ದಕ್ಷಿಣ ಚಿತ್ರರಂಗ: ಜನಪ್ರಿಯ ಆನ್-ಸ್ಕ್ರೀನ್ ಜೋಡಿ ಪಟ್ಟಿಯಲ್ಲಿ ಮತ್ತೆ ರಶ್ಮಿಕಾ -ವಿಜಯ್ ದೇವರಕೊಂಡ!

First Published | Dec 4, 2023, 5:23 PM IST

ದಕ್ಷಿಣ ಭಾರತದ ಚಲನಚಿತ್ರ ತಯಾರಿಕೆಯಲ್ಲಿ ವೈವಿಧ್ಯಮಯ ಪ್ರಕಾರಗಳು ಮತ್ತು ಶೈಲಿಗಳನ್ನು ಸತತವಾಗಿ ಅನ್ವೇಷಿಸುತ್ತವೆ. ದಕ್ಷಿಣದಿಂದ ಪ್ಯಾನ್-ಇಂಡಿಯನ್ ಆಕ್ಷನ್ ಥ್ರಿಲ್ಲರ್ ನಾಟಕಗಳು (Action Thriller Dramas) ಹೇರಳವಾಗಿದ್ದರೂ, ಅವು ಹೃದಯ ಸ್ಪರ್ಶಿಸುವ ಪ್ರಣಯ ನಿರೂಪಣೆಗಳನ್ನು ಸಹ ಹೊಂದಿರುತ್ತವೆ. ಅದೇ ರೀತಿ ಕೆಲವು ಆನ್-ಸ್ಕ್ರೀನ್ ಜೋಡಿಗಳು (On screen Pairs) ತಮ್ಮ ಕೆಮಿಸ್ಟ್ರಿಯಿಂದ ಜನರ  ಹೃದಯವನ್ನು ಗೆದ್ದಿದ್ದಾರೆ. ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದ ಚಲನಚಿತ್ರಗಳಿಂದ ಹೆಚ್ಚು ಮೆಚ್ಚುಗೆ ಪಡೆದ ಕೆಲವು ಜೋಡಿಗಳು ಇಲ್ಲಿವೆ
 

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ:
ಗೀತಾ ಗೋವಿಂದ ಸಿನಿಮಾ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರನ್ನು ಮೊದಲ ಬಾರಿಗೆ ತೆರೆ ಮೇಲೆ ಒಟ್ಟಿಗೆ ತಂದಿತ್ತು. ಅಂದಿನಿಂದಲೂ ಅವರ ಕೆಮಿಸ್ಟ್ರಿ  ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. 

ಮೃಣಾಲ್ ಠಾಕೂರ್ ಮತ್ತು ದುಲ್ಕರ್ ಸಲ್ಮಾನ್:
ನಿರ್ದೇಶಕ ಹನು ರಾಘವಪುಡಿ ಅವರು ತಮ್ಮ  ಮ್ಯಾಜಿಕಲ್‌ ಪ್ರೇಮ ಕಥೆ  'ಸೀತಾ ರಾಮಂ' ಮೂಲಕ  ಮಂತ್ರಮುಗ್ಧಗೊಳಿಸುವ ಪಯಣಕ್ಕೆ ಕರೆದೊಯ್ಯುತ್ತಾರೆ. ಇದರಲ್ಲಿನ  ಮೃಣಾಲ್ ಠಾಕೂರ್ ಮತ್ತು ದುಲ್ಕರ್ ಸಲ್ಮಾನ್ ಅವರ  ರೋಮ್ಯಾನ್ಸ್‌ ಪ್ರೇಕ್ಷಕರನ್ನು ಪ್ರೀತಿ ಮತ್ತು ತ್ಯಾಗದ ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತದೆ. ಈ ಜೋಡಿಗೂ ಸಿನಿ ಅಭಿಮಾನಿಗಳು ಮೆಚ್ಚುಗೆ ಇದೆ.

Tap to resize

ದುಲ್ಕರ್ ಸಲ್ಮಾನ್ ಮತ್ತು ನಿತ್ಯಾ ಮೆನನ್:
ರೊಮ್ಯಾಂಟಿಕ್ ಚಿತ್ರಗಳನ್ನು ರಚಿಸುವಾಗ ಮಣಿರತ್ನಂ ಒಬ್ಬ ಮೇಸ್ಟ್ರೋ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರ 2015 ರ ಸೃಷ್ಟಿಯಾದ 'ಓಕೆ ಕಣ್ಮಣಿ' ಇದಕ್ಕೆ ಹೊರತಾಗಿಲ್ಲ. ಚಲನಚಿತ್ರವು ಆಧುನಿಕ ಸಂಬಂಧದ ಸಂಕೀರ್ಣತೆಗಳ ಸುತ್ತ ಸುತ್ತುತ್ತದೆ. ಇದರಲ್ಲಿ ದುಲ್ಕರ್ ಸಲ್ಮಾನ್ ಮತ್ತು ನಿತ್ಯಾ ಮೆನೆನ್ ಕೆಮಿಸ್ಟ್ರಿ ಇಂದಿಗೂ ಜನಪ್ರಿಯವಾಗಿದೆ.
 

ಅಜಿತ್ ಕುಮಾರ್ ಮತ್ತು ತ್ರಿಶಾ ಕೃಷ್ಣ:
ಗೌತಮ್ ವಾಸುದೇವ್ ಮೆನನ್ ಅವರ  2015 ರ ಸಾಹಸ ಚಿತ್ರ ಯೆನ್ನೈ ಅರಿಂದಾಲ್ ಚಿತ್ರದಲ್ಲಿ ಅಜಿತ್ ಕುಮಾರ್ ಮತ್ತು ತ್ರಿಶಾ ಕೃಷ್ಣ ಜೋಡಿಯಾಗಿ ನಟಿಸಿದ್ದಾರೆ.

ಮಡೋನಾ ಸೆಬಾಸ್ಟಿಯನ್ ಮತ್ತು ವಿಜಯ್ ಸೇತುಪತಿ:
ಕಾದಲುಂ ಕಡಂದು ಪೋಗುಂ ರೊಮ್ಯಾಂಟಿಕ್ ಕಾಮಿಡಿಯಾಗಿದ್ದು  ಈ ಚಿತ್ರದಲ್ಲಿ ಮಡೋನಾ ಸೆಬಾಸ್ಟಿಯನ್ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Latest Videos

click me!