ಸ್ಮೃತಿ ಮಂಧನಾ To ತಮನ್ನಾ, ಈ ವರ್ಷ ಹಲವು ಸೆಲೆಬ್ರೆಟಿಗಳು ತಮ್ಮ ಸಂಬಂಧ ಮುರಿದುಕೊಂಡು ಬೇರೆ ಬೇರೆಯಾಗಿದ್ದಾರೆ. ಈ ಪೈಕಿ ಕೆಲವು ಕೋಹಾಲ ಸೃಷ್ಟಿಸಿದೆ. ಅನ್ಯೋನ್ಯವಾಗಿದ್ದ ಸಂಬಂಧಗಳು ಆರೋಪ ಪ್ರತ್ಯಾರೋಪ, ಹಲವು ಟ್ವಿಸ್ಟ್ ಮೂಲಕ ಬೇರ್ಪಟ್ಟಿದೆ.
2025ನೇ ವರ್ಷಕ್ಕೆ ಗುಡ್ ಬೈ ಹೇಳಿ ಹೊಸ ವರ್ಷ ಬರ ಮಾಡಿಕೊಳ್ಳಲು ಎಲ್ಲರೂ ಸಜ್ಜಾಗಿದ್ದಾರೆ. ಈ ವರ್ಷದ ಕಹಿ ನೆನಪು ಮರೆತು, ಹೊಸ ವರ್ಷದಲ್ಲಿ ಎಲ್ಲವೂ ಸುಂದರ ಹಾಗೂ ಸಮುಧುರವಾಗಿರಲಿ ಎಂದು ಬಯಸುತ್ತಾರೆ. ಆದರೆ ಕೆಲವರ ಬದುಕಿನಲ್ಲಿ 2025ನೇ ವರ್ಷ ಬಿರುಗಾಳಿಯನ್ನೇ ಎಬ್ಬಿಸಿದೆ. ಅದರಲ್ಲೂ ಲವ್, ರಿಲೇಶನ್‌ಶಿಪ್, ಮದುವೆ ಸಂಬಂಧಗಳು ಮುರಿದು ಬಿದ್ದು ಕೋಲಾಹಲವೇ ಸೃಷ್ಟಿಯಾಗಿದೆ.
26
ಸ್ಮೃತಿ ಮಂಧನಾ ಪಲಾಶ್ ಮುಚ್ಚಾಲ್
ಭಾರತ ಮಹಿಳಾ ತಂಡದ ಆಟಗಾರ್ತಿ ಸ್ಮೃತಿ ಮಂಧನಾ ಹಾಗೂ ಸಂಗೀತ್ ನಿರ್ದೇಶಕ ಪಲಾಚ್ ಮುಚ್ಚಾಲ್ ಪ್ರೀತಿ ಮದುವೆ ಅರ್ಥ ಪಡೆದು ಕಾರ್ಕ್ರಮಗಳು ಆರಂಭಗೊಂಡಿತ್ತು. ಸಂಗೀತ್ ಸೆರೆಮನಿ,ಮಹೆಂದಿ, ಹಳದಿ ಶಾಸ್ತ್ರಗಳು ಅದ್ಧೂರಿಯಾಗಿ ನಡೆದಿತ್ತು. ಈ ಜೋಡಿಯ ಸಂಭ್ರಮದ ವಿಡಿಯೋಗಳು ಹಲವರ ಖುಷಿ ಡಬಲ್ ಮಾಡಿತ್ತು. ಆದರೆ ಮದುವೆ ದಿನ ಬೆಳಕ್ಕೆ ಸಂಬಂಧ ಮುರಿದು ಬಿದ್ದಿತ್ತು. ಮೊದಲು ತಂದೆಯ ಆರೋಗ್ಯ ಕಾರಣ ನೀಡಿದ್ದ ಸ್ಮೃತಿ ಮಂಧನಾ ಬಳಿಕ ಮದುವೆ ಮುರಿದು ಬಿದ್ದಿರುವುದಾಗಿ ಸ್ಪಷ್ಟಪಡಿಸಿದ್ದರು.
36
ಯಜುವೇಂದ್ರ ಚಹಾಲ್- ಧನಶ್ರೀ ವರ್ಮಾ
2024ರಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಯಜುವೇಂದ್ರ ಚಹಾಲ್ ಹಾಗೂ ಧನಶ್ರಿ ವರ್ಮಾ ದಂಪತಿ ಬೇರೆ ಬೇರೆಯಾಗಿದ್ದಾರೆ, ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋ ಮಾತುಗಳು ಕೇಳಿಬಂದಿತ್ತು. 2025ರ ಮಾರ್ಚ್ ತಿಂಗಳಲ್ಲಿ ಚಹಾಲ್ ಹಾಗೂ ಧನಶ್ರೀ ವರ್ಮಾ ಅಧಿಕೃತವಾಗಿ ಬೇರೆಯಾಗಿರುವುದು ದೃಢಪಟ್ಟಿತ್ತು. ವಿಚ್ಚೇದನ ಬಳಿಕ ಪರಸ್ವರ ಗಂಭೀರ ಆರೋಪ ಮಾಡಿದ್ದರು. ವಂಚನೆ ಆರೋಪಗಳು ಕೇಳಿಬಂದಿತ್ತು. 2025ರಲ್ಲಿ ಚಹಾಲ್ ಧನಶ್ರಿ ವರ್ಮಾ ವಿಚ್ಚೇದನ ಭಾರಿ ಸದ್ದು ಮಾಡಿತ್ತು.
ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ 2 ವರ್ಷಗಳಿಂದ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇವರಿಬ್ಬರ ರಿಲೇಶನ್‌ಶಿಪ್ ಗೌಪ್ಯವಾಗಿ ಉಳಿದಿರಲಿಲ್ಲ. ಆದರೆ 20025ರ ಆರಂಭದಲ್ಲೇ ಇಬ್ಬರು ಬೇರೆ ಬೇರೆಯಾಗಿದ್ದರು. 2025ರಲ್ಲಿ ಈ ಜೋಡಿ ಹಲವು ಕಾರ್ಯಕ್ರಮಗಳಲ್ಲಿ ಬೇರೆ ಬೇರೆಯಾಗಿ ಕಾಣಿಸಿಕೊಂಡಿದ್ದಾರೆ. ತಮನ್ನ ಹಾಗೂ ವಿಜಯ್ ವರ್ಮಾ ಬ್ರೇಕ್ ಅಪ್ ಬಾರಿ ಕೋಲಾಹಲ ಸೃಷ್ಟಿಸಿತ್ತು.
56
ಸೆಲಿನಾ ಜೇಟ್ಲಿ ಪೀಟರ್ ಹಾಗ್
ಬಾಲಿವುಡ್ ನಟಿ ಸೆಲಿನಾ ಜೇಟ್ಲಿ ಹಾಗೂ ಪೀಟರ್ ಹಾಗ್ ವಿಚ್ಚೇದನ ಭಾರಿ ಸದ್ದು ಮಾಡಿತ್ತು. ಪತಿ ಪೀಟರ್ ಹಾಗ್ ವಿರುದ್ಧ ನವೆಂಬರ್ ತಿಂಗಳಲ್ಲಿ ಸೇಲಿನಾ ಕಿರುಕುಳದ ಆರೋಪ ಮಾಡಿದ್ದರು. ಇಷ್ಟೇ ಅಲ್ಲ ಮುಂಬೈ ಕೋರ್ಟ್ ಮೆಟ್ಟಿಲು ಹತ್ತಿದ್ದರು. ಆರೋಪ ಪ್ರತ್ಯಾರೋಪ ಗಂಭೀರ ಸ್ವರೂಪ ಪಡೆದುಕೊಂಡಿತ್ತು.
ಸೆಲಿನಾ ಜೇಟ್ಲಿ ಪೀಟರ್ ಹಾಗ್
66
ರಾಹುಲ್ ದೇಶಪಾಂಡೆ-ನೇಹಾ ದೇಶಪಾಂಡೆ
ರಾಷ್ಟ್ರೀಯ ಪ್ರಶಸ್ತಿ ವಿಜೇತ ಗಾಯ ರಾಹುಲ್ ದೇಶಪಾಂಡೆ ಹಾಗೂ ಪತ್ನಿ ನೇಹಾ ದೇಶಪಾಂಡೆ 17 ವರ್ಷಗಳ ದಾಂಪತ್ಯ ಜೀವನ ಇದೇ ವರ್ಷ ಅಂತ್ಯಗೊಂಡಿತ್ತು. ಹಲವು ತಿಂಗಳಿನಿಂದ ಊಹಾಪೋಹಗಳು ಕೇಳಿಬರುತ್ತಿತ್ತು, ಸೆಪ್ಟೆಂಬರ್ ತಿಂಗಳಲ್ಲಿ ಇರಿಬ್ಬರು ಅಧಿಕೃತವಾಗಿ ಬೇರೆ ಬೇರೆಯಾಗಿದ್ದರು.
ರಾಹುಲ್ ದೇಶಪಾಂಡೆ-ನೇಹಾ ದೇಶಪಾಂಡೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.