ವಿಕ್ಕಿ ಕೌಶಲ್ ಜೊಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿರುವ ಛಾವಾ ಸಿನಿಮಾ ಪ್ರೇಮಿಗಳ ದಿನದಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಜೊತೆಗೆ ಅಜಿತ್ ಕುಮಾರ್ ನಟನೆಯ ವಿದಾಮುಯರ್ಚಿ ಸಿನಿಮಾವನ್ನೇ ಹಿಂದಿಕ್ಕಿಬಿಟ್ಟಿದೆ.
ವಿಕ್ಕಿ ಕೌಶಲ್-ರಶ್ಮಿಕಾ ಮಂದಣ್ಣ ಅವರ ಛಾವಾ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡ್ತಿದೆ. ಸಿನಿಮಾ ಪ್ರತಿದಿನವೂ ಉತ್ತಮ ಕಲೆಕ್ಷನ್ ಮಾಡ್ತಿದೆ. ಭಾರತ ಮಾತ್ರವಲ್ಲ, ವಿಶ್ವ ಬಾಕ್ಸ್ ಆಫೀಸ್‌ನಲ್ಲೂ ಕಮಾಲ್ ಮಾಡ್ತಿದೆ. ವಾರದ ದಿನಗಳಲ್ಲೂ ಸಿನಿಮಾಗೆ ಒಳ್ಳೆ ರೆಸ್ಪಾನ್ಸ್ ಸಿಗ್ತಿದೆ.
24
ನಿರ್ದೇಶಕ ಲಕ್ಷ್ಮಣ್ ಉಟೆಕರ್ ನಿರ್ದೇಶನದ ಛಾವಾ ಸಿನಿಮಾ ಫೆಬ್ರವರಿ 14 ರಂದು ರಿಲೀಸ್ ಆಗಿದೆ. ರಿಲೀಸ್ ಆದಾಗಿನಿಂದ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ. 2025ರ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಮೊದಲ ಹಿಂದಿ ಸಿನಿಮಾ ಇದಾಗಿದೆ. ವಿಶೇಷವಾಗಿ ಅಜಿತ್ ಕುಮಾರ್ ಮತ್ತು ತ್ರಿಷಾ ನಟನೆಯ ವಿದಾಮುಯರ್ಚಿ ಸಿನಿಮಾವನ್ನೇ ಹಿಂದಿಕ್ಕಿಬಿಟ್ಟಿದೆ.
34
ವಾರದ ದಿನಗಳಲ್ಲಿ ಛಾವಾ ಸಿನಿಮಾದ ಕಲೆಕ್ಷನ್ ಸ್ವಲ್ಪ ಡಲ್ ಆಗಿದೆ. ಮೊದಲ ಸೋಮವಾರ 24 ಕೋಟಿ, ಮಂಗಳವಾರ ಅಂದ್ರೆ ಐದನೇ ದಿನ 25.25 ಕೋಟಿ ಕಲೆಕ್ಷನ್ ಮಾಡಿದೆ. ಆದ್ರೆ ಆರನೇ ದಿನ ಕಲೆಕ್ಷನ್ ಹೆಚ್ಚಾಗಿದೆ. ಬುಧವಾರ 32 ಕೋಟಿ ಕಲೆಕ್ಷನ್ ಮಾಡಿದೆ. ಭಾರತದಲ್ಲಿ ಇದುವರೆಗೆ 203.68 ಕೋಟಿ ಕಲೆಕ್ಷನ್ ಆಗಿದೆ.
44
ನಿರ್ದೇಶಕ ಲಕ್ಷ್ಮಣ್ ಉಟೆಕರ್ ಚಾವ್ಹಾ ಸಿನಿಮಾವನ್ನು 130 ಕೋಟಿ ಬಜೆಟ್‌ನಲ್ಲಿ ಮಾಡಿದ್ದಾರೆ. ದಿನೇಶ್ ವಿಜನ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ವಿಕ್ಕಿ ಕೌಶಲ್-ರಶ್ಮಿಕಾ ಮಂದಣ್ಣ ಜೊತೆಗೆ ಅಕ್ಷಯ್ ಖನ್ನಾ, ವಿನೀತ್ ಕುಮಾರ್ ಕೂಡ ಇದ್ದಾರೆ.