ರಿಷಬ್ ಶೆಟ್ಟಿ ಅವರು ಮತ್ತೊಂದು ದೊಡ್ಡ ತೆಲುಗು ನಿರ್ಮಾಣ ಸಂಸ್ಥೆಯಲ್ಲಿ ಸಿನಿಮಾ ಮಾಡಲಿದ್ದಾರೆ. ಈಗಾಗಲೇ ದುಲ್ಕರ್ ಸಲ್ಮಾನ್ ನಟನೆಯ ‘ಲಕ್ಕಿ ಭಾಸ್ಕರ್’ ಹಾಗೂ ನಾನಿ ಅಭಿನಯದ ‘ಜೆರ್ಸಿ’ ಚಿತ್ರಗಳನ್ನು ನಿರ್ಮಿಸಿದ್ದ ಸಿತಾರಾ ಎಂಟರ್‌ಟೇನ್‌ಮೆಂಟ್ ನಿರ್ಮಾಣದಲ್ಲಿ ರಿಷಬ್ ಶೆಟ್ಟಿ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ.
25
ಇದೂ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಐದು ಭಾಷೆಗಳಲ್ಲಿ ಮೂಡಿ ಬರಲಿದೆ ಎಂಬುದು ಸದ್ಯದ ಸುದ್ದಿ. ಆದರೆ, ಈ ಚಿತ್ರ ಯಾವಾಗ ಸೆಟ್ಟೇರುತ್ತದೆ, ನಿರ್ದೇಶಕರು ಯಾರು ಎನ್ನುವ ಮಾಹಿತಿ ಇಲ್ಲ.
35
ಸದ್ಯಕ್ಕೆ ‘ಜೈ ಹನುಮಾನ್’ ಹಾಗೂ ‘ಛತ್ರಪತಿ ಶಿವಾಜಿ’ ಚಿತ್ರಗಳು ರಿಷಬ್ ಶೆಟ್ಟಿ ಅವರ ಮುಂದಿವೆ. ‘ಜೈ ಹನುಮಾನ್’ ಚಿತ್ರದ ನಿರ್ದೇಶಕ ಪ್ರಶಾಂತ್ ವರ್ಮಾ ಬೇರೆ ಚಿತ್ರದಲ್ಲಿ ತೊಡಗಿಸಿಕೊಂಡಿರುವುದರಿಂದ ರಿಷಬ್ ಶೆಟ್ಟಿ ಅವರು ಸಿತಾರಾ ಎಂಟರ್‌ಟೇನ್‌ಮೆಂಟ್ ನಿರ್ಮಾಣ ಸಂಸ್ಥೆ ಜತೆಗೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ.
ರಿಷಬ್ ಶೆಟ್ಟಿ ಇತ್ತಿಚೆಗೆ ಹುಟ್ಟುಹಬ್ಬವನ್ನ ಆಚರಿಸಿಕೊಂಡರು. ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನಕ್ಕೆ ಕುಟುಂಬ ಸಮೇತ ಆಗಮಿಸಿದ ರಿಷಬ್ ಶೆಟ್ಟಿ ದೇವರ ದರ್ಶನ ಪಡೆದರು. ಅಲ್ಲದೇ ಪತ್ನಿ - ಮಕ್ಕಳ ಜೊತೆಗೆ ಕೇಕ್ ಕಟ್ ಮಾಡಿ ಸಂಭ್ರಮಿಸಿದರು.
55
ಇನ್ನು 'ಕಾಂತಾರ' ಸಿನಿಮಾದ ಮೂಲಕ ಗಮನ ಸೆಳೆದಿರುವ ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯಲ್ಲಿ ಈಗ 'ಕಾಂತಾರ ಚಾಪ್ಟರ್ 1' ಮೂಡಿಬರುತ್ತಿದೆ. ಇದೇ ವರ್ಷದ ಅಕ್ಟೋಬರ್ 2ರಂದು ಸಿನಿಮಾ ರಿಲೀಸ್ ಆಗಲಿದೆ.