ಭಾರತದ ಅನೇಕ ಪ್ರಸಿದ್ಧ ಸೆಲೆಬ್ರಿಟಿಗಳು ಮಕ್ಕಳನ್ನು ದತ್ತು ಪಡೆದುಕೊಳ್ಳುವ ಮೂಲಕ ಪೋಷಕರಾಗಿದ್ದಾರೆ. ಈ ಮೂಲಕ ಮಕ್ಕಳನ್ನು ದತ್ತು ಪಡೆದುಕೊಳ್ಳುವ ಹೃದಯಮಯಿ ಕಾರ್ಯಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಕೆಜಿಎಫ್ ನಟಿ ರವೀನಾ ಟಂಡನ್ ಅವರು ಸೇರಿದಂತೆ ಹಲವು ನಟಿಯರು ಮಕ್ಕಳನ್ನು ದತ್ತು ಪಡೆದುಕೊಂಡಿದ್ದಾರೆ.
26
ನೀಲಂ ಕೋಠಾರಿ
ನೀಲಂ ಕೋಠಾರಿ ಮತ್ತು ಸಮೀರ್ ಸೋನಿ 2013ರಲ್ಲಿ ಹೆಣ್ಣು ಮಗುವನ್ನು ದತ್ತು ಪಡೆದುಕೊಂಡು ಪೋಷಕರಾಗಿದ್ದಾರೆ. ಮಗಳಿಗೆ ಆಹಾನಾ ಎಂದು ಹೆಸರಿಟ್ಟಿದ್ದಾರೆ. ಮಗಳ ಆಹಾನಾಳಿಂದ ನೀಲಂ ಕೋಠಾರಿ ಮತ್ತು ಸಮೀರ್ ಸೋನಿ ಪೋಷಕತ್ವ ಆನಂದಿಸುತ್ತಿದ್ದಾರೆ. ಮಗಳಿಗಾಗಿಯೇ ಸುಂದರ ಮನೆಯನ್ನು ಸಹ ಖರೀದಿಸಿದ್ದಾರೆ.
36
ಪ್ರೀತಿ ಜಿಂಟಾ
ಗುಳಿಕೆನ್ನೆ ಚೆಲುವೆ ಬಾಲಿವುಡ್ ನಟಿ ಪ್ರೀತಿ ಜಿಂಟಾ, ರಿಷಿಕೇಶದ ಮದರ್ ಮಿರಾಕಲ್ ಶಾಲೆಯ 34 ಅನಾಥ ಹೆಣ್ಣುಮಕ್ಕಳನ್ನು ದತ್ತು ಪಡೆದು ಹಲವರಿಗೆ ಮಾದರಿಯಾಗಿದ್ದಾರೆ. ಈ ಎಲ್ಲಾ ಮಕ್ಕಳ ಶಿಕ್ಷಣ, ಆಹಾರ ಮತ್ತು ಬಟ್ಟೆ ಸೇರಿದಂತೆ ಮೂಲಭೂತ ಸೌಲಭ್ಯವನ್ನು ಪ್ರೀತಿ ಜಿಂಟಾ ನೋಡಿಕೊಳ್ಳುತ್ತಾರೆ. ಈ ಮೂಲಕ ಮಕ್ಕಳು ಜವಾಬ್ದಾರಿಯನ್ನು ಪ್ರೀತಿ ಜಿಂಟಾ ತೆಗೆದುಕೊಂಡಿದ್ದಾರೆ.
46
ರವೀನಾ ಟಂಡನ್
ರವೀನಾ ಟಂಡನ್ ಕೇವಲ 21 ವರ್ಷದವರಿದ್ದಾಗಲೇ 1995ರಲ್ಲಿ ಛಾಯಾ ಮತ್ತು ಪೂಜಾ ಎಂಬ ಇಬ್ಬರು ಹೆಣ್ಣುಮಕ್ಕಳನ್ನು ದತ್ತು ಪಡೆದುಕೊಂಡಿದ್ದರು. 21ನೇ ವಯಸ್ಸಿನಲ್ಲಿ ತಾಯ್ತನವನ್ನು ರವೀನಾ ಅನುಭವಿಸಿದ್ದಾರೆ. ಛಾಯಾ ಮತ್ತು ಪೂಜಾ ಇಬ್ಬರ ಮದುವೆಯನ್ನು ಮಾಡಿದ್ದಾರೆ. ಸಂದರ್ಶನದಲ್ಲಿ ನಾನು ಅಜ್ಜಿಯಾಗಿದ್ದೇನೆ ಎಂದು ರವೀನಾ ಟಂಡನ್ ಹೇಳಿಕೊಂಡಿದ್ದರು. ರಣ್‌ಬೀರ್ ಮತ್ತು ರಾಶಾ ಎಂಬ ಇಬ್ಬರು ಮಕ್ಕಳು ಸಹ ರವೀನಾ ಅವರಿಗಿದ್ದಾರೆ.
56
ಸುಷ್ಮಿತಾ ಸೇನ್
ಸುಷ್ಮಿತಾ ಸೇನ್ 25 ನೇ ವಯಸ್ಸಿನಲ್ಲಿಯೇ ಅಲಿಸಾ ಹೆಸರಿನ ಹೆಣ್ಣು ಮಗುವನ್ನು ದತ್ತ ಪಡೆದುಕೊಂಡಿದ್ದರು. ಅವಿವಾಹಿತರಾಗಿರುವ ಸುಷ್ಮಿತಾ ಸೇನ್ ಮಗು ದತ್ತು ಪಡೆದುಕೊಳ್ಳುವ ಪ್ರಕ್ರಿಯೆಯಲ್ಲಿ ಹಲವು ಕಾನೂನು ಸವಾಲುಗಳನ್ನು ಎದುರಿಸಿದ್ದರು.
66
ಸನ್ನಿ ಲಿಯೋನ್
ಸನ್ನಿ ಲಿಯೋನ್ ಮತ್ತು ಅವರ ಪತಿ ಡೇನಿಯಲ್ ವೆಬರ್ ಜುಲೈ 2017 ರಲ್ಲಿ ನಿಶಾ ಹೆಣ್ಣು ಮಗುವನ್ನು ದತ್ತು ಪಡೆದುಕೊಂಡಿದ್ದಾರೆ. ನಿಶಾ ತಮ್ಮ ಜೀವನದ ಲಕ್ಕಿ ಚಾರ್ಮ್ ಎಂದು ಸನ್ನಿ ಲಿಯೋನ್ ಹಲವು ಬಾರಿ ಹೇಳಿಕೊಂಡಿದ್ದಾರೆ. ನಿಶಾ ಬಳಿಕ ಬಾಡಿಗೆ ತಾಯಿ ಮೂಲಕ ಎರಡು ಮಕ್ಕಳನ್ನು ಸನ್ನಿ ಮತ್ತು ಡೇನಿಯಲ್ ಪಡೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.