ಗೋಲ್ಡನ್ ಬ್ಲ್ಯಾಕ್ ಗೌನ್‌ನಲ್ಲಿ ರಶ್ಮಿಕಾ ಮಿಂಚಿಂಗ್; ಹೇಗಿದೆ ನೋಡಿ ಪುಷ್ಪ ನಟಿಯ ಹೊಸ ಲುಕ್

Published : Apr 02, 2023, 05:41 PM ISTUpdated : Apr 02, 2023, 05:49 PM IST

ಗೋಲ್ಡನ್  ಬ್ಲ್ಯಾಕ್ ಗೌನ್ ಡ್ರೆಸ್  ನಟಿ ರಶ್ಮಿಕಾ ಮಂದಣ್ಣ ಮಸ್ತ್ ಪೋಸ್ ನೀಡಿದ್ದಾರೆ. ಹೋಸ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

PREV
16
ಗೋಲ್ಡನ್ ಬ್ಲ್ಯಾಕ್ ಗೌನ್‌ನಲ್ಲಿ ರಶ್ಮಿಕಾ ಮಿಂಚಿಂಗ್; ಹೇಗಿದೆ ನೋಡಿ ಪುಷ್ಪ ನಟಿಯ ಹೊಸ ಲುಕ್

ನಟಿ ರಶ್ಮಿಕಾ ಮಂದಣ್ಣ ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ.  ತೆಲುಗು, ತಮಿಳು ಬಾಲಿವುಡ್ ಅಂತ ರಶ್ಮಿಕಾ ಸಖತ್ ಬ್ಯುಸಿಯಾಗಿದ್ದಾರೆ. ಸಿನಿಮಾಗಳ ನಡುವೆ ರಶ್ಮಿಕಾ ಈವೆಂಟ್, ಜಾಹೀರಾತಿಗಳಲ್ಲೂ ಕಾಣಿಸಿಕೊಳ್ಳುತ್ತಿರುತ್ತಾರೆ. ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. 

26

ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ. ಸದಾ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ರಶ್ಮಿಕಾ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ. 

36

ಸದ್ಯ ಕಿರಿಕ್ ಸುಂದರಿ ಗೋಲ್ಡನ್ ಬ್ಲ್ಯಾಕ್ ಗೌನ್ ನಲ್ಲಿ ಮಿಂಚಿದ ಫೋಟೋ ಶೇರ್ ಮಾಡಿದ್ದಾರೆ. ರಶ್ಮಿಕಾ ಹೊಸ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಕಪ್ಪು ಬಣ್ಣದ ಗೌನ್ ಮೇಲೆ ಗೋಲ್ಡ್ ಡಿಸೈನ್ ಇದೆ. ನವಿಲು ಹಾಗೆ ರಶ್ಮಿಕಾ ಪೋಸ್ ನೀಡಿದ್ದಾರೆ. ರಶ್ಮಿಕಾ ಫೋಟೋಗಳಿಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡಿ ಮೆಚ್ಚಿಗೆ ವ್ಯಕ್ತಪಡಿಸುತ್ತಿದ್ದಾರೆ. 

46

ಹಾರ್ಟ್ ಇಮೋಜಿ ಇರಿಸಿ ಪ್ರೀತಿ ವ್ಯಕ್ತ ಪಡಿಸುತ್ತಿದ್ದಾರೆ. ಸೂಪರ್, ಹಾಟ್ ಎಂದು ಹೇಳುತ್ತಿದ್ದಾರೆ. ರಶ್ಮಿಕಾ ಸದಾ ತನ್ನ ಲುಕ್ ಮೂಲಕ ಅಭಿಮಾನಿಗಳ ಹೃದಯ ಗೆಲ್ಲುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ಹೊಸ ಲುಕ್ ಮೂಲಕ ಮೋಡಿ ಮಾಡುತ್ತಿದ್ದಾರೆ. 

56

ಬಾಲಿವುಡ್‌ನಲ್ಲಿ ಸದ್ಯ ರಶ್ಮಿಕಾ ಅವರದ್ದೇ ಹವಾ. ನೀತಾ ಮುಖೇಶ್ ಅಂಬಾನಿ ಸಾಂಸ್ಕೃಕ ಕಾರ್ಯಕ್ರಮದಲ್ಲೂ ರಶ್ಮಿಕಾ ಮಿಂಚಿದ್ದಾರೆ. ಆಲಿಯಾ ಭಟ್ ಜೊತೆ ಮಸ್ತ್ ಡಾನ್ಸ್ ಮಾಡಿದ್ದಾರೆ. ಐಪಿ‌ಎಲ್ ಓಪನಿಂಗ್‌ನಲ್ಲೂ ರಶ್ಮಿಕಾ ಸಖತ್ ಡಾನ್ಸ್ ಮಾಡಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. 

66

ರಶ್ಮಿಕಾ ಮಂದಣ್ಣ ಸದ್ಯ ಹಿಂದಿಯಲ್ಲಿ ‘ಅನಿಮಲ್​’ ಹಾಗೂ ತೆಲುಗಿನಲ್ಲಿ ‘ಪುಷ್ಪ 2’ ಸಿನಿಮಾದಲ್ಲಿ  ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಇತ್ತೀಚೆಗಷ್ಟೆ ತೆಲುಗು ನಟ ನಿತಿನ್ ಜೊತೆ  ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories