ಕಾಂತಾರ ಎಫೆಕ್ಟ್: ಐಎಂಡಿಬಿ ಲಿಸ್ಟ್‌ನಲ್ಲಿ ನಂ.1, 2 ಸ್ಥಾನದಲ್ಲಿ ರಿಷಬ್‌ ಶೆಟ್ಟಿ, ರುಕ್ಮಿಣಿ ವಸಂತ್

Published : Oct 17, 2025, 11:37 AM IST

ರಿಷಬ್‌ ಶೆಟ್ಟಿ ಭಾರತದ ನಂ.1 ಜನಪ್ರಿಯ ಸೆಲೆಬ್ರಿಟಿಯಾಗಿ ಗುರುತಿಸಿಕೊಂಡಿದ್ದಾರೆ. ಐಎಂಡಿಬಿ (ಇಂಟರ್‌ನೆಟ್‌ ಮೂವಿ ಡೇಟಾ ಬೇಸ್‌) ಸಂಸ್ಥೆ ಪ್ರತಿವಾರ ಬಿಡುಗಡೆ ಮಾಡುವ ಭಾರತದ ಜನಪ್ರಿಯ ಸೆಲೆಬ್ರಿಟಿಗಳ ಲಿಸ್ಟ್‌ನಲ್ಲಿ ರಿಷಬ್‌ ಶೆಟ್ಟಿ ನಂಬರ್‌ 1 ಸ್ಥಾನಕ್ಕೇರಿದ್ದಾರೆ.

PREV
15
ಐಎಂಡಿಬಿ ಲಿಸ್ಟ್‌ನಲ್ಲಿ ರಿಷಬ್‌ ಶೆಟ್ಟಿ

‘ಕಾಂತಾರ ಚಾಪ್ಟರ್‌ 1’ ಸಿನಿಮಾ ನಿರ್ದೇಶಕ, ನಾಯಕ ರಿಷಬ್‌ ಶೆಟ್ಟಿ ಭಾರತದ ನಂ.1 ಜನಪ್ರಿಯ ಸೆಲೆಬ್ರಿಟಿಯಾಗಿ ಗುರುತಿಸಿಕೊಂಡಿದ್ದಾರೆ. ಐಎಂಡಿಬಿ (ಇಂಟರ್‌ನೆಟ್‌ ಮೂವಿ ಡೇಟಾ ಬೇಸ್‌) ಸಂಸ್ಥೆ ಪ್ರತಿವಾರ ಬಿಡುಗಡೆ ಮಾಡುವ ಭಾರತದ ಜನಪ್ರಿಯ ಸೆಲೆಬ್ರಿಟಿಗಳ ಲಿಸ್ಟ್‌ನಲ್ಲಿ ರಿಷಬ್‌ ಶೆಟ್ಟಿ ನಂಬರ್‌ 1 ಸ್ಥಾನಕ್ಕೇರಿದ್ದಾರೆ.

25
25ನೇ ಸ್ಥಾನದಲ್ಲಿ ರಕ್ಷಿತ್‌ ಶೆಟ್ಟಿ

ಎರಡನೇ ಸ್ಥಾನದಲ್ಲಿ ರುಕ್ಮಿಣಿ ವಸಂತ್‌ ಇದ್ದಾರೆ. ಇನ್ನೊಂದೆಡೆ ಜೂ.ಎನ್‌ಟಿಆರ್‌, ರಾಜಮೌಳಿ ಅವರಂಥಾ ದಿಗ್ಗಜರನ್ನು ಹಿಂದಿಕ್ಕಿ 25ನೇ ಸ್ಥಾನದಲ್ಲಿ ರಕ್ಷಿತ್‌ ಶೆಟ್ಟಿ ಹೆಸರು ಬಂದಿದೆ. ಕಳೆದ ವಾರ ಇವರ ಹೆಸರು 91ನೇ ಸ್ಥಾನದಲ್ಲಿತ್ತು.

35
ಕಾಂತಾರದಲ್ಲಿ ದೈವನಿಂದನೆ ಮಾಡಿಲ್ಲ

ನಾನು ದೈವವನ್ನು ನಂಬುವವನು, ಆರಾಧಿಸುವವನು. ನನ್ನ ಸಿನಿಮಾಗೆ ದೈವದ ಅನುಮತಿ ಪಡೆದಿದ್ದೇವೆ. ಸಿನಿಮಾದಲ್ಲಿ ದೈವವನ್ನು ತೋರಿಸಿರುವ ರೀತಿಯಲ್ಲಿ ಹೆಚ್ಚು ಕಮ್ಮಿ ಆಗಬಾರದು.

45
ದೈವವನ್ನು ತೋರಿಸಿದ್ದೇನೆ

ತಪ್ಪುಗಳಾಗಬಾರದು ಎಂಬುದನ್ನು ಗಮನದಲ್ಲಿಟ್ಟುಕೊಂಡೇ ಸಿನಿಮಾ ಮಾಡಿದ್ದೇನೆ. ಹಿರಿಯರ ಮಾರ್ಗದರ್ಶನವಿದೆ. ಪ್ರತಿಯೊಬ್ಬರಿಗೂ ಅವರವರ ದೃಷ್ಟಿಕೋನ ಇರುತ್ತದೆ. ನಾನು ನನ್ನ ಚಿಂತನೆಯಂತೆ ದೈವವನ್ನು ತೋರಿಸಿದ್ದೇನೆ.

55
ದೈವದ ವಿಚಾರ ಬಂದಿದೆ

ಹಿಂದೆಯೂ ಸಿನಿಮಾಗಳಲ್ಲಿ ದೈವದ ವಿಚಾರ ಬಂದಿದೆ, ಮುಂದೆಯೂ ಬರುತ್ತದೆ. ಆದರೆ ದೈವದ ಅಂಶವನ್ನು ತರುವವರು ಸರಿಯಾದ ರೀತಿ ತರಬೇಕು ಎಂಬುದು ನನ್ನ ಅಪೇಕ್ಷೆ ಎಂದು ರಿಷಬ್‌ ಶೆಟ್ಟಿ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories