ದೃಶ್ಯಂ-3 ಮುಹೂರ್ತ ಫಿಕ್ಸ್ ಮಾಡಿದ ಮೋಹನ್‌ಲಾಲ್; ಕನ್ನಡ ರಿಮೇಕ್‌ಗೆ ರವಿಚಂದ್ರನ್ ರೆಡಿ!

Published : Feb 20, 2025, 09:21 PM ISTUpdated : Feb 20, 2025, 09:37 PM IST

ಸಿನಿಮಾ ಪ್ರೇಮಿಗಳು ಕಾಯುತ್ತಿರುವ ದೃಶ್ಯಂ 3 ಸಿನಿಮಾ ಆದಷ್ಟು ಬೇಗನೇ ತೆರೆ ಮೇಲೆ ಬರುತ್ತದೆ ಎಂದು ನೇರವಾಗಿ ಸಿನಿಮಾ ಹೀರೋ ಮೋಹನ್‌ ಲಾಲ್ ತಿಳಿಸಿದ್ದಾರೆ. ಇದನ್ನು ಕನ್ನಡಕ್ಕೂ ರಿಮೇಕ್ ಮಾಡುವ ಮೂಲಕ ಮತ್ತೊಮ್ಮೆ ಸಕ್ಸಸ್ ಕಾಣುವುದಕ್ಕೆ ನಟ ರವಿಚಂದ್ರನ್ ಸಿದ್ಧವಾಗಿದ್ದಾರೆ.

PREV
16
ದೃಶ್ಯಂ-3 ಮುಹೂರ್ತ ಫಿಕ್ಸ್ ಮಾಡಿದ ಮೋಹನ್‌ಲಾಲ್; ಕನ್ನಡ ರಿಮೇಕ್‌ಗೆ ರವಿಚಂದ್ರನ್ ರೆಡಿ!

ದಕ್ಷಿಣ ಭಾರತದ ಮಲೆಯಾಳಂ ಭಾಷೆಯಲ್ಲಿ ಭಾರಿ ಕಮಾಲ್ ಮಾಡಿದ ಕ್ರೈಂ ಥ್ರಿಲ್ಲರ್ ಸಿನಿಮಾ ದೃಶ್ಯಂ ಬಹುತೇಕ ಎಲ್ಲ ಭಾಷೆಗಳಲ್ಲಿಯೂ ರಿಮೇಕ್ ಆಗಿದೆ. ಇದಾದ ನಂತರ ಹಲವು ಭಾಷೆಗಳಲ್ಲಿ ದೃಶ್ಯಂ-2 ಕೂಡ ಮಾಡಲಾಗಿದ್ದು, ಬೇರೆ ಬೇರೆ ಕಥಾಹಂದರ ಹೊಂದಿವೆ. ಇದರಲ್ಲಿ ಕನ್ನಡಕ್ಕೆ ನಟ ರವಿಚಂದ್ರನ್ ದೃಶ್ಯಂ ಸಿನಿಮಾದ ರಿಮೇಕ್‌ನಲ್ಲಿ ನಟಿಸಿ ಯಶಸ್ಸು ಗಳಿಸಿದ್ದರು. 

26

ದೃಶ್ಯಂ ಸಿನಿಮಾ ತೆಲುಗು, ಹಿಂದಿ, ಕನ್ನಡ ಭಾಷೆಗಳಲ್ಲೂ ದೃಶ್ಯಂ ರೀಮೇಕ್ ಆಗಿದೆ. ತೆಲುಗುನಲ್ಲಿ ಈ ಸಿನಿಮಾನ ವಿಕ್ಟರಿ ವೆಂಕಟೇಶ್ ಮೀನಾ ಒಟ್ಟಿಗೆ ಆಕ್ಟ್ ಮಾಡಿದ್ದಾರೆ. ಕನ್ನಡದಲ್ಲಿ ನಟ ರವಿಚಂದ್ರನ್- ಮೀನಾ ಒಟ್ಟಿಗೆ ನಟಿಸಿದ್ದಾರೆ. ಆಮೇಲೆ 8 ವರ್ಷಕ್ಕೆ ದೃಶ್ಯಂ ಸಿನಿಮಾಕ್ಕೆ ಸೀಕ್ವೆಲ್ ಆಗಿ ದೃಶ್ಯಂ 2 ಬಂದಿದೆ.

36

ಇದೀಗ ದೃಶ್ಯಂ-3 ಸಿನಿಮಾಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಹೀಗಾಗಿ, ದೃಶ್ಯಂ ಮಲೆಯಾಳಂ ಸಿನಿಮಾದ ನಟ ಮೋಹನ್ ಲಾಲ್ ಅವರೇ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಎಕ್ಸ್ ಅಕೌಂಟ್‌ನಲ್ಲಿ ದೃಶ್ಯಂ ಸಿನಿಮಾ ಡೈರೆಕ್ಟರ್ ಜೀತು ಜೋಸೆಫ್, ಪ್ರೊಡ್ಯೂಸರ್ ಜೊತೆಗಿರೋ ಫೋಟೋನೂ ಶೇರ್ ಮಾಡಿದ್ದಾರೆ.

46

ಮೋಹನ್ ಲಾಲ್ ಆಕ್ಟ್ ಮಾಡಿರೋ ಲಾಸ್ಟ್ ಸಿನಿಮಾ 'ಬಾರೋಸ್' ರಿಲೀಸ್ ಆಗಿದೆ. ಈ ಸಿನಿಮಾ ಜೊತೆ ಅವರು ಡೈರೆಕ್ಟರ್ ಕೂಡ ಆಗಿದ್ದಾರೆ. ಈಗ ಮಮ್ಮುಟ್ಟಿ ಜೊತೆ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ದೃಶ್ಯಂ-3 ಸಿನಿಮಾ ತೆಲುಗುನಲ್ಲೂ ಚಿತ್ರೀಕರಣ ಆರಂಭವಾಗುವ ಸಾಧ್ಯತೆಯಿದೆ. ಆದರೆ, ಕನ್ನಡದಲ್ಲಿ ರವಿಚಂದ್ರನ್ ಅವರು ರಿಮೇಕ್ ಮಾಡುತ್ತಾರಾ? ಇಲ್ಲವಾ ಎಂಬ ಮಾಹಿತಿ ಲಭ್ಯವಾಗಿಲ್ಲ.

56

ರವಿಚಂದ್ರನ್ ಅವರು ಕಳೆದ ಕೆಲವು ದಿನಗಳ ಹಿಂದೆ ದೃಶ್ಯ-3 ಸಿನಿಮಾದ ಬಗ್ಗೆ ಮಾತನಾಡಿದಾಗ ಮೂಲ ಕಥೆ ಏನಿದೆಯೋ ಅವರೇ ಕಥೆಯನ್ನು ಮುಂದುವರೆಸಿ ಬರೆಯಬೇಕು. ಅವರು ಪಾರ್ಟ್-3 ಮಾಡಿದ ನಂತರ ಅವರೊಂದಿಗೆ ಚರ್ಚಿಸಿ ನಾವು ಮಾಡಬೇಕು ಎಂದು ಹೇಳಿದ್ದರು. ಅಂದರೆ, ವೇದಿಕೆ ಮೇಲೆ ಅವರೇ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಳ್ಳಬೇಕಿದೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಇಲ್ಲದ ರವಿಚಂದ್ರನ್ ಅವರು, ಈ ಬಗ್ಗೆ ಸ್ವತಃ ಹೊಸ ಅಪ್ಡೇಟ್ ಮಾಹಿತಿ ನೀಡಬೇಕು.

66

ಮೋಹನ್ ಲಾಲ್ ಆಕ್ಟ್ ಮಾಡಿರೋ ಲಾಸ್ಟ್ ಸಿನಿಮಾ 'ಬಾರೋಸ್' ರಿಲೀಸ್ ಆಗಿದೆ. ಈ ಸಿನಿಮಾ ಜೊತೆ ಅವರು ಡೈರೆಕ್ಟರ್ ಕೂಡ ಆಗಿದ್ದಾರೆ. ಈಗ ಮಮ್ಮುಟ್ಟಿ ಜೊತೆ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ದೃಶ್ಯಂ-3 ಸಿನಿಮಾ ತೆಲುಗುನಲ್ಲೂ ಚಿತ್ರೀಕರಣ ಆರಂಭವಾಗುವ ಸಾಧ್ಯತೆಯಿದೆ. ಆದರೆ, ಕನ್ನಡದಲ್ಲಿ ರವಿಚಂದ್ರನ್ ಅವರು ರಿಮೇಕ್ ಮಾಡುತ್ತಾರಾ? ಇಲ್ಲವಾ ಎಂಬ ಮಾಹಿತಿ ಲಭ್ಯವಾಗಿಲ್ಲ.

click me!

Recommended Stories