ಅಮೆರಿಕಗೆ ಹಾರುತ್ತಿದೆ ರಶ್ಮಿಕಾ-ದೇವರಕೊಂಡ ಜೋಡಿ, ಹೆಮ್ಮೆಯ ಕ್ಷಣಕ್ಕೆ ಕೆಲ ದಿನ ಮಾತ್ರ ಬಾಕಿ

Published : Jun 28, 2025, 10:55 PM IST

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿ ಅಮೆರಿಕಗೆ ತೆರಳುತ್ತಿದ್ದಾರೆ. ನ್ಯೂಯಾರ್ಕ್ ತೆರಳು ಟಿಕೆಟ್ ಬುಕ್ ಆಗಿದೆ. ಆ ಸಂತಸದ ಹಾಗೂ ಹೆಮ್ಮೆ ಕ್ಷಣಕ್ಕೆ ಸಾಕ್ಷಿಯಾಗಲು ಇನ್ನು ಕೆಲವೇ ದಿನ ಮಾತ್ರ ಬಾಕಿ ಇದೆ.

PREV
15

ರಶ್ಮಿಕಾ ಮಂದಣ್ಣ -ವಿಜಯ್ ದೇವರಕೊಂಡ ನಡುವಿನ ಸ್ಕ್ರೀನ್ ಮೇಲಿನ ಪ್ರೀತಿ ತೆರೆ ಮರೆಯಲ್ಲೂ ಮುಂದವರಿದಿದೆ ಅನ್ನೋ ಗಾಸಿಪ್ ಪ್ರತಿ ಬಾರಿ ಕೇಳಿಬರುತ್ತಲೇ ಇರುತ್ತದೆ. ಈ ಸುದ್ದಿಗಳನ್ನು ಈ ಜೋಡಿ ತಿರಸ್ಕರಿಸಿಲ್ಲ, ಇತ್ತ ಒಪ್ಪಿಕೊಂಡಿಲ್ಲ. ಹಲವು ಬಾರಿ ಈ ಜೋಡಿ ಜೊತೆಯಾಗಿ ಕಾಣಿಸಿಕೊಂಡು ಅಚ್ಚರಿ ನೀಡಿದ್ದಾರೆ. ವಿದೇಶಿ ಪ್ರವಾಸದಲ್ಲಿ ಜೊತೆಯಾಗಿದ್ದಾರೆ ಎಂದು ಕೆಲ ಫೋಟೋಗಳು ಹೇಳಿತ್ತು. ಇದೀಗ ಈ ಜೋಡಿ ಜೊತೆಯಾಗಿ ಅಮೆರಿಕಗೆ ತೆರಳುತ್ತಿದೆ.

25

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಹೆಮ್ಮೆಯ ಹಾಗೂ ಸಂತಸದ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಹೌದು, ಅಮೆರಿಕದಲ್ಲಿ ನಡೆಯಲಿರುವ ಈ ಬಾರಿಯ ಭಾರತದ ಸ್ವಾತಂತ್ರ್ಯ ದಿನಾಚರಣೆ ಪರೇಡ್‌‌ ಸಾರಥ್ಯವಹಿಸಲು ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣಗೆ ಆಹ್ವಾನ ನೀಡಲಾಗಿದೆ. ಈ ಜೋಡಿ ಆಹ್ವಾನ ಒಪ್ಪಿಕೊಂಡಿದ್ದಾರೆ.

35

ಅಮೆರಿಕದಲ್ಲಿರುವ ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಶನ್ ಈ ಸ್ವಾತಂತ್ರ್ಯ ದಿನಾಚರಣೆ ಪರೇಡ್ ಆಯೋಜಿಸುತ್ತಿದೆ. ಭಾರತದಲ್ಲಿ ಆಗಸ್ಟ್ 15ರಂದೇ ಈ ಪರೇಡ್ ನಡೆಯಲಿದೆ. ಆದರೆ ಅಮೆರಿಕದಲ್ಲಿ ಭಾರತದ ಸ್ವಾತಂತ್ರ್ಯ ದಿನಾಚರಣೆ ಪರೇಡ್ ಆಗಸ್ಟ್ 17 ರಂದು ಆಯೋಜಿಸಲಾಗಿದೆ. ಅತೀ ದೊಡ್ಡ ಸ್ವಾತಂತ್ರ್ಯ ದಿನಾಚರಣೆ ಪರೇಡ್‌ನ್ನು ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮುನ್ನಡೆಸಲಿದ್ದಾರೆ.

45

ಇದು ನ್ಯೂಯಾರ್ಕ್‌ನ 43ನೇ ಭಾರತದ ಸ್ವಾತಂತ್ರ್ಯ ದಿನಾಚರಣೆ ಪರೇಡ್ ಆಗಿದೆ. ಈ ಬಾರಿ ಕೆಲ ವಿಶೇಷತೆಗಳಿವೆ. ಪ್ರಮುಖವಾಗಿ ಈ ಪರೇಡ್‌ನಲ್ಲಿ ಪಹೆಲ್ಗಾಂ ದಾಳಿಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚನೆ ನಡೆಯಲಿದೆ. ಆಹ್ವಾನ ಹಾಗೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಕುರಿತು ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರೂ ಸಂತಸ ಹಂಚಿಕೊಂಡಿದ್ದಾರೆ.

55

ನ್ಯೂಯಾರ್ಕ್‌ನಲ್ಲಿನ ಭಾರತ ಸ್ವಾತಂತ್ರ್ಯ ದಿನಾಚರಣೆ ಹಾಗೂ ಪರೇಡ್ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೇನೆ. ಬನ್ನಿ ಎಲ್ಲರೂ ಪಾಲ್ಗೊಳ್ಳೋಣ, ಭಾರತಕ್ಕೆ ಗೌರವ ಸಮರ್ಪಿಸೋಣ ಎಂದು ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಹೇಳಿದ್ದಾರೆ. ವಿಶೇಷ ಅತಿಥಿಗಳಾಗಿ ಈ ಬಾರಿ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಈ ಪರೇಡ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

Read more Photos on
click me!

Recommended Stories