ಜ್ಯೂ.ಎನ್‌ಟಿಆರ್ ಸಿನಿಮಾ ನಂಗೆ ಇಷ್ಟವಾಗಲಿಲ್ಲ: ಡಾರ್ಲಿಂಗ್ ಪ್ರಭಾಸ್

First Published Oct 9, 2024, 12:06 PM IST

ಭಾರತೀಯ ಸಿನಿಮಾ ರಂಗದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್‌ಗಳಾಗಿರುವ ಜ್ಯೂನಿಯರ್ ಎನ್‌ಟಿಆರ್ ಮತ್ತು ಪ್ರಭಾಸ್ ನಡುವೆ ಆರೋಗ್ಯಕರ ಪೈಪೋಟಿ ಇದೆ. ರೆಬೆಲ್ ಸ್ಟಾರ್ ಡಾರ್ಲಿಂಗ್ ಪ್ರಭಾಸ್ ಅವರು ನಟ ಜ್ಯೂ.ಎನ್‌ಟಿಆರ್ ಸಿನಿಮಾ ನನಗೆ ಇಷ್ಟವಾಗಲಿಲ್ಲ ಎಂದು ನೇರವಾಗಿ ಹೇಳಿದ್ದರು. ಈ ಸುದ್ದಿ ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಎನ್‌ಟಿಆರ್, ಪ್ರಭಾಸ್, ಸ್ಟೂಡೆಂಟ್ ನಂ 1

ದಕ್ಷಿಣ ಚಿತ್ರರಂಗದಲ್ಲಿ ಸ್ಟಾರ್ ನಟರೂ ಆಗಿರುವ ಪ್ಯಾನ್ ಇಂಡಿಯಾ ಸ್ಟಾರ್ ಜ್ಯೂನಿಯರ್ ಎನ್‌ಟಿಆರ್ ಸಿನಿಮಾದ ಬಗ್ಗೆ ನಟ ಪ್ರಭಾಸ್ ಕಾಮೆಂಟ್ ಮಾಡಿದ್ದಾರೆ.  ಜ್ಯೂ.ಎನ್‌ಟಿಆರ್ ಅವರು ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಪ್ರಸ್ತುತ ಕೊರಟಾಲ ಶಿವ ನಿರ್ದೇಶನದ  ದೇವರ ಸಿನಿಮಾ ಸೂಪರ್ ಹಿಟ್ ಆಗಿರುವುದರಿಂದ ..ಆ ಯಶಸ್ಸನ್ನು ಆನಂದಿಸುತ್ತಿದ್ದಾರೆ.

ಆದರೆ, ಸೆಪ್ಟೆಂಬರ್ 27 ರಂದು ಬಿಡುಗಡೆಯಾದ ಈ ಚಿತ್ರವು ದಾಖಲೆಗಳನ್ನು ಮುರಿಯುತ್ತಾ ಮುನ್ನುಗ್ಗುತ್ತಿದೆ. ಅದೇ ಸಮಯದಲ್ಲಿ ಎನ್‌ಟಿಆರ್ ಅವರ ಅಭಿಮಾನಿ ಬಳಗವೂ ದ್ವಿಗುಣಗೊಂಡಿದೆ. ಅದೇ ಸಮಯದಲ್ಲಿ ಎನ್ಟಿಆರ್ ಸಿನಿಮಾಗಳು ಎಲ್ಲರಿಗೂ ಇಷ್ಟವಾಗುತ್ತದೆಯೇ ಎಂದರೆ ಕೆಲವರಿಗೆ ಇಷ್ಟವಾಗಬಹುದು. ಇನ್ನು ಕೆಲವರಿಗೆ ಇಷ್ಟವಾಗದಿರಬಹುದು. ಪ್ರಭಾಸ್‌ಗೆ ಜ್ಯೂ.ಎನ್‌ಟಿಆರ್ ಅವರ ಒಂದು ಸಿನಿಮಾ ಇಷ್ಟವಾಗಲಿಲ್ಲವಂತೆ. ಆ ವಿಷಯವನ್ನು ವೇದಿಕೆಯ ಮೇಲೆಯೇ ಹೇಳಿ ಶಾಕ್ ನೀಡಿದ್ದಾರೆ.

ಎನ್‌ಟಿಆರ್, ಪ್ರಭಾಸ್, ಸ್ಟೂಡೆಂಟ್ ನಂ 1

ರೆಬೆಲ್ ಸ್ಟಾರ್ ಡಾರ್ಲಿಂಗ್ ಪ್ರಭಾಸ್ ರಾಜಾಸಾಬ್, ಫೌಜಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ಅಭಿಮಾನಿಗಳು ಕೂಡ ರಾಜಾಸಾಬ್ , ಫೌಜಿ  ಚಿತ್ರಗಳ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮತ್ತೊಂದೆಡೆ  ಪ್ರಭಾಸ್ ಇಲ್ಲದೆಯೇ ಫೌಜಿ ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದರ ನಂತರ ಸ್ಪಿರಿಟ್ ಚಿತ್ರ ಮಾಡಬೇಕಿದೆ. ಇನ್ನು ಎನ್‌ಟಿಆರ್ ವಾರ್-2, ದೇವರ-2  ಹಾಗೂ  ಪ್ರಶಾಂತ್ ನೀಲ್ ಜೊತೆ ಒಂದು ಚಿತ್ರವನ್ನು  ಮಾಡಬೇಕಿದೆ.

Latest Videos


ಪ್ರಭಾಸ್  ಪ್ರತಿಯೊಬ್ಬರೊಂದಿಗೂ ಬಹಳ ಸ್ನೇಹದಿಂದ ಇರುತ್ತಾರೆ. ಚಿತ್ರೀಕರಣದ ಸಮಯದಲ್ಲಿ ಎಲ್ಲರಿಗೂ ತಮ್ಮ ಮನೆಯಿಂದಲೇ ಊಟ ತರುತ್ತಾರೆ. ಒಂದು ರೀತಿಯಲ್ಲಿ ಅಜಾತಶತ್ರು ಎನ್ನಬಹುದು. ಅಂತಹ ಅಜಾತಶತ್ರು ಆಗಿರುವ ಪ್ರಭಾಸ್ ಜೂನಿಯರ್ ಎನ್‌ಟಿಆರ್ ಬಗ್ಗೆ ಕಾಮೆಂಟ್ ಮಾಡಿದ್ದಾರೆ ಎಂದರೆ ಆಶ್ಚರ್ಯವಾಗುತ್ತದೆ.

ಇವರಿಬ್ಬರ ನಡುವೆ ಮಾತುಕತೆ ಇಲ್ಲ ಎಂಬ ಚರ್ಚೆಯೂ ಚಿತ್ರರಂಗದಲ್ಲಿ ನಡೆಯುತ್ತಿದೆ. ಆದರೆ, ಇಬ್ಬರೂ ಆಪ್ತ ಸ್ನೇಹಿತರು ಎಂಬುದು ಬಹಳ ಕಡಿಮೆ ಜನರಿಗೆ ತಿಳಿದಿರುವ ವಿಷಯ. ಪ್ರಭಾಸ್ ನೀಡುವ ಪಾರ್ಟಿಗಳಿಗೆಲ್ಲಾ ಎನ್‌ಟಿಆರ್ ಹಾಜರಾಗುತ್ತಾರೆ. 

ಟಾಲಿವುಡ್ ನ ಚಾರ್ಮಿಂಗ್ ಸ್ಟಾರ್ಸ್:

ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುತ್ತಾ, ಪ್ಯಾನ್ ಇಂಡಿಯಾ ನಟರಾಗಿರುವ ಈ ಇಬ್ಬರಿಗೂ ಒಬ್ಬ ನಿರ್ದೇಶಕರಿಂದ ಭಿನ್ನಾಭಿಪ್ರಾಯಗಳು ಉಂಟಾಗಿವೆ ಎಂಬುದು ಸುಳ್ಳಾಗಿದ್ದರೂ, ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ರೀತಿಯ ಗೊಂದಲ ನಡೆಯುತ್ತಿದೆ. ದೇವರ ಚಿತ್ರವನ್ನು ನೋಡಿ ಪ್ರಭಾಸ್  ಸ್ವತಃ ಅಭಿನಂದಿಸಿದ್ದಾರೆ ಎಂದು ಹೇಳುತ್ತಾರೆ. ಅದನ್ನು ಬದಿಗಿಟ್ಟು ಎನ್‌ಟಿಆರ್ ಅವರ ಸ್ಟೂಡೆಂಟ್ ನಂಬರ್ ಒನ್ (Student No 1) ಸಿನಿಮಾ ಅವರಿಗೆ ಇಷ್ಟವಾಗಲಿಲ್ಲವಂತೆ. ಆ ವಿಷಯವನ್ನು ವೇದಿಕೆಯ ಮೇಲೆ ಪ್ರಭಾಸ್ ಸ್ವತಃ ಹೇಳಿದ್ದಾರೆ.

ಪ್ರಶಾಂತ್ ನೀಲ್, ಸಲಾರ್ 2

ಈ ಬಗ್ಗೆ ವೇದಿಕೆಯೊಂದಲ್ಲಿ ನಟ ಪ್ರಭಾಸ್ ಮಾತನಾಡುತ್ತಾ...ನನಗೆ ಜ್ಯೂ.ಎನ್‌ಟಿಆರ್ ನಟನೆಯ ಸ್ಟೂಡೆಂಟ್ ನಂಬರ್ ಒನ್ ಸಿನಿಮಾ ಇಷ್ಟವಾಗಲಿಲ್ಲ. ನಿಜವಾಗಿಯೂ ಇಷ್ಟವಾಗಲಿಲ್ಲ. ಅದರೆ ಅದು ಬಹಳ ದೊಡ್ಡ ಹಿಟ್ ಚಿತರವಾಗಿತ್ತು. ಈ ಹೇಳಿಕೆಯಿಂದಾಗಿ ನನ್ನನ್ನು ತಪ್ಪಾಗಿ ಭಾವಿಸಬೇಡಿ. ಆದರೆ, ಸಿನಿಮಾ ಇಷ್ಟವಾಗಲಿಲ್ಲ. ಕೆಲವು ದಿನಗಳ ನಂತರ ವರ್ಷಂ ಸಿನಿಮಾ ಮಾಡುವಾಗ ಈಶ್ವರ್, ರಾಘವೇಂದ್ರ ಬಿಡುಗಡೆಯಾಯಿತು. ವರ್ಷಂ ನಡೆಯುತ್ತಿರುವಾಗಲೇ ಸಿಂಹಾದ್ರಿ ಬಿಡುಗಡೆಯಾಯಿತು. ಅದನ್ನು ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಎನ್ನುತ್ತಿದ್ದಾರೆ.

ತಾರಖ್ ಸಿನಿಮಾ ರಿಲೀಸ್‌ಗೂ ಮುನ್ನ ನನಗೆ ಕರೆ ಮಾಡಿ ಪ್ರಿವ್ಯೂ ನೋಡೋಣ ಎಂದು ಕರೆದರು. ಹಾಗಾಗಿ ಪ್ರಿವ್ಯೂಗೆ ಹೋದೆವು. ಸಿಂಹಾದ್ರಿ ನೋಡುತ್ತಿದ್ದರೆ ನನಗೆ ಮೆಂಟಲ್ ಆಗಿ ಹೋಯಿತು. ಹುಚ್ಚು ಹಿಡಿದಂತಾಯಿತು. ಸ್ಟೂಡೆಂಟ್ ನಂಬರ್ ಒನ್ ತೆಗೆದ ನಿರ್ದೇಶಕರೇ ಈ ಸಿನಿಮಾ ತೆಗೆದಿದ್ದಾರೆ. ನಾನು ಜೀವನದಲ್ಲಿ ಆ ನಿರ್ದೇಶಕರೊಂದಿಗೆ ಸಿನಿಮಾ ಮಾಡುವುದಿಲ್ಲ ಎಂದುಕೊಂಡಿದ್ದೆನು. ಆದರೆ, ನಂತರ ಅವರ ಜೊತೆ ಸತತ ಸಿನಿಮಾಗಳನ್ನು ಮಾಡಿದೆ ಎಂದು  ಪ್ರಭಾಸ್ ತಮ್ಮ ಮನದಾಳದ ಮಾತನ್ನು ಹೇಳಿದರು. ಆದರೆ, ಜ್ಯೂ.ಎನ್‌ಟಿಆರ್ ಅದನ್ನು ನಗುತ್ತಲೇ ಸ್ವೀಕರಿಸಿದರು. ಅಷ್ಟೇ ತಾನೇ.. ಪ್ರತಿಯೊಂದು ಸಿನಿಮಾ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ ಎಂದು ಹೇಳಲಾಗುವುದಿಲ್ಲ. ಸಿಂಹಾದ್ರಿ ಭಾವನೆ ಬೇರೆ, ಸ್ಟೂಡೆಂಟ್ ನಂಬರ್ ಒನ್ ಭಾವನೆ ಬೇರೆ ಎಂಬುದು ಸತ್ಯ. 

click me!