ಗೊತ್ತಿರದ ಭಾಷೆಯಲ್ಲಿ ಮಾತಾಡಿ ಆಭಾಸವಾದರೆ ಆ ಭಾಷೆಗೆ ಅಗೌರವ ತೋರಿಸಿದಂತಾಗುತ್ತದೆ. ಇದನ್ನು ಅರ್ಥ ಮಾಡಿಕೊಳ್ಳದ ಕೆಲವರು ಅಲ್ಲಿ ಆ ಭಾಷೆ ಮಾತಾಡಿದ್ದಾರೆ ಎಂದು ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.
ಹೈದರಾಬಾದ್‌ನಲ್ಲಿ ನಡೆದ ‘ಕಾಂತಾರ ಚಾಪ್ಟರ್ 1’ ಸಿನಿಮಾ ಈವೆಂಟ್‌ನಲ್ಲಿ ರಿಷಬ್ ಶೆಟ್ಟಿ ಕನ್ನಡದಲ್ಲಿ ಮಾತನಾಡಿದ್ದು ವಿವಾದವಾಗಿತ್ತು. ಇದೀಗ ಆ ವಿವಾದಕ್ಕೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.
26
ಭಾಷೆಯ ಬಗ್ಗೆ ಪ್ರೀತಿ, ಅಭಿಮಾನ ಇರುತ್ತದೆ
ಈ ಕುರಿತು ರಿಷಬ್, ನಾನು ಹೆಮ್ಮೆಯ ಕನ್ನಡಿಗ. ನನ್ನ ಯೋಚನೆ, ಮಾತು, ಕೃತಿ ಎಲ್ಲಾ ಕನ್ನಡದಲ್ಲೇ ನಡೆಯುತ್ತದೆ. ಇತರ ಭಾಷೆಯವರಿಗೂ ತಮ್ಮ ಭಾಷೆಯ ಬಗ್ಗೆ ಇದೇ ರೀತಿಯ ಪ್ರೀತಿ, ಅಭಿಮಾನ ಇರುತ್ತದೆ.
36
ಭಾಷೆಗೆ ಅಗೌರವ ಆಗಬಾರದು
ಬೇರೆ ಭಾಷೆಗಳನ್ನು ಕಲಿತು ಮಾತಾಡೋದು ನನಗೆ ಖುಷಿ ನೀಡುತ್ತದೆ. ಆದರೆ ಇನ್ನೊಂದು ಜಾಗಕ್ಕೆ ಹೋಗಿ ಮಾತಾಡುವಾಗ ಆ ಸ್ಥಳೀಯ ಭಾಷೆಗೆ ಅಗೌರವ ಆಗಬಾರದು ಎಂಬ ಕಾಳಜಿ ನನ್ನದು.
ಇದನ್ನು ಮನಸ್ಸಲ್ಲಿಟ್ಟುಕೊಂಡು ನಾನು ಇತ್ತೀಚೆಗೆ ಬೇರೆ ರಾಜ್ಯದಲ್ಲಿ ನನಗೆ ಗೊತ್ತಿರುವ ಕನ್ನಡದಲ್ಲೇ ಮಾತಾಡಿದೆ. ಅದು ನನಗೆ ತಿರುಗುಬಾಣವಾಯಿತು ಎಂದಿದ್ದಾರೆ.
56
ಅಗೌರವ ತೋರಿಸಿದಂತಾಗುತ್ತದೆ
ಗೊತ್ತಿರದ ಭಾಷೆಯಲ್ಲಿ ಮಾತಾಡಿ ಆಭಾಸವಾದರೆ ಆ ಭಾಷೆಗೆ ಅಗೌರವ ತೋರಿಸಿದಂತಾಗುತ್ತದೆ. ಇದನ್ನು ಅರ್ಥ ಮಾಡಿಕೊಳ್ಳದ ಕೆಲವರು ಅಲ್ಲಿ ಆ ಭಾಷೆ ಮಾತಾಡಿದ್ದಾರೆ.
66
ಅದು ಸರಿಯಲ್ಲ
ಇಲ್ಲಿ ಈ ಭಾಷೆ ಮಾತಾಡಿಲ್ಲ ಎಂದೆಲ್ಲ ಆರೋಪಿಸುತ್ತಿದ್ದಾರೆ, ಅದು ಸರಿಯಲ್ಲ ಎಂದಿದ್ದಾರೆ ರಿಷಬ್ ಶೆಟ್ಟಿ. ಇನ್ನು ‘ಕಾಂತಾರ ಚಾಪ್ಟರ್ 1’ ನಾಳೆ ಅಕ್ಟೋಬರ್ 2ರಂದು ಬಿಡುಗಡೆಯಾಗುತ್ತಿದೆ.