ತನಗಿಂತ 17 ವರ್ಷ ಹಿರಿಯ ನಟನನ್ನು ಪ್ರೀತಿಸಿ ಮದುವೆಯಾದ ಯುವರತ್ನ ಹಿರೋಯಿನ್

First Published | Apr 11, 2021, 9:43 AM IST

ಯುವರತ್ನ ನಾಯಕಿ ಸಯೇಷಾಗೆ ಜಸ್ಟ್ 23 ವರ್ಷ. ಅವರ ಪತಿ ಆರ್ಯಗೆ 40. ಇಬ್ಬರ ನಡುವೆ 17 ವರ್ಷದ ಅಂತವಿದೆ

ಬಹುಭಾಷಾ ನಟಿ ಸಯೇಷಾ ಅವರದ್ದು ಲವ್ ಮ್ಯಾರೇಜ್‌.
ಯುವರತ್ನ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟು ಸದ್ದು ಮಾಡಿರೋ ನಟಿ ಮೂಲತಃ ಮುಂಬೈಯವರು.
Tap to resize

ಈಗ ತಮಿಳುನಾಡಿನ ಸೊಸೆ. ಮುಂಬೈನ ಸಯೇಷಾ ಮನಸು ಕೊಟ್ಟಿದ್ದು ತಮಿಳುನಾಡಿನ ನಟನಿಗೆ.
ಸಾಲು ಸಾಲು ಸಿನಿಮಾವನ್ನು ಜೊತೆಯಾಗಿ ಮಾಡಿ, ಆನ್‌ಸ್ಕ್ರೀನ್ ಹೀರೋನನ್ನೆ ರಿಯಲ್ ಲೈಫ್ ಹೀರೋ ಆಗಿ ಆರಿಸಿಕೊಂಡಿದ್ದರು.
21 ವರ್ಷದಲ್ಲೇ ಮದುವೆಯಾದ ನಟಿ ಪ್ರೀತಿಸಿದ್ದು ತನಗಿಂತ 17 ವರ್ಷ ಹಿರಿಯ ನಟ ಆರ್ಯನನ್ನು.
ಆದರೆ ಈ ಜೋಡಿ ಮಧ್ಯೆ ವಯಸ್ಸಿನ ಅಂತರ ಕಾಡಲೇ ಇಲ್ಲ. ಇವರು ಹ್ಯಾಪಿ ಮ್ಯಾರೀಡ್ ಜೋಡಿ
ಆಗೊಂದು, ಈಗೊಂದು ಸಿನಿಮಾ ಮಾಡ್ಕೊಂಡು ಸೌತ್‌ನಲ್ಲೇ ಸೆಟಲ್ ಆಗಿದ್ದಾರೆ ಈ ಚೆಲುವೆ
ಟಾಲಿವುಡ್‌ ಮೂಲಕ ಎಂಟ್ರಿಕೊಟ್ಟು ಬಾಲಿವುಡ್‌ನಲ್ಲೂ ನಟಿಸಿದ ಸಯೇಷಾಗೆ ಒಳ್ಳೆಯ ಅವಕಾಶಗಳು ಸಿಕ್ಕಿದ್ದು ಕಾಲಿವುಡ್‌ನಲ್ಲಿ.
ಇದೀಗ ನಟಿ ಸ್ಯಾಂಡಲ್‌ವುಡ್‌ನಲ್ಲೂ ಖಾತೆ ತೆಗೆದಿದ್ದಾರೆ
ನಟನೆ ಬಗ್ಗೆ ಆಸಕ್ತಿ ಇತ್ತದರೂ, ಸಿನಿಮಾವೇ ಜೀವನ ಎಂದುಕೊಂಡವರಲ್ಲ ಈಕೆ, ಹಾಗಂದುಕೊಂಡಿದ್ದರೆ ಬಹುಶಃ ಈಕೆ 21 ವರ್ಷಕ್ಕೆ ಮದುವೆಯಾಗುತ್ತಿರಲಿಲ್ಲ.
ಒಂದಷ್ಟು ಸಿನಿಮಾ ಮಾಡಿ, ಹೆಸರು ಗಳಿಸಿ ಫೇಮಸ್ ಆಗಿ ತಮ್ಮ ಲೈಫ್‌ನ ಪ್ರೀತಿಯನ್ನು ಕಂಡುಕೊಂಡು ಮದುವೆಯಾಗಿದ್ದಾರೆ
ಯುವರತ್ನದಲ್ಲಿ ನಟಿಗೆ ಅಷ್ಟಾಗಿ ಅಭಿನಯಕ್ಕೆ ಅವಕಾಶ ಸಿಗದಿದ್ದರೂ ಸಿಕ್ಕಿದ್ದನ್ನು ಅಚ್ಚುಕಟ್ಟಾಗಿ ಮುಗಿಸಿ ಹ್ಯಾಪಿ ಆಗಿದ್ದಾರೆ. ನಟಿಗೆ ಸ್ಯಾಂಡಲ್‌ವುಡ್‌ನಲ್ಲಿ ಮತ್ತಷ್ಟು ಅವಕಾಶ ಸಿಗುತ್ತಾ? ಕಾದು ನೋಡಬೇಕು

Latest Videos

click me!