ರಿಷಬ್ ಶೆಟ್ಟಿ ಲುಕ್ ಬದಲಾಗಿದೆ. ಸಿನಿಮಾದಲ್ಲಿನ ಬೆರ್ಮೆ ಪಾತ್ರಕ್ಕಾಗಿ ಅವರು ಬಿಟ್ಟಿದ್ದ ಉದ್ದ ಕೂದಲಿಗೆ ಕತ್ತರಿ ಬಿದ್ದಿದೆ. ಶಾರ್ಟ್ ಹೇರ್‌ಸ್ಟೈಲ್‌ನಲ್ಲಿ ನಟ, ಗಾಯಕ ಮೈಮ್ ರಾಮ್‌ದಾಸ್ ಜೊತೆಗಿರುವ ಫೋಟೋವನ್ನು ರಿಷಬ್ ಪೋಸ್ಟ್ ಮಾಡಿದ್ದಾರೆ.
‘ಕಾಂತಾರ ಚಾಪ್ಟರ್ 1’ ಸಿನಿಮಾ ಥೇಟರಿಂದ ಓಟಿಟಿಗೆ ಶಿಫ್ಟ್ ಆಗಿದ್ದೇ ನಾಯಕ ರಿಷಬ್ ಶೆಟ್ಟಿ ಲುಕ್ ಕೂಡ ಬದಲಾಗಿದೆ. ಸಿನಿಮಾದಲ್ಲಿನ ಬೆರ್ಮೆ ಪಾತ್ರಕ್ಕಾಗಿ ಅವರು ಬಿಟ್ಟಿದ್ದ ಉದ್ದ ಕೂದಲಿಗೆ ಕತ್ತರಿ ಬಿದ್ದಿದೆ. ಶಾರ್ಟ್ ಹೇರ್‌ಸ್ಟೈಲ್‌ನಲ್ಲಿ ನಟ, ಗಾಯಕ ಮೈಮ್ ರಾಮ್‌ದಾಸ್ ಜೊತೆಗಿರುವ ಫೋಟೋವನ್ನು ರಿಷಬ್ ಪೋಸ್ಟ್ ಮಾಡಿದ್ದಾರೆ.
25
ಮೈಮ್ ರಾಮ್‌ದಾಸ್ ಜೊತೆ ರಿಷಬ್
ನಟನೆ ಜೊತೆಗೆ ಸಿನಿಮಾದ ಜಾನಪದ ಹಾಡಿಗೆ ಧ್ವನಿಯಾಗಿರುವ ರಾಮ್‌ದಾಸ್ ಕೊಡುಗೆಯನ್ನು ರಿಷಬ್ ಹಾಡಿ ಹೊಗಳಿದ್ದಾರೆ. ‘ಜೈ ಹನುಮಾನ್’, ‘ಛತ್ರಪತಿ ಶಿವಾಜಿ ಮಹಾರಾಜ್’, ‘ಕಾಂತಾರ ಚಾಪ್ಟರ್ 2’ ಸಿನಿಮಾಗಳು ಸದ್ಯ ರಿಷಬ್ ಕೈಯಲ್ಲಿವೆ.
35
ಕಾಂತಾರದಿಂದ ವಿಶ್ವವ್ಯಾಪಿ ಖ್ಯಾತಿ
ಕಾಂತಾರ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಿಷಬ್ ಶೆಟ್ಟಿಯವರು ಇದೀಗ 'ಕಾಂತಾರ ಚಾಪ್ಟರ್ 1' ಸಿನಿಮಾವನ್ನು ದೈವದ ಒಪ್ಪಿಗೆ ಪಡೆದು ಮಾಡಿದ್ದಾರೆ. ಈ ಸಿನಿಮಾ ಈಗ ಅವರಿಗೆ ವಿಶ್ವವ್ಯಾಪಿ ಖ್ಯಾತಿ ತಂದುಕೊಟ್ಟಿದೆ.
ಇದೀಗ ತೆರೆಯಲ್ಲಿ ಮೆರೆಯುತ್ತಿರುವ 'ಕಾಂತಾರ 1' ಸಿನಿಮಾ ಮೂಲಕ ರಿಷಬ್ ಶೆಟ್ಟಿಯವರು ಟಾಕ್ ಆಫ್ ದಿ ವರ್ಲ್ಡ್' ಆಗಿದ್ದಾರೆ. ಇದು 'ದೇವರು-ದೈವದ ಮಹಿಮೆಯೇ' ಎಂದು ಸ್ವತಃ ರಿಷಬ್ ಅವರೇ ಎಷ್ಟೋ ಕಡೆ ಹೇಳಿಕೊಂಡಿದ್ದಾರೆ.
55
ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆ
ಅಷ್ಟೇ ಅಲ್ಲ, ಕಾಂತಾರ ಸಿನಿಮಾಗಳ ಮೇಕಿಂಗ್ ಹಾಗೂ ಸಿಕ್ಕಿರುವ 'ರಿಷಬ್ ಶೆಟ್ಟಿಯವರಿಂದ ತುಳುನಾಡು ದೇವರು-ದೈವ ಪ್ರಪಂಚಕ್ಕೆ ಪರಿಚಯ ಆಗಿದ್ದೋ ಅಥವಾ ತುಳುನಾಡ ದೈವದ ಕೃಪೆಯಿಂದ ರಿಷಬ್ ಶೆಟ್ಟಿಯವರು ಜಗತ್ತಿನ ಕಣ್ಣಿಗೆ ಬಿದ್ದಿರೋ' ಎಂಬ ಚರ್ಚೆ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಶುರುವಾಗಿದೆ.