾವಾಗ ಪೋಗಿರೆನ್' (2013) ಮತ್ತು 'ಎಂ.ಜಿ.ಆರ್. ಶಿವಾಜಿ ರಜಿನಿ ಕಮಲ್' (2015) ಚಿತ್ರಗಳ ಮೂಲಕ ಮತ್ತೆ ನಟನೆಯಲ್ಲಿ ತೊಡಗಿಸಿಕೊಂಡರು.

59
ನಿರ್ದೇಶಕಿ ಕೂಡ ಹೌದು

ವನಿತಾ ವಿಜಯ್ ಕೇವಲ ನಟಿ ಮಾತ್ರವಲ್ಲ, ನಿರ್ದೇಶಕಿ, ನಿರ್ಮಾಪಕಿ ಮತ್ತು ಯೂಟ್ಯೂಬರ್ ಆಗಿಯೂ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದ ಜೊತೆಗೆ 'ಬಿಗ್ ಬಾಸ್ ತಮಿಳು 3' ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ತಮ್ಮ ನೇರ ಮಾತಿನಿಂದ ಗಮನ ಸೆಳೆದಿದ್ದರು.

69
ವಿವಾದಗಳಿಂದಲೇ ಸುದ್ದಿಯಾಗಿದ್ದ ನಟಿ

ವನಿತಾ ಅವರು ತಮ್ಮ ತಂದೆ ವಿಜಯಕುಮಾರ್ ಅವರೊಂದಿಗಿನ ಆಸ್ತಿ ವಿವಾದದಿಂದಾಗಿ ಭಾರಿ ಸುದ್ದಿಯಲ್ಲಿದ್ದರು. ನಂತರ ತಮ್ಮ ವೈಯಕ್ತಿಕ ಜೀವನ, ಮದುವೆಗಳು, ವಿಚ್ಛೇದನಗಳು ಮತ್ತು ಮಕ್ಕಳ ಪಾಲನೆಗೆ ಸಂಬಂಧಿಸಿದ ಮೊಕದ್ದಮೆಗಳು ಸೇರಿದಂತೆ ಅವರ ಜೀವನವೇ ವಿವಾದದಿಂದ ಕೂಡಿತ್ತು.

79
ಮೂವರಿಗೆ ಡೀವೋರ್ಸ್

ವನಿತಾ ವಿಜಯ್ ಕುಮಾರ್ ಈಗಾಗಲೇ ಮೂರು ಮದುವೆಯಾಗಿ ಮೂವರಿಂದಲೂ ಡೀವೋರ್ಸ್ ಪಡೆದಿದ್ದು, ಇದೀಗ ಕಳೆದ ವರ್ಷ 43ನೇ ವಯಸ್ಸಲ್ಲಿ 4ನೇ ಮದುವೆಯಾಗಿ ಭಾರಿ ಸದ್ದು ಮಾಡಿದ್ದರು. 2010 ರಲ್ಲಿ ಆಕಾಶ್ ಎನ್ನುವವರನ್ನು ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದರು. ಎರಡನೇ ಮಗು ಆಗುತ್ತಿದ್ದಂತೆ 2005ರಲ್ಲಿ ಡಿವೋರ್ಸ್ ಪಡೆದರು.

89
ವೈವಾಹಿಕ ಜೀವನದ ದುರಂತಗಳು

ಅದಾಗಿ ಎರಡೇ ವರ್ಷದಲ್ಲಿ 2007 ರಲ್ಲಿ ಬ್ಯುಸಿನೆಸ್ ಮ್ಯಾನ್ ಆನಂದ್ ಜಯ್ ರಂಜನ್ ಅವರನ್ನು ಮದುವೆಯಾದರು. ಇವರಿಗೆ ಒಬ್ಬ ಮಗನಿದ್ದು, ಅವರಿಂದ 2012ರಲ್ಲಿ ವಿಚ್ಚೇದನ ಪಡೆದರು. ನಂತರ ಕೆಲವು ವರ್ಷ ಕೊರಿಯೋಗ್ರಾಫರ್ ರಾಬರ್ಟ್ ಜೊತೆ ರಿಲೇಶನ್ ಶಿಪ್ ನಲ್ಲಿದ್ದರು. ಕೊನೆಗೆ ಅದು ಕೂಡ ಕೊನೆಗೊಂಡಿತು. 2020ರಲ್ಲಿ ಫೋಟೊಗ್ರಾಫರ್ ಪೀಟರ್ ಪೌಲ್ ಜೊತೆ ಮದುವೆಯಾಗಿದ್ದರು, ಅದೇ ವರ್ಷದಲ್ಲಿ ಅವನು ಕುಡಿತಕ್ಕೆ ದಾಸನಾಗಿದ್ದಾನೆ, ನಮ್ಮ ಮದುವೆ ರಿಜಿಸ್ಟರ್ ಆಗಿಲ್ಲ ಎಂದು ಅದರಿಂದಲೂ ಹೊರ ಬಂದರು. ಕಳೆದ ವರ್ಷ ಪೀಟರ್ ನಿಧನರಾದರು.

99
ರಾಬರ್ಟ್ ಜೊತೆ ಮದುವೆ

ಈ ಹಿಂದೆ ಪ್ರೀತಿಯ ವಿಷಯದಲ್ಲಿ ಸುದ್ದಿ ಮಾಡಿದ್ದ, ರಾಬರ್ಟ್ ಮಾಸ್ಟರ್ ಜೊತೆಗೆ ಕೊನೆಗೆ ಕಳೆದ ವರ್ಷ ಅಕ್ಟೋಬರ್ ನಲ್ಲಿ ತಮ್ಮ 43ನೇ ವಯಸ್ಸಿನಲ್ಲಿ ನಾಲ್ಕನೇ ಬಾರಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ಎನ್ನುವ ಸುದ್ದಿ ಹರಡಿತ್ತು. ಯಾಕಂದ್ರೆ ಇವರ ಮದುವೆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ ನಿಜವಾಗಿ ಅದು ಸಿನಿಮಾವೊಂದರ ಶೂಟಿಂಗ್ ಆಗಿತ್ತು. ಮೂರನೇ ಗಂಡನಿಂದ ದೂರವಾದ ಬಳಿಕ ವನಿತಾ ಸಿಂಗಲ್ ಆಗಿದೆಯೇ ಇದ್ದಾರೆ.

Read more Photos on
click me!

Recommended Stories