Published : Feb 09, 2025, 08:37 PM ISTUpdated : Feb 09, 2025, 08:41 PM IST
ನಟ ಅಜಿತ್ ಕುಮಾರ್ ಕಾರು ರೇಸ್ ಪ್ರೀತಿ ಎಲ್ಲರಿಗೂ ಗೊತ್ತೇ ಇದೆ. ಆದರೆ ದುಬೈನಲ್ಲಿ ಅಜಿತ್ ಕಾರು ಅಪಘಾತಗೊಂಡು ಆತಂಕ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಇದೀಗ ಪೋರ್ಚುಗಲ್ ರೇಸ್‌ನಲ್ಲಿ ಅಜಿತ್ ಕಾರು ಅಪಘಾತಕ್ಕೀಡಾಗಿದೆ.
ಪೋರ್ಚುಗಲ್ ಕಾರ್ ರೇಸ್‌ನಲ್ಲಿ ಅಜಿತ್ ಕಾರ್ ಆಕ್ಸಿಡೆಂಟ್ : ಬೈಕ್ ಮತ್ತು ಕಾರ್ ರೇಸ್ ಮೇಲೆ ಅತೀವ ಆಸಕ್ತಿ ಹೊಂದಿರುವ ಅಜಿತ್ ಕಳೆದ ಜನವರಿ ತಿಂಗಳಿನಲ್ಲಿ ದುಬೈನಲ್ಲಿ ನಡೆದ ಕಾರ್ ರೇಸ್‌ನಲ್ಲಿ ಭಾಗವಹಿಸಿದ್ದರು. ಒಂದು ತಿಂಗಳಿನಿಂದಲೂ ದುಬೈನಲ್ಲಿ ತಂಗಿ ಅಭ್ಯಾಸ ಮಾಡಿದ್ದರು. ತಮ್ಮ ಕಾರನ್ನು ರೇಸ್‌ಗಾಗಿ ವಿನ್ಯಾಸಗೊಳಿಸಿದ್ದರು. ಆದರೆ ಅಭ್ಯಾಸದ ವೇಳೆ ಬ್ರೇಕ್ ಫೇಲ್ ಆಗಿ ಆಕ್ಸಿಡೆಂಟ್ ಆಯಿತು. ಅದೃಷ್ಟವಶಾತ್ ಅಜಿತ್‌ಗೆ ಏನೂ ಆಗಲಿಲ್ಲ. ಇದೀಗ ಎರಡನೇ ಬಾರಿಗೆ ಅಜಿತ್ ಕಾರು ಅಪಘಾತಕ್ಕೀಡಾಗಿದೆ.
24
ಮತ್ತೆ ಆಕ್ಸಿಡೆಂಟ್‌ಗೆ ಒಳಗಾದ ಅಜಿತ್
ದುಬೈ ರೇಸ್‌ನಲ್ಲಿ ಅಜಿತ್ 3ನೇ ಸ್ಥಾನ ಪಡೆದು ಸಾಧನೆ ಮಾಡಿದರು. ದುಬೈ ಕಾರ್ ರೇಸ್ ನಂತರ ಪೋರ್ಚುಗಲ್‌ನಲ್ಲಿ ನಡೆಯುತ್ತಿರುವ ಕಾರ್ ರೇಸ್‌ನಲ್ಲಿ ಭಾಗವಹಿಸಿದ್ದರು. ಇದರಲ್ಲಿ ಅನಿರೀಕ್ಷಿತವಾಗಿ ಕಾರ್ ಅಪಘಾತಕ್ಕೀಡಾಗಿದೆ. ಅಭ್ಯಾಸದ ವೇಳೆ ಅಜಿತ್ ಡ್ರೈವ್ ಮಾಡುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಈ ಆಕ್ಸಿಡೆಂಟ್‌ನಲ್ಲಿ ಅಜಿತ್‌ಗೆ ಯಾವುದೇ ಗಾಯಗಳಾಗಿಲ್ಲ. ಆದರೆ ಅವರ ಕಾರ್ ಮಾತ್ರ ಸಂಪೂರ್ಣವಾಗಿ ಜಖಂಗೊಂಡಿದೆ.
34
ಅಜಿತ್ ಕಾರ್ ಆಕ್ಸಿಡೆಂಟ್
ಕಾರಿನ ಬ್ರೇಕ್ ವಿಫಲಗೊಂಡ ಕಾರಣ ಅಪಘಾತಗೊಂಡಿದೆ. ಆಕ್ಸಿಡೆಂಟ್ ನಂತರ ಮಾತನಾಡಿದ ಅಜಿತ್, "ನಾವು ಖುಷಿಯಾಗಿದ್ದೇವೆ. ಸಣ್ಣ ಆಕ್ಸಿಡೆಂಟ್ ಆದರೂ ನಮಗೆ ಏನೂ ಆಗಿಲ್ಲ. ಕಾರ್ ರೇಸ್‌ನಲ್ಲಿ ಗೆಲ್ಲುತ್ತೇವೆ. ನಮಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು" ಎಂದಿದ್ದಾರೆ. ಅಜಿತ್ ನಟನೆಯ 'ವಿದಾಮುಯರ್ಚಿ' ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.
44
'ವಿದಾಮುಯರ್ಚಿ' ಸಿನಿಮಾದಲ್ಲಿ ಅಜಿತ್ ಜೊತೆಗೆ ತ್ರಿಷಾ, ಅರ್ಜುನ್, ಆರವ್, ರೆಜಿನಾ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾ ನಂತರ ಆದಿಕ್ ರವಿಚಂದ್ರನ್ ನಿರ್ದೇಶನದ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮೇ 1 ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.