ಮಹೇಶ್ ಬಾಬು ಅಪ್ಪ ನಿಜವಾದ ದೇವರೆಂದಿದ್ದೇಕೆ ಮತ್ತೊಬ್ಬ ತೆಲುಗು ನಟ?

First Published | Oct 9, 2024, 12:03 PM IST

ತೆಲುಗು ಚಿತ್ರರಂಗದಲ್ಲಿ ದೇವ್ರು ಅಂದ್ರೆ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರ ಅಪ್ಪ ಹೀರೋ ಕೃಷ್ಣ. ಅದಕ್ಕೆ ಕಾರಣಗಳೇನು? ಅವರು ಎಂಥಹಾ  ವ್ಯಕ್ತಿ ಅನ್ನೋದನ್ನ ನಟ ಮುರಳಿ ಮೋಹನ್ ಹೇಳಿಕೊಂಡಿದ್ದಾರೆ. ಈ ಬಗ್ಗೆ ಒಂದು ವರದಿ. 

ಎನ್‌ಟಿಆರ್ ಹಾಗೂ ಎಎನ್ಆರ್‌ ಟಾಲಿವುಡ್‌ನ ಎರಡು ಕಣ್ಣುಗಳು. ಇಬ್ಬರೂ ತಮ್ಮದೇ ಆದ ಸ್ಟಾರ್‌ಡಮ್ ಹೊಂದಿದ್ದು, 50ರ ದಶಕದಲ್ಲಿ ಹೀರೋಗಳಾಗಿ ಎನ್ಟಿಆರ್, ಎಎನ್ಆರ್ ಪ್ರಬುದ್ಧಮಾನಕ್ಕೆ ಬಂದವರು. ಆಗಿನಿಂದ ಮೂರು ದಶಕಗಳ ಕಾಲ ಚಿತ್ರರಂಗವನ್ನು, ಇವರಿಗೆ ಪೈಪೋಟಿ ನೀಡಿದ ನಟ ಕೃಷ್ಣ.

ಸೂಪರ್ ಸ್ಟಾರ್ ಕೃಷ್ಣ

ಎನ್ಟಿಆರ್, ಎಎನ್ಆರ್ ನಂತರ ಕೃಷ್ಣ, ಶೋಭನ್ ಬಾಬು, ಕೃಷ್ಣಂರಾಜು ಸ್ಟಾರ್ಸ್ ಆಗಿ ಚಿತ್ರರಂಗದಲ್ಲಿ ನೆಲೆ ನಿಂತರು. ಆದರೆ ಎನ್ಟಿಆರ್, ಎಎನ್ಆರ್‌ಗೆ ಸಮಾನವಾದ ಇಮೇಜ್, ಫಾಲೋಯಿಂಗ್ ಮಾತ್ರ ಕೃಷ್ಣ ಅವರಿಗೆ ಮಾತ್ರ ಸಿಕ್ತು. ಕೃಷ್ಣ ಡೇರ್ ಆ್ಯಂಡ್ ಡ್ಯಾಶಿಂಗ್ ಹೀರೋ. ಮೊದಲ ಕೌ ಬಾಯ್ ಚಿತ್ರ ಮಾಡಿದ್ದು ಕೃಷ್ಣ. ತೆಲುಗಿನಲ್ಲಿ ಮೊದಲ ಸೋಷಿಯೋ ಕಲರ್, ಮೊದಲ ಸಿನಿಮಾ ಸ್ಕೋಪ್ ಚಿತ್ರಗಳು ಕೃಷ್ಣ ಅವರದ್ದೇ. ಅವರ ದ್ವಿಪಾತ್ರಾಭಿನಯದ ಸಿಂಹಾಸನಂ ಮೊದಲ ಬೃಹತ್ ಬಜೆಟ್ ಸಿನಿಮಾ. ಬೃಹತ್ ಬಜೆಟ್ ಆಗಿದ್ದರಿಂದ ಅವರೇ ಸ್ವತಃ ನಿರ್ಮಿಸಿದ್ರು. ಸಿಂಹಾಸನಂ ಬ್ಲಾಕ್ ಬಸ್ಟರ್ ಸಿನಿಮಾ ಆಗಿತ್ತು.

Tap to resize

ಕೃಷ್ಣ ನಟಿಸಿದ ಪ್ರಯೋಗಾತ್ಮಕ ಚಿತ್ರಗಳನ್ನು ನಿರ್ಮಿಸಲು ನಿರ್ಮಾಪಕರು ಹೆದರುತ್ತಿದ್ದರು. ಆಗ ಈ ಕಥೆಗಳು ಓಡುತ್ತಾ ಎಂಬ ಭಯ ನಿರ್ಮಾಪಕರನ್ನು ಕಾಡುತ್ತಿತ್ತು. ಹೀಗಾಗಿ ಪದ್ಮಾಲಯ ಸ್ಟುಡಿಯೋಸ್ ಬ್ಯಾನರಲ್ಲಿ ಕೃಷ್ಣ ಅವರು ತಾವೇ ಅವುಗಳನ್ನ ನಿರ್ಮಿಸುತ್ತಿದ್ರು. ತಮ್ಮ ಪ್ರಯೋಗಗಳಿಂದ ಆಗುವ ಲಾಭ ನಷ್ಟಗಳನ್ನೂ ಅವರೇ ಭರಿಸುತ್ತಿದ್ರು. ಕೃಷ್ಣ ಅವರಲ್ಲಿದ್ದ ಒಳ್ಳೆ ಗುಣವನ್ನು ನಟ ಮುರಳಿ ಮೋಹನ್ ಮನ ಬಿಚ್ಚಿ ಹೊಗಳಿದ್ದಾರೆ. 

ತೆಲುಗು ಚಿತ್ರರಂಗದಲ್ಲಿ ನಿಜವಾದ ದೇವ್ರು ಅಂದ್ರೆ ಅದು ಕೃಷ್ಣ, ಅವರು ತಮ್ಮ ಸಿನಿಮಾದಿಂದ ನಿರ್ಮಾಪಕ ನಷ್ಟ ಅನುಭವಿಸಿದ್ರೆ ಅವರನ್ನು ಕರೆಸಿ, ಹೊಸ ಸಿನಿಮಾ ಶುರು ಮಾಡುವಂತೆ ಹೇಳ್ತಿದ್ರು ಎಂದು ಮುರಳಿ ಮೋಹನ್, ಕೃಷ್ಣ ಅವರ ದೊಡ್ಡತನವನ್ನು ಕೊಂಡಾಡಿದ್ದಾರೆ.

ನನ್ನ ಹತ್ರ ತೆಂಗಿನಕಾಯಿ ಒಡೆಯೋಕೂ ದುಡ್ಡಿಲ್ಲ ಅಂತ ನಿರ್ದೇಶಕ ಅಂದ್ರೆ. ದುಡ್ಡು ಯಾರು ಕೇಳಿದ್ರು, ಮೊದಲು ನೀ ಸಿನಿಮಾ ಶುರು ಮಾಡೆಂದು ನಿರ್ದೇಶಕರನ್ನು ಧೈರ್ಯ ತುಂಬುತ್ತಿದ್ದರು. ವಿಷಯವನ್ನು ಅವರೇ ಸ್ವತಃ ಆಯ್ಕೆ ಮಾಡ್ತಿದ್ರು. ವಿತರಕರ ಜೊತೆ ಮಾತನಾಡಿ, ಈ ಸಿನಿಮಾ ವಿತರಿಸಿ ಅಂತ ಹೇಳ್ತಿದ್ರಂತೆ. ಹೂಡಿಕೆದಾರರಿಗೆ ಸಿನಿಮಾ ಬಿಡುಗಡೆಗೆ ಮುಂಚೆಯೇ ದುಡ್ಡು ಕೊಟ್ಟು ಬಿಡ್ತಿದ್ರಂತೆ. ಅವರಿಗೆ ಇವರು ಅದೇ ರೀತಿ ಭರವಸೆ ನೀಡ್ತಿದ್ರಂತೆ. ಇದರಿಂದ ನಷ್ಟ ಆದ ಸಂದರ್ಭಗಳೂ ಇದ್ದವಂತೆ.

ಪರೋಕ್ಷವಾಗಿ ಹೇಳುವುದಾದರೆ ಎನ್‌ಟಿಆರ್, ಎಎನ್ಆರ್‌ಗಿಂತಲೂ ದೊಡ್ಡ ಗುಣ ಕೃಷ್ಣನದ್ದು. ಅವರು ನಿರ್ಮಾಪಕರ ಹೀರೋ ಅಂತ ಮುರಳಿ ಮೋಹನ್ ಹೇಳಿದ್ದಾರೆ. ಮುರಳಿ ಮೋಹನ್ ನಟನಾಗಿ, ನಿರ್ಮಾಪಕರಾಗಿ ಚಿತ್ರರಂಗದಲ್ಲಿ ನೆಲೆ ಕಂಡವರು ಎಂಬುವುದು ಎಲ್ಲರಿಗೂ ಗೊತ್ತು. ರಾಜಕಾರಣದಲ್ಲೂ ಮುರಳಿ ಮೋಹನ್ ತಮ್ಮದೇ ಛಾಪು ಮೂಡಿಸಿದ್ದಾರೆ. 
 

1961ರಲ್ಲಿ ಬಿಡುಗಡೆಯಾದ ಕುಲ ಗೀತಲು ಚಿತ್ರದ ಮೂಲಕ ಕೃಷ್ಣ ಬೆಳ್ಳಿತೆರೆಗೆ ಪರಿಚಯವಾದ್ರು. ಸುದೀರ್ಘ ವೃತ್ತಿಜೀವನದಲ್ಲಿ ಅವರು 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಒಂದೇ ವರ್ಷ 18 ಚಿತ್ರಗಳನ್ನ ಬಿಡುಗಡೆ ಮಾಡಿದ ದಾಖಲೆ ಅವರದ್ದು. ಹತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. 2016ರಲ್ಲಿ ಬಂದ ಶ್ರೀಶ್ರೀ ಅವರು ನಟಿಸಿದ ಕೊನೆಯ ಚಿತ್ರ. 

2022ರ ನವೆಂಬರ್ 14ರಂದು ಹೃದಯಾಘಾತಕ್ಕೆ ಒಳಗಾದ ಕೃಷ್ಣ ಅವರನ್ನು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಪಡೆಯುತ್ತಲೇ ಕೃಷ್ಣ ನವೆಂಬರ್ 15ರಂದು ಕೊನೆಯುಸಿರೆಳೆದರು. ಕೃಷ್ಣ ಅವರ ಪುತ್ರ ಮಹೇಶ್ ಬಾಬು ಈಗ ಚಿತ್ರರಂಗದಲ್ಲಿ ಟಾಪ್ ಸ್ಟಾರ್ ಆಗಿ ಬೆಳೆದಿದ್ದಾರೆ. ಅವರಿಗೆ ಭಾರೀ ಅಭಿಮಾನಿ ಬಳಗವಿದೆ.

ಮಹೇಶ್ ಬಾಬು ತಮ್ಮ ಮುಂದಿನ ಚಿತ್ರ ಎಸ್‌ಎಸ್‌ಎಂಬಿ 29 ನಲ್ಲಿ ಬ್ಯುಸಿಯಾಗಿದ್ದು ಈ ಚಿತ್ರವನ್ನು ರಾಜಮೌಳಿ ನಿರ್ದೇಶಿಸುತ್ತಿದ್ದಾರೆ. ಇದು ಪ್ಯಾನ್ ವರ್ಲ್ಡ್ ಸಿನಿಮಾವಾಗಿ 800 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗ್ತಿದೆ. 

Latest Videos

click me!