ಸಂದೀಪ್ ವಂಗಾ ಸ್ಪೆಷಲ್ ಡಿಮ್ಯಾಂಡ್‌ಗೆ ಓಕೆ ಅಂದ ಪ್ರಭಾಸ್; ಶೂಟಿಂಗ್ ವಿಳಂಬಕ್ಕೂ ಇದೆ ಕಾರಣ!

First Published | Oct 9, 2024, 12:00 PM IST

ಪ್ರಾಮಾಣಿಕ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಟಾಲಿವುಡ್ ಬಾಹುಬಲಿ ಪ್ರಭಾಸ್ ಕಾಣಿಸಿಕೊಳ್ಳಲಿದ್ದಾರೆ. ಆದ್ರೆ ಆಪ್ತ ವ್ಯಕ್ತಿಯೊಬ್ಬರ ವಿಷಯದಲ್ಲಿ ಒಂದು ತಪ್ಪು ನಡೆಯುತ್ತದೆ. ಆ ತಪ್ಪಿನ ಬಳಿಕ ಪೊಲೀಸ್ ಅಧಿಕಾರಿಯ ಮುಂದಿನ ನಡೆ ಏನಾಗಿರುತ್ತೆ?

ಸಂದೀಪ್ ವಂಗಾ, ಪ್ರಭಾಸ್

'ಕಲ್ಕಿ2898 AD' ಸಿನಿಮಾದ ಮೂಲಕ ಪ್ರಭಾಸ್ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದಾರೆ. 'ಕಲ್ಕಿ' ಚಿತ್ರದಲ್ಲಿ ಯಂಗ್ ರೆಬೆಲ್ ಸ್ಟಾರ್ ನಟನೆಗೆ ಉತ್ತರ ಭಾರತದಲ್ಲೂ ಹೊಸ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ. ಅಲ್ಲಿನ ಸಿನಿ ಪ್ರೇಕ್ಷಕರು ಕೂಡ, ಪ್ರಭಾಸ್ ಸಿನಿಮಾ ಬಿಡುಗಡೆಯಾದರೆ ನೋಡಲೇಬೇಕೆಂದು ನಿರ್ಧರಿಸಿದ್ದಾರೆ. 'ಕಲ್ಕಿ' ನಂತರ ಪ್ರಭಾಸ್‌ ನಟಿಸುತ್ತಿರುವ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಆರಂಭವಾಗಿದೆ.

ಈಗಾಗಲೇ ಪ್ರಭಾಸ್  'ಕಲ್ಕಿ' ಜೊತೆಗೆ ಫೌಜಿ, 'ಸಲಾರ್ 2', 'ರಾಜಾಸಾಬ್​', 'ಸ್ಪಿರಿಟ್​', 'ಕನ್ನಪ್ಪ' ಚಿತ್ರಗಳಿಗೆ ಸಹಿ ಹಾಕಿರುವುದು ಗೊತ್ತೇ ಇದೆ. 'ಕಲ್ಕಿ' ಚಿತ್ರೀಕರಣದ ಸಂದರ್ಭದಲ್ಲಿ ಅಲ್ಲಲ್ಲಿ ರಾಜಾಸಾಬ್, ಕನ್ನಪ್ಪ  ಚಿತ್ರೀಕರಣದಲ್ಲೂ ಪ್ರಭಾಸ್‌ ಭಾಗಿಯಾಗುತ್ತಿದ್ದರು. ಆದರೆ ಈ ಸಿನಿಮಾಗಳನ್ನು ಹೊರತುಪಡಿಸಿ ಅಭಿಮಾನಿಗಳು ಸ್ಪಿರಿಟ್ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಸಂದೀಪ್ ವಂಗಾ.

ಸಂದೀಪ್ ವಂಗಾ ತಮ್ಮ ಮುಂದಿನ ಚಿತ್ರ ಸ್ಪಿರಿಟ್ ಚಿತ್ರಕಥೆಯನ್ನು ಬಹುತೇಕ ಮುಗಿಸಿದ್ದು, ಪ್ರಿ ಪ್ರೊಡಕ್ಷನ್ ಕೆಲಸಗಳು ಸಹ ಆರಂಭವಾಗಿವೆ. ಎಲ್ಲಾ ಅಂದುಕೊಂಡಂತೆ ಆದ್ರೆ 2025ರ ಆರಂಭದಲ್ಲಿಯೇ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಇದಕ್ಕೂ ಮೊದಲು ಅಕ್ಟೋಬರ್‌ನಿಂದಲೇ ಶೂಟಿಂಗ್ ಆರಂಭಿಸಬೇಕೆಂದು ಸಂದೀಪ್ ವಂಗಾ ಪ್ಲಾನ್ ಮಾಡಿದ್ದರು. ಆದ್ರೆ ಕಾರಣಾಂತರಗಳಿಂದ ಚಿತ್ರೀಕರಣವನ್ನು ಮುಂದೂಡಲಾಗಿದೆ. ವರದಿಗಳ ಪ್ರಕಾರ ಚಿತ್ರೀಕರಣವನ್ನು 6 ತಿಂಗಳು ಮುಂದೂಡಲಾಗಿದೆ.

ಚಿತ್ರೀಕರಣವನ್ನು ಮುಂದೂಡಲು ಕಾರಣವೇ ಪ್ರಭಾಸ್. ಈ ಚಿತ್ರದಲ್ಲಿ ಸಂದೀಪ್ ವಂಗಾ ವಿಶೇಷ ಪಾತ್ರವೊಂದನ್ನು ಪ್ರಭಾಸ್‌ ಅವರಿಗಾಗಿಯೇ ವಿನ್ಯಾಸಗೊಳಿಸಿದ್ದಾರಂತೆ. ಈ ಪಾತ್ರಕ್ಕಾಗಿ ಪ್ರಭಾಸ್ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಬೇಕಾಗಿದ್ದು, ಇದಕ್ಕಾಗಿ ಸಮಯ ಬೇಕಾಗುತ್ತದೆ. ಈ ಕಾರಣದಿಂದ ಚಿತ್ರೀಕರಣವನ್ನು ಮುಂದೂಡಲಾಗಿದೆಯಂತೆ. ಈಗಾಗಲೇ ಪ್ರಭಾಸ್ ಜೊತೆಗೆ ಒಂದು ಸುತ್ತಿನ ಫೋಟೋಶೂಟ್‌ ಕೂಡ ನಡೆದಿದೆ. ಇದರಲ್ಲಿ ಒಂದು 
ಲುಕ್‌ನ್ನು ಅಂತಿಮಗೊಳಿಸಲಾಗಿದೆ.

Tap to resize

ಸಂದೀಪ್ ವಂಗಾ, ಸ್ಪಿರಿಟ್ ಸಿನಿಮಾ, ಪ್ರಭಾಸ್

ಸಂದೀಪ್ ವಂಗಾ ಪ್ರಭಾಸ್ ಗೆ ಒಂದು ಷರತ್ತು ಇಟ್ಟಿದ್ದಾರಂತೆ. ಅದೇನೆಂದರೆ ತಮ್ಮ ಸ್ಪಿರಿಟ್ ಚಿತ್ರ ಮಾಡುವಾಗ ಬೇರೆ ಯಾವುದೇ ಚಿತ್ರಗಳಲ್ಲಿ ನಟಿಸಬಾರದು. ಸಂಪೂರ್ಣವಾಗಿ ಪಾತ್ರದಲ್ಲಿ ಲೀನವಾಗಿರಬೇಕು. ಅಂದರೆ ಸ್ಪಿರಿಟ್ ಚಿತ್ರ ಮಾಡುವಾಗ ಬೇರೆ ಯಾವುದೇ ಚಿತ್ರಗಳನ್ನು ಒಪ್ಪಿಕೊಳ್ಳಬಾರದು. ಗಮನ ಭಂಗವಾಗಬಾರದು ಎಂಬುದು ಸಂದೀಪ್ ಅವರ ಕೋರಿಕೆ. ಸಂದೀಪ್ ವಂಗಾ ಕೋರಿಕೆಗೆ ಪ್ರಭಾಸ್ ಸಮ್ಮತಿಸಿದ್ದಾರೆ. ಹಾಗಾಗಿ ನವೆಂಬರ್ ಅಥವಾ ಡಿಸೆಂಬರ್ ಗೆ ದಿ ರಾಜಾ ಸಾಬ್ ಚಿತ್ರೀಕರಣವನ್ನು ಮುಗಿಸಲಿದ್ದಾರೆ. ಅದೇ ರೀತಿ ಸ್ಪಿರಿಟ್ ಚಿತ್ರ ಆರಂಭವಾಗುವ ಸಂದರ್ಭದಲ್ಲಿ ಫೌಜಿ ಚಿತ್ರದ ಚಿತ್ರೀಕರಣವನ್ನು ಅರ್ಧಕ್ಕೆ ನಿಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸಂದೀಪ್‌ ವಂಗಾ 'ಸ್ಪಿರಿಟ್‌' ಚಿತ್ರದ ಬಗ್ಗೆ ರೆಬೆಲ್ ಅಭಿಮಾನಿಗಳು ಭಾರೀ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಇದರಲ್ಲಿ ಪ್ರಭಾಸ್ ಒಬ್ಬ ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹೊರ ಬಂದಿದೆ. ಹಾಗಾಗಿ ಪ್ರಭಾಸ್ ಅವರನ್ನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನೋಡಲು ಅಭಿಮಮಾನಿಗಳು ಕಾಯತ್ತಿದ್ದಾರೆ. ಡ್ರಗ್ಸ್ ಮಾಫಿಯಾ ಸುತ್ತವೇ ಚಿತ್ರವೇ ಸಾಗಲಿದೆ ಎನ್ನಲಾಗಿದೆ. ಚಿತ್ರದಲ್ಲಿ ಪ್ರಭಾಸ್‌ಗೆ ಇಬ್ಬರು ನಾಯಕಯರಲಿದ್ದಾರೆ.

ಬಜೆಟ್ 500 ಕೋಟಿ

ಈ ಚಿತ್ರದಲ್ಲಿ ಕೊರಿಯನ್ ನಟ ಮಾ ಡಾಂಗ್-ಸಿಯೋಕ್ (ಡಾನ್ ಲೀ) ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಡಾನ್ ಲೀ  ದಕ್ಷಿಣ ಕೊರಿಯಾ ಮತ್ತು ಹಾಲಿವುಡ್‌ನಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.   ಡಾನ್ ಲೀ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಮತ್ತು ಖಳನಾಯಕನಾಗಿ ಕೂಡ ನಟಿಸಿದ್ದಾರೆ. ಸ್ವತಃ ಮಾರ್ಷಲ್ ಆರ್ಟ್ಸ್‌ನಲ್ಲಿ ಪರಿಣಿತರಾಗಿರುವ ಡಾನ್ ಲೀ.. ತಮ್ಮ ಚಿತ್ರಗಳಲ್ಲಿ ಮಾಡುವ ಸಾಹಸ ದೃಶ್ಯಗಳಿಗೆ ವಿಶೇಷ ಅಭಿಮಾನಿ ಬಳಗವೇ ಇದೆ.  

ಈ ಚಿತ್ರದ ಕಥಾವಸ್ತುವಿನ ಬಗ್ಗೆ ಸಂದೀಪ್ ವಂಗಾ ಮಾತನಾಡುತ್ತಾ, “ಪ್ರಭಾಸ್ ಒಬ್ಬ ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಆತನ ವೃತ್ತಿಜೀವನದಲ್ಲಿ, ಆತನ ಆಪ್ತ ವ್ಯಕ್ತಿಯೊಬ್ಬರ ವಿಷಯದಲ್ಲಿ ಒಂದು ತಪ್ಪು ನಡೆಯುತ್ತದೆ. ಆ ನಂತರ ಆ ಪೊಲೀಸ್ ಅಧಿಕಾರಿ ಹೇಗೆ ಪ್ರತಿಕ್ರಿಯಿಸುತ್ತಾರೆ” ಎಂಬುದೇ ಚಿತ್ರದ ಕಥಾವಸ್ತು ಎಂದು ತಿಳಿಸಿದ್ದಾರೆ. 
 
 

ಸ್ಪಿರಿಟ್ ಚಿತ್ರದ ಬಜೆಟ್ ಬಗ್ಗೆ ಹೇಳುವುದಾದರೆ, ಸುಮಾರು ರೂ.300 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದು ತಿಳಿದುಬಂದಿದೆ. 'ಸ್ಪಿರಿಟ್' ಚಿತ್ರ ಪ್ರಭಾಸ್‌ ನಟನೆಯ ಚಿತ್ರ ಎಂದಾಕ್ಷಣ ರೂ.300+ ಕೋಟಿ ಹೂಡಿಕೆ ಮಾಡಲು ನಿರ್ಮಾಪಕರು ಸಿದ್ಧರಿದ್ದಾರೆ ಎಂದು ಸಂದೀಪ್ ಹೇಳಿದ್ದಾರೆ. ಹಾಗಾಗಿ ತಮಗೆ ಈ ಚಿತ್ರದ ಬಜೆಟ್ ಬಗ್ಗೆ ಯಾವುದೇ ಆತಂಕವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ   ಬೃಹತ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಸ್ಪಿರಿಟ್, ಪ್ರಭಾಸ್ ಇಮೇಜ್‌ನಿಂದಲೇ ಟೀಸರ್, ಟ್ರೇಲರ್, ಆಡಿಯೋ ಬಿಡುಗಡೆ, ಪ್ರಚಾರ ಕಾರ್ಯಕ್ರಮಗಳು ಮತ್ತು ಸ್ಯಾಟ್‌ಲೈಟ್, ಡಿಜಿಟಲ್ ಹಕ್ಕುಗಳ ಮೂಲಕವೇ ಚಿತ್ರದ ಬಜೆಟ್ ಮರಳಿ ಪಡೆಯುವ ಸಾಧ್ಯತೆ ಇದೆ ಎಂದು ಸಂದೀಪ್ ಅಭಿಪ್ರಾಯಪಟ್ಟಿದ್ದಾರೆ. 

ಈ ಚಿತ್ರದ ಮೂಲಕ ಸಂದೀಪ್ ಖಂಡಿತವಾಗಿಯೂ ರೂ2000 ಕೋಟಿ ಗಳಿಕೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.   ಈ ಚಿತ್ರದ ಕಥೆಯನ್ನು ಅನಿಮಲ್ ಚಿತ್ರಕ್ಕಿಂತ ಮೊದಲೇ ಪ್ರಭಾಸ್‌ಗೆ ಹೇಳಿದ್ದರಂತೆ. ಕೊರೋನಾ ಸಮಯದಲ್ಲಿ ಪ್ರಭಾಸ್‌ಗೆ ಈ ಕಥೆಯನ್ನು ಹೇಳಿದಾಗ ಅವರಿಗೆ ಬಹಳ ಇಷ್ಟವಾಗಿ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. 2024 ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ ಎಂದು ಸಂದೀಪ್ ಹೇಳಿದ್ದಾರೆ.  
    
ನಿರ್ಮಾಪಕ ಭೂಷಣ್ ಕುಮಾರ್ ಮಾತನಾಡುತ್ತಾ...‘‘  ‘ಸ್ಪಿರಿಟ್‌’ ಬಹಳ ವಿಶೇಷವಾದ ಚಿತ್ರ. ಪೊಲೀಸ್‌ ಡ್ರಾಮಾ ಹಿನ್ನೆಲೆಯಲ್ಲಿ ನಿರ್ಮಾಣವಾಗಲಿದೆ. ಇದರಲ್ಲಿ ಪ್ರಭಾಸ್‌ ಮೊದಲ ಬಾರಿಗೆ ಖಾಕಿ ಧರಿಸಿ, ಲಾಠಿ ಬೀಸಲಿದ್ದಾರೆ. ಅಲ್ಲದೆ ಈ ಚಿತ್ರಕ್ಕೆ ಸಂಗೀತ ವಿಶೇಷ ಆಕರ್ಷಣೆಯಾಗಿರಲಿದೆ. ಈ ಚಿತ್ರದ ಬಗ್ಗೆ ಒಂದು ವಿಷಯ ಖಚಿತವಾಗಿ ಹೇಳಬಲ್ಲೆ. ಇದರಲ್ಲಿ ನೀವು ಇದುವರೆಗೂ ನೋಡಿರದ ಪ್ರಭಾಸ್‌ರನ್ನು ನೋಡಲಿದ್ದೀರಿ’’ ಎಂದು ಭೂಷಣ್‌ ಕುಮಾರ್‌ ಹೇಳಿದ್ದಾರೆ.
  

Latest Videos

click me!