ಹಿಂದಿ ಸಿನಿಮಾಗಳಲ್ಲಿ ಮಿಂಚುತ್ತಿರುವ ಸೌತ್ ನಟಿಯರಲ್ಲಿ ಪ್ರಸ್ತುತ್ತ ರಶ್ಮಿಕಾ ಮಂದಣ್ಣರ ಹೆಸರು ಪ್ರಮುಖವಾಗಿದೆ. ಇದರ ನಡುವೆ ಮೀಡಿಯಾ ಕನ್ಸೆಲೆಟಿಂಗ್ ಫರ್ಮ್ ಅರ್ಮೋಕಸ್ ಮೀಡಿಯಾ ಜನವರಿ 2024ರ ಜನಪ್ರಿಯ ಬಾಲಿವುಡ್ ತಾರೆಯರ ಪಟ್ಟಿ ಬಿಡುಗಡೆ ಮಾಡಿದೆ. ಹಾಗಾದರೆ ಈ ಪಟ್ಟಿಯಲ್ಲಿ ರಶ್ಮಿಕಾ ಸ್ಥಾನ ಪಡೆದಿದ್ದಾರಾ?
ಆಲಿಯಾ ಭಟ್: ಮೀಡಿಯಾ ಕನ್ಸೆಲೆಟಿಂಗ್ ಫರ್ಮ್ ಅರ್ಮೋಕಸ್ ಮೀಡಿಯಾ ಬಿಡುಗಡೆ ಮಾಡಿರುವ ಜನವರಿ 2024ರ ಜನಪ್ರಿಯ ಬಾಲಿವುಡ್ ತಾರೆಯರ ಪಟ್ಟಿಯಲ್ಲಿ ಆಲಿಯಾ ಭಟ್ ಟಾಪ್‌ನಲ್ಲಿದ್ದಾರೆ.
210
ದೀಪಿಕಾ ಪಡುಕೋಣೆ: 2023ರಲ್ಲಿ ಬ್ಯಾಕ್ ಟು ಬ್ಯಾಕ್ ಸೂಪರ್‌ಹಿಟ್ ಸಿನಿಮಾಗಳಲ್ಲಿ ನಟಿಸಿದ ದೀಪಿಕಾ ಪಡುಕೋಣೆ 2024 ರಲ್ಲೂ ತಮ್ಮ ಜನಪ್ರಿಯತೆ ಉಳಿಸಿಕೊಂಡು ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.
310
Katrina Kaif doppelganger Amy Aela
ಕತ್ರಿನಾ ಕೈಫ್: ಮೀಡಿಯಾ ಕನ್ಸೆಲೆಟಿಂಗ್ ಫರ್ಮ್ ಅರ್ಮೋಕಸ್ ಮೀಡಿಯಾ ಬಿಡುಗಡೆ ಮಾಡಿರುವ 2024ರ ಜನಪ್ರಿಯ ಬಾಲಿವುಡ್ ನಟಿಯರ ಪಟ್ಟಿಯಲ್ಲಿ ಕತ್ರಿನಾ ಕೈಫ್ ಮೂರನೇ ಸ್ಥಾನದಲ್ಲಿದ್ದಾರೆ. ಕಡೆಯದಾಗಿ ಮೇರಿ ಕ್ರೀಸ್ಮಸ್ ಸಿನಿಮಾನಲ್ಲಿ ನಟಿ ಕಾಣಿಸಿಕೊಂಡರು.
410
ಕಿಯಾರಾ ಅಡ್ವಾಣಿ: ಈ ಪಟ್ಟಿಯ ನಾಲ್ಕನೇ ಸ್ಥಾನದಲ್ಲಿ ನಟಿ ಕಿಯಾರಾ ಅಡ್ವಾಣಿ ಇದ್ದಾರೆ. ಕಿಯಾರಾ ಅವರು ಮುಂದಿನ ದಿನಗಳಲ್ಲಿ ಹೃತಿಕ್ ರೋಷನ್ ಅವರೊಂದಿಗೆ ವಾರ್ 2 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
510
ಕೃತಿ ಸನೋನ್: ಬಾಲಿವುಡ್‌ನ ಪ್ರಾಮಿಸ್ಸಿಂಗ್ ಯುವ ನಟಿ ಕೃತಿ ಸನೋನ್ ಈ ಪಟ್ಟಿಯ ಐದನೇ ಸ್ಥಾನ ಆಕ್ರಮಿಸಿಕೊಂಡಿದ್ದಾರೆ. ಕೃತಿ ಅವರು ತಮ್ಮ ಮಿಮಿ ಚಿತ್ರದ ಅಭಿನಯಕ್ಕಾಗಿ ಬಾರಿ ಮೆಚ್ಚುಗೆ ಮತ್ತು ಪ್ರಶಸ್ತಿಗಳನ್ನು ಗಳಿಸಿದ್ದರು.
610
ಶ್ರದ್ಧಾ ಕಪೂರ್: ಜನವರಿ 2024ರ ಜನಪ್ರಿಯ ನಟಿಯರ ಪಟ್ಟಿಯ ಆರನೇ ಸ್ಥಾನದಲ್ಲಿ ನಟಿ ಶ್ರದ್ಧಾ ಕಪೂರ್ ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಶ್ರದ್ಧಾ ಅವರ ಯಾವುದೇ ಸಿನಿಮಾಗಳು ಬಂದಿಲ್ಲ.
710
ಕರೀನಾ ಕಪೂರ್: ಕರೀನಾ ಕಪೂರ್ ಇಂದಿಗೂ ಬಾಲಿವುಡ್‌ನ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ಕರೀನಾ ಮುಂದಿನ ದಿನಗಳಲ್ಲಿ ಸಿಂಘಮ್ ಆಗೈನ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
810
ರಶ್ಮಿಕಾ ಮಂದಣ್ಣ: ಬ್ಯಾಕ್ ಟು ಬ್ಯಾಕ್ ಬಾಲಿವುಡ್ ಸಿನಿಮಾಗಳಲ್ಲಿ ಅವಕಾಶ ಪಡೆದುಕೊಳ್ಳುತ್ತಿರುವ ದಕ್ಷಿಣದ ನಟಿ ರಶ್ಮಿಕಾ ಮಂದಣ್ಣ ಈ ಪಟ್ಟಿಯಲ್ಲಿ ಎಂಟನೇ ಸ್ಥಾನ ಪಡೆದುಕೊಂಡಿದ್ದಾರೆ. ಆನಿಮಲ್ ಸಿನಿಮಾದನಂತರ ಈಗ ರಶ್ಮಿಕಾ ಅವರು ಪುಷ್ಪ 2 ಗಾಗಿ ಚರ್ಚೆಯಲ್ಲಿದ್ದಾರೆ.
910
ಪ್ರಿಯಾಂಕಾ ಚೋಪ್ರಾ: ಬಹಳ ಸಮಯದಿಂದ ಹಿಂದಿ ಸಿನಿಮಾಗಳಿಂದ ದೂರವಿರುವ ಪ್ರಿಯಾಂಕಾ ಚೋಪ್ರಾ ಕೂಡ ಜನಪ್ರಿಯ ನಟಿಯರ ಪಟ್ಟಿಯಲ್ಲಿದ್ದಾರೆ. ಇವರು 9ನೇ ಸ್ಥಾನದಲ್ಲಿದ್ದಾರೆ.
1010
ಅನುಷ್ಕಾ ಶರ್ಮಾ : ಈ ಪಟ್ಟಿಯಲ್ಲಿ ನಟಿ ಅನುಷ್ಕಾ ಶರ್ಮಾ 10ನೇ ಸ್ಥಾನದಲ್ಲಿದ್ದಾರೆ. ಶೀಘ್ರದಲ್ಲೇ ಅನುಷ್ಕಾ ಅವರು ಚಕ್ಕಡ್ ಎಕ್ಸ್‌ಪ್ರೆಡಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.