3 ಸಿನಿಮಾ, ₹3300 ಕೋಟಿ ಗಳಿಕೆ, ಪ್ಯಾನ್ ಇಂಡಿಯಾ ಸಿನಿಮಾಗಳ ಲಕ್ಕಿ ಹೀರೋಯಿನ್ ಯಾರು ಗೊತ್ತಾ?

Published : Mar 13, 2025, 09:01 PM ISTUpdated : Mar 14, 2025, 12:35 AM IST

Pan India Lucky Heroine: ಹೀರೋ ಆದ್ರೂ, ಹೀರೋಯಿನ್ ಆದ್ರೂ ಒಳ್ಳೆ ಅವಕಾಶ ಸಿಗಬೇಕಂದ್ರೆ ಅವರ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಒಳ್ಳೆ ಕಲೆಕ್ಷನ್ ತರಬೇಕು. ಎಷ್ಟೇ ಒಳ್ಳೆ ನಟರಾದ್ರೂ ಸಿನಿಮಾ ಓಡದೇ ಇದ್ರೆ ಯಾರೂ ತಲೆ ಕೆಡಿಸಿಕೊಳ್ಳಲ್ಲ. ಆದ್ರೆ, ಈಗ ಭಾರತೀಯ ಚಿತ್ರರಂಗದಲ್ಲಿ ಒಬ್ಬ ಹೀರೋಯಿನ್ ಮಾತ್ರ ಕಾಲಿಟ್ಟಲೆಲ್ಲ ಕೋಟಿ ಸುರಿಯುತ್ತೆ. ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಅದೃಷ್ಟ ದೇವತೆ ಆಗಿಬಿಟ್ಟಿದ್ದಾರೆ. ಇಷ್ಟಕ್ಕೂ ಆ ಬ್ಯೂಟಿ ಯಾರು?  

PREV
14
3 ಸಿನಿಮಾ,  ₹3300 ಕೋಟಿ ಗಳಿಕೆ, ಪ್ಯಾನ್ ಇಂಡಿಯಾ ಸಿನಿಮಾಗಳ ಲಕ್ಕಿ ಹೀರೋಯಿನ್ ಯಾರು ಗೊತ್ತಾ?

Pan India Lucky Heroine:  ಸ್ಟಾರ್ ಹೀರೋಗಳಿಗೆ ಅವ್ರು ಲಕ್ಕಿ ಹೀರೋಯಿನ್ ಆಗಿ ಬದಲಾಗಿದ್ದಾರೆ. ತೆಲುಗು ಸಿನಿಮಾಗಳಿಂದ ಸ್ಟಾರ್ ಡಮ್ ಸಂಪಾದಿಸಿದ ಈ ಬ್ಯೂಟಿ.. ಸದ್ಯಕ್ಕೆ ಪ್ಯಾನ್ ಇಂಡಿಯಾವನ್ನೇ ಆಳ್ತಾ ಇದ್ದಾರೆ. ತೆಲುಗಿನಲ್ಲಿ ಮಾಡಿದ ಸಿನಿಮಾಗಳೆಲ್ಲಾ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದರಿಂದ.. ಬಾಲಿವುಡ್ ನಲ್ಲೂ ಸೀರಿಯಲ್ ಆಗಿ ಅವಕಾಶ ಗಿಟ್ಟಿಸ್ಕೊಳ್ತಿದ್ದಾರೆ. ಅಲ್ಲಿಯೂ ನೂರಾರು ಕೋಟಿ ಗಳಿಸೋ ಹೀರೋಯಿನ್ ಆಗಿ ಅವತರಿಸಿದ್ದಾರೆ. ಇಷ್ಟಕ್ಕೂ ಆ ಹೀರೋಯಿನ್ ಯಾರು? 

 

24
ರಶ್ಮಿಕಾ ಮಂದಣ್ಣ

ಅವರು ಬೇರೆ ಯಾರೂ ಅಲ್ಲ ರಶ್ಮಿಕಾ ಮಂದಣ್ಣ ಅದೃಷ್ಟ ದೇವತೆಯಾಗಿ ಬದಲಾಗಿದ್ದಾರೆ. ಅದು ಸುಮ್ಮನೆ ರಾತ್ರೋರಾತ್ರಿ ಬಂದಿದ್ದಲ್ಲ. ಅದರ ಹಿಂದೆ ವರ್ಷಗಳ ಪರಿಶ್ರಮವಿದೆ. ಈ ಪರಿಶ್ರಮದಿಂದ ಸ್ಟಾರ್‌ಡಮ್ ರಶ್ಮಿಕಾಗೆ ಬಹಳ ಬೇಗನೆ ಸಿಕ್ಕಿದೆ. ಎಲ್ಲಾ ನಾಯಕಿಯರು ಕನಸು ಕಾಣುವ ಜೀವನವನ್ನು ರಶ್ಮಿಕಾ ಕೆಲವೇ ವರ್ಷಗಳಲ್ಲಿ ಸಾಧಿಸಿದ್ದಾರೆ. ರಶ್ಮಿಕಾ ನಾಯಕಿಯಾಗಿ ನಟಿಸಿದ ಕೊನೆಯ ಮೂರು ಚಿತ್ರಗಳು ಒಟ್ಟಾರೆಯಾಗಿ 3300 ಕೋಟಿ ರೂ.ಗಳನ್ನು ಗಳಿಸಿವೆ. ಹೌದು, ತುಂಬಾ ಜನ ಹೀರೋಗಳು ಕೂಡ ಮುಟ್ಟೋಕೆ ಆಗ್ದೇ ಇರೋ ರೇಂಜ್ ಇಮೇಜ್ ಜೊತೆ ಅವ್ರು ಮುಂದೆ ಹೋಗ್ತಾ ಇದ್ದಾರೆ.

34

ರಶ್ಮಿಕಾ ನಟಿಸಿದ ಎರಡು ಹಿಂದಿ ಚಿತ್ರಗಳು ಮತ್ತು ಒಂದು ಪ್ಯಾನ್-ಇಂಡಿಯನ್ ತೆಲುಗು ಚಿತ್ರ ಉತ್ತಮ ಪ್ರದರ್ಶನ ನೀಡಿತು. ಹಿಂದಿ ಚಲನಚಿತ್ರಗಳಾದ 'ಅನಿಮಲ್' ಮತ್ತು 'ಚಾವಾ' ಹಾಗೂ ತೆಲುಗು ಇಂಡಸ್ಟ್ರಿಯಿಂದ ಬ್ಲಾಕ್‌ಬಸ್ಟರ್ ಪ್ಯಾನ್-ಇಂಡಿಯಾ ಚಲನಚಿತ್ರ 'ಪುಷ್ಪ 2' ಕೂಡ ಉತ್ತರ ಭಾರತದಲ್ಲಿ ಸಂಚಲನ ಸೃಷ್ಟಿಸಿವೆ. ಈ ಮೂರು ಚಿತ್ರಗಳು ಒಟ್ಟಾಗಿ 3000 ಕೋಟಿಗೂ ಹೆಚ್ಚು ಗಳಿಸಿವೆ. ಇದರೊಂದಿಗೆ ರಶ್ಮಿಕಾ ದಕ್ಷಿಣದಲ್ಲಿ ಮಾತ್ರವಲ್ಲದೆ ಬಾಲಿವುಡ್‌ನಲ್ಲೂ ಅತಿ ಹೆಚ್ಚು ಗಳಿಕೆ ಮಾಡಿದ ನಾಯಕಿ ಬೆಳೆದು ನಿಂತಿದ್ದಾರೆ.

 

44
ರಶ್ಮಿಕಾ ಮಂದಣ್ಣ

ಯಶಸ್ಸಿನ ಸರಮಾಲೆಯ ಮೇಲೆ ಸವಾರಿ ಮಾಡುತ್ತಿರುವ ರಶ್ಮಿಕಾ, ಭವಿಷ್ಯದಲ್ಲಿ ಇನ್ನಷ್ಟುಒಳ್ಳೆ ಪ್ರಾಜೆಕ್ಟ್ ಜೊತೆ ಬರಲಿದ್ದಾರೆ. ಅವರು ಸಲ್ಮಾನ್ ಖಾನ್ ಅವರ ಮುಂಬರುವ ಚಿತ್ರ 'ಸಿಕಂದರ್', ಮಡ್ಡೋಕ್ ಹಾರರ್ ಕಾಮಿಡಿ 'ತಮ', ಪ್ಯಾನ್ ಇಂಡಿಯನ್ ಆಕ್ಷನ್ ಮೂವಿ 'ಕುಬೇರ' ಸಿನಿಮಾಗಳಲ್ಲಿ ಹೀರೋಯಿನ್ ಆಗಿ ನಟಿಸ್ತಾ ಇದ್ದಾರೆ. ದೊಡ್ಡದಾಗಿ ಸಂಭಾವನೆ ಕೂಡ ಪಡೆತಿದ್ದಾರಂತೆ ಬ್ಯೂಟಿ

Read more Photos on
click me!

Recommended Stories