ಎರಡು ವರ್ಷಗಳ ಹಿಂದೆ ಕರಣ್ ಜೋಹರ್ ಅವರ 'ಕಾಫಿ ವಿಥ್ ಕರಣ್‌ಗೆ ಆಗಮಿಸಿದ ದ ಶ್ವೇತಾ ಮತ್ತು ಅಭಿಷೇಕ್ ಬಚ್ಚನ್, ತಮ್ಮ ತಾಯಿಗೆ Claustrophobic ಎಂಬ ಕಾಯಿಲೆ ಇದೆ ಎಂದು ಹೇಳಿದರು.
ಈ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿ ಜನಸಂದಣಿಯನ್ನು ನೋಡಿದಾಗ ಇದ್ದಕ್ಕಿದ್ದಂತೆ ತೊಂದರೆಗೆ ಒಳಾಗುತ್ತಾನೆ. ಅನೇಕ ಬಾರಿ ಕೋಪಗೊಳ್ಳಬಹುದು ಅಥವಾ ಮಂಕಾಗಬಹುದು. ಇದು ಹೆಚ್ಚಾಗಿ ಮಾರುಕಟ್ಟೆಯಲ್ಲಿ, ಟ್ರಾಫಿಕ್ ಅಥವಾ ಲಿಫ್ಟ್‌ನಲ್ಲಿ ಉಂಟಾಗಬಹುದು.
ಮಮ್ಮಿಗೆ ಜನರ ಗುಂಪನ್ನು ನೋಡಿದಾಗ ತೊಂದರೆ ಇದೆ. ತಳ್ಳುವುದು ಅಥವಾ ಮುಟ್ಟುವುದು ಅವರಿಗೆ ಇಷ್ಟವಿಲ್ಲ. ಇದಲ್ಲದೆ, ಕ್ಯಾಮೆರಾದ ಫ್ಲ್ಯಾಷ್ ಪದೇ ಪದೇ ಕಣ್ಣುಗಳಿಗೆ ಹೊಡೆದಾಗಸಹ ಸಮಸ್ಯೆಗಳಾಗುತ್ತದೆಎಂದು ಜಯಾರ ಬಗ್ಗೆ ಮಗಳು ಶ್ವೇತಾ ಹೇಳಿದ್ದಾರೆ.
ಅಭಿಷೇಕ್ ಬಚ್ಚನ್ ಅವರ ತಾಯಿ ಜಯಾ ಹೋದ ನಂತರವೇ ಮಾಧ್ಯಮಗಳ ಮುಂದೆ ಹೋಗುತ್ತಾರೆ. ಈಗ ಜನರು ಅವರೊಂದಿಗೆ ಫೋಟೋ ತೆಗೆದು ಕೊಳ್ಳುವುದನ್ನು ಆವಾಯ್ಡ್ ಮಾಡುತ್ತಾರೆ ಎಂದು ಜಯಾ ಕೋಪಗೊಳ್ಳುತ್ತಾರೆ ಎಂದುಅಭಿಷೇಕ್ ಹೇಳಿದ್ದರು. ಅವರ ಈ ನಡವಳಿಕೆಯಿಂದ ಜಯಾ ಅವರ ಮಕ್ಕಳು ಕೂಡ ಅನೇಕ ಬಾರಿ ಅಸಮಾಧಾನಗೊಳ್ಳುತ್ತಾರೆ.
ಜಯಾ ಬಚ್ಚನ್ ಈ ರೀತಿ ವರ್ತಿಸುತ್ತಿರುವ ಅನೇಕ ವಿಡಿಯೋಗಳೂ ಇವೆ. ಅದರಲ್ಲಿ ಅವರು ಕೋಪಗೊಂಡು ಬೈಯುವುದು ಕಂಡುಬರುತ್ತದೆ.
ಅಷ್ಟೇ ಅಲ್ಲ, ಕೆಲವೊಮ್ಮೆ ಜಯ ಬಚ್ಚನ್ ಮಾಧ್ಯಮಗಳ ಮೇಲೂ ಸಹ ಸಿಟ್ಟಾಗಿದ್ದಾರೆ. ಇದೇ ಕಾರಣದಿಂದ ಕುಟುಂಬದೊಂದಿಗೆ ಕಾಣಿಸಿಕೊಂಡರೂ ಸಹ ಜಯಾ ಕ್ಯಾಮೆರಾಕ್ಕೆ ಪೋಸ್ ನೀಡಲು ಹಿಂಜರಿಯುತ್ತಾರೆ.
ಕೆಲವು ವರ್ಷಗಳ ಹಿಂದೆ ಕರಣ್ ಜೋಹರ್ ಅವರ ತಾಯಿ ಹಿರೂ ಜೋಹರ್ ಬರ್ತ್‌ಡೇ ಪಾರ್ಟಿ ನಂತರ ಹೋಟೆಲ್‌ನಿಂದ ಜಯಾ ಹೊರಬಂದ ತಕ್ಷಣ, ಅಲ್ಲಿದ್ದ ವ್ಯಕ್ತಿಯೊಬ್ಬರು ಅವರ ಫೋಟೋ ತೆಗೆದುಕೊಳ್ಳಲು ಪ್ರಾರಂಭಿಸಿದರು.ನೀವು ಮೊಬೈಲ್‌ನಿಂದ ಫೋಟೋಗಳನ್ನು ಏಕೆ ತೆಗೆದುಕೊಳ್ಳುತ್ತಿದ್ದೀರಿ? ಫೋಟೋ ತೆಗೆದುಕೊಳ್ಳುವ ಮೊದಲು ನೀವು ನನ್ನನ್ನು ಕೇಳಿದ್ದೀರಾ? ಎಂದು ಜಯಾ ಬೈಯಲು ಶರುಮಾಡಿದರು.ಕೋಪ ನೋಡಿ ಮೊದಲಿಗೆ ಆತಂಕಗೊಂಡ ವ್ಯಕ್ತಿಯು ಸ್ವಲ್ಪ ಸಮಯದ ನಂತರ ನಗುತ್ತಾ ಅವನು ಸದ್ದಿಲ್ಲದೆ ಅಲ್ಲಿಂದ ಹೊರಟುಹೋದರು. ನಂತರ, ಜಯ ಅಲ್ಲಿನ ಜನರ ಮೇಲೆ ಗೊಣಗುತ್ತಲೇ ಇದ್ದರು.
ಒಮ್ಮೆ ಜಯ ಬಚ್ಚನ್ ಮತ್ತು ಸೊಸೆ ಐಶ್ವರ್ಯಾ ಒಟ್ಟಿಗೆ ಪಾರ್ಟಿಗೆ ಹಾಜಾರಾಗಿದ್ದರು. ಹಿಂದಿನಿಂದ ಫೋಟೋಗ್ರಾಫರ್ ಐಶ್ವರ್ಯ ರೈಗೆ 'ಆಶ್ ಆಶ್' ಎಂದು ಧ್ವನಿ ಕರೆದಾಗ ಕೋಪಗೊಂಡ ಜಯಾ ಅಶ್ ಅಶ್ ಎಂದು ಕರೆಯುತ್ತಿಯಾ? ಐಶ್ವರ್ಯಾ ಜಿ ಅಥವಾ ಶ್ರೀಮತಿ ಬಚ್ಚನ್ ಎಂದು ಹೇಳು ಎಂದು ಫೋಟೋಗ್ರಾಫರ್ ಮೇಲೆ ಸಿಡುಕಿದ್ದರು.