ಕಪ್ಪಗೆ, ದಪ್ಪಗಿದ್ದ ರೇಖಾಗೆ ಕಪ್ಪು ಬಾತು ಕೋಳಿ ಎನ್ನುತ್ತಿದ್ದ ಬಾಲಿವುಡ್, ಬೆಳೆದ ಪರಿಗೆ ಸರಿಸಾಟಿಯೇ ಇಲ್ಲ!

Published : Oct 10, 2023, 08:44 PM IST

ಬಾಲಿವುಡ್‌ನ ಹಿರಿಯ ದಿವಾ ರೇಖಾ ಎವರ್‌ಗ್ರೀನ್‌ ಬ್ಯೂಟಿ. 69 ವರ್ಷದ ರೇಖಾ ಇಂದಿಗೂ ತಮ್ಮ ಸೌಂದರ್ಯದಿಂದ ಇಡೀ ಜಗತ್ತು ತನ್ನಡೆ ತಿರುಗುವಂತೆ ಮಾಡುವ ಮ್ಯಾಜಿಕ್‌ ಹೊಂದಿದ್ದಾರೆ. 10 ಅಕ್ಟೋಬರ್ 1954 ರಂದು ಚೆನ್ನೈನಲ್ಲಿ ಜನಿಸಿದ ರೇಖಾ ಮೊದಲು ಹೀಗೆ ಇರಲಿಲ್ಲ. ಅವರ ಹಳೆಯ ಫೋಟೋಗಳನ್ನು ನೋಡಿದರೆ ಗುರುತಿಸುವುದು ಅಸಾಧ್ಯ ರೇಖಾರ ಅವರ ಈ ಮಟ್ಟದ ರೂಪಾಂತರ ಹಿಂದಿನ ಗುಟ್ಟು ಇಲ್ಲಿದೆ. 

PREV
116
ಕಪ್ಪಗೆ, ದಪ್ಪಗಿದ್ದ ರೇಖಾಗೆ ಕಪ್ಪು ಬಾತು ಕೋಳಿ ಎನ್ನುತ್ತಿದ್ದ ಬಾಲಿವುಡ್, ಬೆಳೆದ ಪರಿಗೆ ಸರಿಸಾಟಿಯೇ ಇಲ್ಲ!

ರೇಖಾರ  ಮೂಲ ಹೆಸರು ಭಾನುರೇಖಾ ಗಣೇಶನ್. ಆಕೆಯ ತಂದೆ (ಜೆಮಿನಿ ಗಣೇಶನ್) ಮತ್ತು ತಾಯಿ (ಪುಷ್ಪವಲ್ಲಿ) ಇಬ್ಬರೂ ಕ್ರಮವಾಗಿ ತಮಿಳು ಮತ್ತು ತೆಲುಗು ನಟರಾಗಿದ್ದರು. ಆದರೆ ಅವರ ತಂದೆಗೆ ಇವರ ಮೇಲೆ ಅಷ್ಟು ಪ್ರೀತಿಯೇ ಇರಲಿಲ್ಲ. 

216

ರೇಖಾ ಅವರು ಬಾಲ ಕಲಾವಿದೆಯಾಗಿ ತೆಲುಗು ಚಿತ್ರಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರು ದಪ್ಪಗೆ, ಕಪ್ಪಾಗಿದ್ದರು ಮತ್ತು ಹಿಂದಿ ಮಾತನಾಡಲು ಬರುತ್ತಿರಲಿಲ್ಲ. 

316

ವರದಿಗಳ ಪ್ರಕಾರ, ರೇಖಾಗೆ ಉತ್ತಮ ಬಾಲ್ಯವಿರಲಿಲ್ಲ ಮತ್ತು ಅವರು ತಂದೆಯ ಸಂಬಂಧಕ್ಕಾಗಿ ಹಂಬಲಿಸುತ್ತಿದ್ದರು. ಆದರೆ ಅದು ಸಂಭವಿಸಲಿಲ್ಲ.ಜೆಮಿನಿ ಗಣೇಶನ್ ರೇಖಾರನ್ನು ಮಗಳು ಎಂದು ಒಪ್ಪಿಕೊಳ್ಳಲೇ ಇಲ್ಲ.

416

ರೇಖಾ ತನ್ನ ಕಪ್ಪು ಮತ್ತು ದಪ್ಪ ನೋಟಕ್ಕಾಗಿ ಸಾಕಷ್ಟು ಟೀಕೆಗಳನ್ನು ಮತ್ತು ಕಟುವಾದ ಮಾತುಗಳನ್ನು ಎದುರಿಸಿದ್ದರು. 80ರ ದಶಕದಿಂದ ರೇಖಾ ಅವರು ನಕಾರಾತ್ಮಕತೆಗಳಿಂದ ಪಾಸಿಟಿವ್‌ ವೈಬ್ ಅನ್ನು ಮಾತ್ರ ತೆಗೆದುಕೊಳ್ಳಲು ಯೋಚಿಸಿದರು 

516

ತನಗೆ ಬಂದ ಟೀಕೆಗಳನ್ನು ತಮ್ಮ ಶಕ್ತಿಗೆ ಬಳಸಿಕೊಳ್ಳಲು ನಿರ್ಧರಿಸಿದರು ಮತ್ತು ಅವರ ಆಹಾರ, ಜೀವನ ವಿಧಾನ, ಚರ್ಮದ ಬಣ್ಣ ಮತ್ತು ಫಿಟ್ನೆಸ್‌ನಲ್ಲಿ ಸಂಪೂರ್ಣ ಬದಲಾವಣೆಗಳನ್ನು ಮಾಡಲು ನಿರ್ಧರಿಸಿದರು. 

616

ರೇಖಾ ದಪ್ಪವಾಗಿರುವುದನ್ನು ದ್ವೇಷಿಸಲು ಪ್ರಾರಂಭಿಸಿದರು. 'ಸಂಪೂರ್ಣವಾಗಿ ಸುಂದರ ಮಹಿಳೆಯಾಗಲು,ನೀವು ಸ್ಲಿಮ್ ಫಿಟ್ ಆಗಿರಬೇಕು. ಖಂಡಿತವಾಗಿಯೂ ಕೊಬ್ಬು ಅಲ್ಲ. ಫ್ಯಾಟ್‌ ಅಸಹ್ಯ' ಎಂದು  ಥ್ರೋಬ್ಯಾಕ್ ಸಂದರ್ಶನವೊಂದರಲ್ಲಿ, ರೇಖಾ ಹಂಚಿಕೊಂಡಿದ್ದಾರೆ, 

716

ಇನ್ನೂ ರೇಖಾ ಅವರ ಡ್ರೆಸ್ಸಿಂಗ್ ಸೆನ್ಸ್‌ ಬಗ್ಗೆ ಹೇಳುವುದಾದರೆ ನಟಿ ಅಮಿತಾಬ್ ಬಚ್ಚನ್ ಚಲನಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಲು ಪ್ರಾರಂಭಿಸಿದಾಗ ರೇಖಾ ಡ್ರೆಸ್ಸಿಂಗ್ ಮತ್ತು ಫ್ಯಾಷನ್ ಸಲಹೆಗಳನ್ನು ನೀಡುತ್ತಿದ್ದರು ಎಂಬ ವದಂತಿಗಳಿವೆ. ದೋ ಅಂಜಾನೆ (1976) ಚಿತ್ರದ ನಂತರ ರೇಖಾರಲ್ಲಿ ಬದಲಾವಣೆ ಸ್ಪಷ್ಟವಾಗಿ ಕಂಡುಬಂದವು.

816

ಕಪ್ಪು ಮೈ ಬಣ್ಣದ ತೂಕ ಹೆಚ್ಚಾಗಿದ್ದ ರೇಖಾಗೆ ಚೆನ್ನಾಗಿ ಹಿಂದಿ ಮಾತನಾಡಲು ಬರುತ್ತಿರಲಿಲ್ಲ. ಆಕೆಯನ್ನು ನಿರ್ದೇಶಕರು ಮತ್ತು ಸಹ ನಟರು ಅಪಹಾಸ್ಯ ಮಾಡಿದರು.

916

'ಈ ಕಪ್ಪು, ಕೊಬ್ಬಿದ ಮತ್ತು ಅಸಹ್ಯದ ನಟಿ ಹೇಗೆ ಸಾಧಿಸುತ್ತಾಳೆ ' ಎಂದು ಚಿತ್ರದ ಪ್ರೀಮಿಯರ್‌ನಲ್ಲಿ ಶಶಿ ಕಪೂರ್ ಅವರು ರೇಖಾ ಅವರ ಬಗ್ಗೆ ಹೀಗೆ ಹೇಳಿದ್ದರು.

1016

ವರ್ಷಗಳ ಪರಿಶ್ರಮ, ಆಹಾರಕ್ರಮದ ಬದಲಾವಣೆಗಳು ಮತ್ತು ಅನೇಕ ಚರ್ಮವನ್ನು ಬೆಳ್ಳಗಾಗಿಸುವ ಚಿಕಿತ್ಸೆಗಳು ರೇಖಾ ಅವರನ್ನು 'ಅಸಹ್ಯ ಬಾತುಕೋಳಿಯಿಂದ ಹಂಸ'ವನ್ನಾಗಿ ಮಾಡಿತು. 

1116

ಹಿಂದಿಯನ್ನು ಕರಗತ ಮಾಡಿಕೊಳ್ಳಲು ರೇಖಾ ತುಂಬಾ ಶ್ರಮಿಸಿದರು. ನಂತರ ಅವರು ಹಿಂದಿ ಮಾತನಾಡಲು ಬಾರದ ಇತರ ನಟಿಯರಿಗೆ ಡಬ್ಬಿಂಗ್ ಮಾಡಿದರು. ಅವರ ಮೆಗಾ-ಹಿಟ್ ಚಲನಚಿತ್ರ ಉಮ್ರಾವ್ ಜಾನ್ (1981) ಗಾಗಿ ಸ್ವತಃ ಉರ್ದುವನ್ನು ನಿರರ್ಗಳವಾಗಿ ಮತನಾಡಲು ಅನೇಕ ತರಬೇತಿಗಳನ್ನು ಕೈಗೊಂಡರು. 

1216

'ನನ್ನ ಕಪ್ಪು ಮೈಬಣ್ಣ ಮತ್ತು ದಕ್ಷಿಣ ಭಾರತದ ವೈಶಿಷ್ಟ್ಯಗಳಿಂದಾಗಿ ನನ್ನನ್ನು ಹಿಂದಿ ಚಲನಚಿತ್ರಗಳ 'ಅಗ್ಲಿ ಡಕ್ಲಿಂಗ್' ಎಂದು ಕರೆಯಲಾಗುತ್ತಿತ್ತು. ಜನರು ನನ್ನನ್ನು ಆ ಕಾಲದ ಪ್ರಮುಖ ನಾಯಕಿಯರೊಂದಿಗೆ ಹೋಲಿಸಿದಾಗ ಮತ್ತು ನಾನು ಅವರಿಗೆ ಸರಿ ಸಾಟಿಯಿಲ್ಲ ಎಂದು ಹೇಳಿದಾಗ ನನಗೆ ತುಂಬಾ ನೋವಾಗುತ್ತಿತ್ತು. ಸಂಪೂರ್ಣ ಅರ್ಹತೆಯ ಮೇಲೆ ಅದನ್ನು ದೊಡ್ಡದಾಗಿ ಮಾಡಲು ನಿರ್ಧರಿಸಿದೆ' ಎಂದು ಬಾಲಿವುಡ್‌ನಲ್ಲಿ ತನ್ನ ಆರಂಭಿಕ ವರ್ಷಗಳ ಬಗ್ಗೆ ಮಾತನಾಡುತ್ತಾ, ರೇಖಾ ಸ್ವತಃ ಸಂದರ್ಶನವೊಂದರಲ್ಲಿ ಹೇಳಿದ್ದರು.

1316

ಪ್ರತಿದಿನ 10-12 ಗ್ಲಾಸ್ ನೀರು ಕುಡಿಯುವುದು ರೇಖಾರ ಸೀಕ್ರೇಟ್‌ , ಮನೆಯಲ್ಲಿ ಆಯುರ್ವೇದ ಸ್ಪಾಗಳಲ್ಲಿ ತೊಡಗುತ್ತಾರೆ ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ನಿರ್ವಹಿಸುತ್ತಾರೆ.

1416

ರೇಖಾ ಮೇಕಪ್ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ ಮತ್ತು ಹೆಚ್ಚಾಗಿ ತನ್ನ ಎಲ್ಲಾ ಮೇಕಪನ್ನು ಸ್ವತಃ ಮಾಡುತ್ತಾರೆ ನಿಯಮಿತ ವ್ಯಾಯಾಮ, ಯೋಗ ಮತ್ತು ಧ್ಯಾನ ಮಾಡಲು ಇಷ್ಟಪಡುತ್ತಾರೆ . 

1516

ರೇಖಾ ತನ್ನನ್ನು ನೃತ್ಯ, ತೋಟಗಾರಿಕೆ ಮತ್ತು ತನ್ನ ಮನೆಕೆಲಸಗಳನ್ನು ಮಾಡುವುದರಲ್ಲಿ ನಿರತಳಾಗಿದ್ದಾರೆ. ಅವಳು ದಿನದ ಕೊನೆಯ ಊಟವನ್ನು ರಾತ್ರಿ 7.30 ರೊಳಗೆ ತಿನ್ನುತ್ತಾರೆ.

1616

ರೇಖಾ ಅವರು ಇಂದು ಸುಂದರ ದಿವಾ ಆಗಲು  ತುಂಬಾ ಶ್ರಮಿಸಿದ್ದರು. ಜನರು ಬೆನ್ನ ಹಿಂದೆ ಏನು ಮಾತನಾಡುತ್ತಿದ್ದಾರೆ  ಎಂಬುದನ್ನು ಕಡೆಗಣಿಸಿ ಟೀಕೆಗಳನ್ನ ಪಾಸಿಟಿವ್‌ ಆಗಿ ತೆಗೆದುಕೊಂಡರು.

Read more Photos on
click me!

Recommended Stories