ಸುಶಾಂತ್ ಸಾವಿಗೂ ಮುನ್ನ ಯಾರ ಸಂಪರ್ಕದಲ್ಲಿದ್ದರು ರಿಯಾ?  ಮೊಬೈಲ್‌ ನಿಂದ ಶಾಕಿಂಗ್ ಮಾಹಿತಿ!

First Published | Aug 11, 2020, 3:25 PM IST

ಮುಂಬೈ(ಆ. 10)  ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿಚಾರ ಬಗೆದಷ್ಟು ಆಳಕ್ಕೆ ಹೋಗುತ್ತಿದೆ. ಜಾರಿ ನಿರ್ದೇಶನಾಲಯ(ಇಡಿ) ಸುಶಾಂತ್ ಪ್ರೇಯಸಿ ಎಂದು ಕರೆಸಿಕೊಂಡಿದ್ದ ರಿಯಾ ಚಕ್ರವರ್ತಿ ಪೋನ್ ಮಾಹಿತಿ ಕಲೆಹಾಕಿದಾಗ ಒಂದಷ್ಟು ಶಾಕಿಂಗ್ ಅಂಶಗಳು ಪತ್ತೆಯಾಗಿವೆ.

ಅಕ್ರಮ ಹಣ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರಿಯಾ ಅವರನ್ನು ವಿಚಾರಣೆ ಮಾಡಿದ್ದಾರೆ.
ಈ ವೇಳೆ ಜಾರಿ ನಿರ್ದೇಶನಾಲಯ ಅವರ ಮೊಬೈಲ್ ಪರಿಶೀಲನೆ ಮಾಡಿದಾಗ ಒಂದಷ್ಟು ಅಂಶಗಳು ಬಹಿರಂಗವಾಗಿವೆ.
Tap to resize

ಜೂನ್ 8 ರ ನಂತರದಲ್ಲಿ ರಿಯಾ ನಿರ್ದೇಶಕ ಮಹೇಶ್ ಭಟ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದರು ಎಂಬ ಅಂಶ ಪತ್ತೆಯಾಗಿದೆ.
ರಿಯಾ ತನ್ನ ಸಿನಿಮಾ ಪ್ರಯಾಣದ ಬಗ್ಗೆ ಒಂದಿಷ್ಟು ಸಕಾರಾತ್ಮಕ ವರದಿ ಮಾಡಲು ಮಹೇಶ್ ಭಟ್ ಬಳಿ ಪತ್ರಕರ್ದತರೊಬ್ಬರ ಸಹಾಯ ಮಾಡಿಸುವಂತೆ ಕೇಳಿಕೊಂಡಿದ್ದರು ಎಂಬುದು ಗೊತ್ತಾಗಿದೆ.
ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಶೌವಿಕ್ ರನ್ನು ಇಡಿ ಗಂಟೆಗಟ್ಟಲೆ ಕಾಲ ಪ್ರಶ್ನೆ ಮಾಡಿದೆ.
ಹಣ ವರ್ಗವಾಣೆ ಬಗ್ಗೆ ಸರಿಯಾದ ಮಾಹಿತಿ ನೀಡಲು ಇಬ್ಬರು ವಿಫಲರಾಗಿದ್ದಾರೆ ಎಂದು ವರದಿಯಾಗಿದೆ.
ಬಂಡವಾಳ ಹೂಡಿಕೆ ಮಾಹಿತಿ ನೀಡಲು ರಿಯಾ ವಿಫಲರಾಗಿದ್ದಾರೆ.
ಇದಲ್ಲದೆ ಜಾರಿ ನಿರ್ದೇಶನಾಲಯ ಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್ ಶ್ರುತಿ ಮೋದಿ ಮತ್ತಿ ಸಿದ್ಧಾರ್ಥ್ ಪಿಥಾಣಿ ಅವರನ್ನು ಪ್ರಶ್ನೆ ಮಾಡಿದೆ.
ಸುಶಾಂತ್ ಸಿಂಗ್ ಸಾವಿನ ತನಿಖೆಯನ್ನು ಸಿಬಿಐಗೆ ನೀಡಲಾಗಿದ್ದು ಸಿಬಿಐ ಸಹ ತನ್ನದೇ ನೆಲಗಟ್ಟಿನಲ್ಲಿ ಮಾಹಿತಿ ಕಲೆಹಾಕುತ್ತಿದೆ.

Latest Videos

click me!