ಛಾವಾ ಚಿತ್ರದ ಪ್ರಚಾರದ ವೇಳೆ ರಶ್ಮಿಕಾ ಮಂದಣ್ಣ ಲುಕ್‌ಗೆ ಫ್ಯಾನ್ಸ್ ಫಿದಾ

Published : Feb 09, 2025, 10:29 PM IST

ವಿಕ್ಕಿ ಕೌಶಾಲ್ ಹಾಗೂ ರಶ್ಮಿಕಾ ಮಂದಣ್ಣ ಛಾವಾ ಚಿತ್ರದ ಪ್ರಚಾರದಲ್ಲಿ ತೊಡಗಿದ್ದಾರೆ. ವಿಶೇಷ ಅಂದರೆ ಪ್ರಚಾರದ ವೇಳೆ ರಶ್ಮಿಕಾ ಮಂದಣ್ಣ ಡ್ರೆಸ್ ಹಾಗೂ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.  

PREV
17
ಛಾವಾ ಚಿತ್ರದ ಪ್ರಚಾರದ ವೇಳೆ ರಶ್ಮಿಕಾ ಮಂದಣ್ಣ ಲುಕ್‌ಗೆ ಫ್ಯಾನ್ಸ್ ಫಿದಾ

ವಿಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಛವಾ' ಚಿತ್ರಕ್ಕೆ ಮಹಾರಾಷ್ಟ್ರದಲ್ಲಿ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದೆ. ಫೆಬ್ರವರಿ 9 ರಂದು ಇಬ್ಬರು ನಟರು ಮುಂಬೈನ ಚಿತ್ರಮಂದಿರದಲ್ಲಿ ಚಿತ್ರದ ಪ್ರಚಾರ ಮಾಡಿದರು. ಫೆಬ್ರವರಿ 14 ರಂದು ಛಾವ ಚಿತ್ರ ಬಿಡುಗಡೆಯಾಗುತ್ತಿದೆ. ಇದಕ್ಕೂ ಮೊದಲು ಮುಂಬೈನ ಹಲವು ಭಾಗದಲ್ಲಿ ವಿಕ್ಕಿ ಹಾಗೂ ರಶ್ಮಿಕಾ ಪ್ರಚಾರ ಮಾಡುತ್ತಿದ್ದಾರೆ. ಪ್ರಚಾರಕ್ಕೆ ಆಗಮಿಸಿದ ರಶ್ಮಿಕಾ ಮಂದಮ್ಣ ಕೇಸರಿ ಡ್ರೆಸ್ ಮೂಲಕ ಮಿಂಚಿದ್ದಾರೆ. ಸಂಭಾಜಿ ಮಹಾರಾಜರ ಪತ್ನಿ ಯೇಸುಭಾಯಿ ಭೋನ್ಸಾಲೆ ಪಾತ್ರ ನಿರ್ವಹಿಸಿರುವ ರಶ್ಮಿಕಾ ಮಂದಣ್ಣ ಪ್ರಚಾರದ ವೇಳೆ ಧರಿಸಿದ್ದ ಡ್ರೆಸ್ ಎಲ್ಲರ ಗಮನಸೆಳೆದಿದೆ. 

27

ರಶ್ಮಿಕಾ ಮಂದಣ್ಣ ಕೇಸರಿ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಹೊಸ ಲುಕ್ ಅಭಿಮಾನಿಗಳನ್ನು ಮತ್ತಷ್ಟು ಆಕರ್ಷಿಸಿದೆ. ಮುಂಬೈನ ಹಲವು ಕಡೆ ಪ್ರಚಾರ ಆರಂಭಗೊಂಡಿದೆ.ದಾದಾರ್‌ನ ಚಿಚ್ರ ಸಿನಿಮಾ ಥಿಯೇಟರ್‌‌ಗೆ ಆಗಮಿಸಿದ ವಿಕ್ಕಿ ಹಾಗೂ ರಶ್ಮಿಕಾ ಮಂದಣ್ಣಗೆ ಭರ್ಜರಿ ಸ್ವಾಗತ ನೀಡಲಾಗಿತ್ತು. ಕಿಕ್ಕಿರಿದು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಈ ವೇಳೆ ಸಂಭಾಜಿ ಮಹಾರಾಜ್ ಕಿ ಜೈ ಎಂದು ಘೋಷಣೆಗಳು ಮೊಳಗಿತ್ತು. ಚಿತ್ರದ ಕುತೂಹಲ ತೀವ್ರ ಹೆಚ್ಚಾಗಿದೆ. ಛಾವ ಚಿತ್ರ ಬಾಲಿವುಡ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುವ ಸಾಧ್ಯತೆ ಇದೆ. 

37

'ಛವಾ' ಚಿತ್ರ ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಛತ್ರಪತಿ ಸಂಭಾಜಿ ಮಹಾರಾಜರ ಜೀವನಾಧಾರಿತ. ಅತೀ ಸೂಕ್ಷ್ಮ ವಿಚಾರವಾಗಿರುವ ಕಾರಣ ಚಿತ್ರ ತಂಡ ಹೆಚ್ಚು ಮುತುವರ್ಜಿ ವಹಿಸಿ ಈ ಚಿತ್ರ ನಿರ್ಮಾಣ ಮಾಡಿದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಕ್ಕಿ ಕೌಶಾಲ್ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟ್ರೇಲರ್‌ನಲ್ಲಿ ಇಬ್ಬರ ಅಭಿನಯಕ್ಕೆ ಮನ್ನಣೆ ಸಿಕ್ಕಿತ್ತು. 

47

ಟ್ರೇಲರ್ ಬೆನ್ನಲ್ಲೇ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಿತ್ತು. ಲೆಝಿಮ್ ನೃತ್ಯದ ಈ ಹಾಡು ವಿವಾದಕ್ಕೆ ಕಾರಣವಾಗಿತ್ತು. ಮಹಾರಾಷ್ಟ್ರದಲ್ಲಿ ಹಲವು ಸಂಘಟನೆಗಳು ಈ ಹಾಡಿಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಹೀಗಾಗಿ ಚಿತ್ರತಂಡ ಈ ಹಾಡಿಗೆ ಕತ್ತರಿ ಹಾಕಿತ್ತು. 

57

ಲಕ್ಷ್ಮಣ್ ಉಟೇಕರ್ 'ಛವಾ' ಚಿತ್ರವನ್ನು ನಿರ್ದೇಶಿಸಿದ್ದಾರೆ. ವಿಕಿ ಕೌಶಲ್ ಸಂಭಾಜಿ ಪಾತ್ರದಲ್ಲಿ ನಟಿಸಿದ್ದಾರೆ.'ಛವಾ'ದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ ಮತ್ತು ಅಕ್ಷಯ್ ಖನ್ನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

67

ಮಹಾರಾಷ್ಟ್ರದ ಪ್ರೇಕ್ಷಕರು 'ಛವಾ' ಚಿತ್ರಕ್ಕಾಗಿ ಕಾತುರರಾಗಿದ್ದಾರೆ.Sacnilk ವರದಿಯ ಪ್ರಕಾರ, ಚಿತ್ರವು ಫೆಬ್ರವರಿ 9 ರ ಸಂಜೆ 4:45 ರ ವೇಳೆಗೆ 60.2 ಲಕ್ಷ ರೂಪಾಯಿಗಳ ಮುಂಗಡ ಬುಕಿಂಗ್ ಸಂಗ್ರಹಿಸಿದೆ.

77

'ಛವಾ' ಚಿತ್ರ ಈವರೆಗೆ 1.54 ಕೋಟಿ ರೂಪಾಯಿಗಳ ಮುಂಗಡ ಬುಕಿಂಗ್ ಸಂಗ್ರಹಿಸಿದೆ.ಹೊಸ ದಾಖಲೆ ಬರೆಯಲು ಛಾವಾ ಚಿತ್ರ ಸಜ್ಜಾಗಿದೆ. ದೇಶಾದ್ಯಂತ ಛಾವಾ ಚಿತ್ರ ಬಿಡುಗಡೆಯಾಗುತ್ತಿದೆ. 

Read more Photos on
click me!

Recommended Stories