ನಟಿ ಸ್ನೇಹಾಗೆ ಹಲವು ವರ್ಷಗಳಿಂದ ಸಮಸ್ಯೆ ಇದೆ, ಅದಕ್ಕಾಗಿ 3 ಬಾರಿ ಮನೆ ಬದಲಾವಣೆ: ನಟ ಪ್ರಸನ್ನ

Published : Mar 13, 2025, 07:37 PM ISTUpdated : Mar 13, 2025, 07:51 PM IST

ಚಿತ್ರರಂಗದಲ್ಲಿ ಪ್ರೀತಿಸಿ ಮದುವೆಯಾದ ಜೋಡಿಗಳಲ್ಲಿ ಸ್ನೇಹಾ ಮತ್ತು ಪ್ರಸನ್ನ ಒಬ್ಬರು. ನಟಿ ಸ್ನೇಹಾ ಅವರಿಗೆ ಅಪರೂಪದ ಸಮಸ್ಯೆ ಇದೆ ಎಂದು ಅವರೇ ಹೇಳಿಕೊಂಡಿದ್ದಾರೆ. ಅ  ಈ ಜೋಡಿ ಮೇ 11, 2012 ರಂದು ವಿವಾಹವಾದರು. ಅವರು ತಮಿಳು ಚಿತ್ರದ ಸೆಟ್‌ನಲ್ಲಿ ಭೇಟಿಯಾದರು ಮತ್ತು ಚಿತ್ರ ಮುಗಿಯುವ ಮೊದಲೇ ಪ್ರೀತಿಯಲ್ಲಿ ಸಿಲುಕಿದರು. 

PREV
16
ನಟಿ ಸ್ನೇಹಾಗೆ ಹಲವು ವರ್ಷಗಳಿಂದ  ಸಮಸ್ಯೆ  ಇದೆ, ಅದಕ್ಕಾಗಿ 3 ಬಾರಿ ಮನೆ ಬದಲಾವಣೆ: ನಟ ಪ್ರಸನ್ನ

ತಮಿಳು ಚಿತ್ರರಂಗದಲ್ಲಿ ಪ್ರೀತಿಸಿ ಮದುವೆಯಾದ ಜೋಡಿಗಳಲ್ಲಿ ಸ್ನೇಹಾ ಮತ್ತು ಪ್ರಸನ್ನ ಜೋಡಿಯೂ ಒಂದು. ಇಬ್ಬರೂ 2012ರ ಮೇ 11ರಂದು ಪ್ರೀತಿಸಿ ಮದುವೆಯಾದರು. ಅವರ ಮೊದಲ ಚಿತ್ರ ಮಲೆಯಾಳಂನ  ಇಂಗನೆ ಒರು ನಿಲಪಾಕ್ಷಿ, 2000 ನೇ ಇಸವಿಯಲ್ಲಿ ಈ ಚಿತ್ರ ಬಿಡುಗಡೆಯಾಯ್ತು  ಸ್ನೇಹಾ ಅದೇ ವರ್ಷ 'ಎನ್ನವಲೇ' ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪರಿಚಯವಾದರು. ಈ ಚಿತ್ರದ ನಂತರ  ದಕ್ಷಿಣದ ಎಲ್ಲಾ ಭಾಷೆಗಳಲ್ಲಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. 

26

2000 ರಿಂದ 2020 ರವರೆಗೆ ಸತತವಾಗಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಗ್ಲಾಮರಸ್ ಲುಕ್‌ನಲ್ಲಿ ಮಿಂಚುತ್ತಿದ್ದ ನಟಿಯರ ನಡುವೆ ಹೋಮ್ಲಿ ಲುಕ್‌ನಲ್ಲಿ ನಟಿಸಿ ಹೆಸರುವಾಸಿಯಾದ ಕೆಲವೇ ಕೆಲವು ನಟಿಯರಲ್ಲಿ ಇವರೂ ಒಬ್ಬರು. ಹೆಚ್ಚಿನ ಚಿತ್ರಗಳಲ್ಲಿ ಚೂಡಿದಾರ್ ಮತ್ತು ಸೀರೆಯಲ್ಲಿ ನಟಿಸಿದ್ದಾರೆ. 

36

 ಮುಂಚೂಣಿಯ ನಟಿಯಾಗಿದ್ದಾಗಲೇ ನಟ ಪ್ರಸನ್ನ ಅವರನ್ನು ಪ್ರೀತಿಸಿ ಮದುವೆಯಾದ ಸ್ನೇಹಾ, 2020 ರಲ್ಲಿ ಧನುಷ್ ನಟನೆಯ ಪಟಾಸ್ ಚಿತ್ರದಲ್ಲಿ ನಟಿಸಿದರು. ಈ ಚಿತ್ರದಲ್ಲಿ ನಟಿಸುವಾಗಲೇ. ಇವರು ಗರ್ಭಿಣಿಯಾಗಿದ್ದರು, ನಂತರ ಈ ಚಿತ್ರದಲ್ಲಿ ನಟಿಸಿ ಮುಗಿಸಿದ ನಂತರ ಮಗುವನ್ನು ನೋಡಿಕೊಳ್ಳುವುದಕ್ಕಾಗಿ ಸಿನಿಮಾದಿಂದ ದೂರವೇ ಉಳಿದರು.

46

ಕಳೆದ ವರ್ಷ ನಿರ್ದೇಶಕ ವೆಂಕಟ್ ಪ್ರಭು ನಿರ್ದೇಶನದಲ್ಲಿ ಬಿಡುಗಡೆಯಾದ 'ಗೋಟ್' ಚಿತ್ರದಲ್ಲಿ ತಳಪತಿ ವಿಜಯ್ ಜೊಡಿಯಾಗಿ ನಟಿಸಿದ್ದರು. ಅದೇ ರೀತಿ ಕಳೆದ ತಿಂಗಳು ತೆರೆಗೆ ಬಂದ ಡ್ರ್ಯಾಗನ್ ಚಿತ್ರದಲ್ಲೂ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. 

 

56


ಈ ನಡುವೆ ಸ್ನೇಹಾ ತನ್ನ ಗಂಡನೊಂದಿಗೆ ಸೇರಿ ನೀಡಿದ ಹಳೆಯ ಸಂದರ್ಶನದಲ್ಲಿ ತನಗಿರುವ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ಸಿನಿಮಾ ನನಗೆ ಒಸಿಡಿ ಎಂಬ ಸಮಸ್ಯೆ ಇದೆ ಎಂದು ಹೇಳಿದ್ದಾರೆ. ಇದಕ್ಕೆ ಕಮೆಂಟ್ ಮಾಡುವ ರೀತಿಯಲ್ಲಿ ಹೌದು ಮನೆಯನ್ನೇ 3 ಬಾರಿ ಬದಲಾಯಿಸಿದ್ದಾರೆ ಅಂದ್ರೆ ನೋಡಿಕೊಳ್ಳಿ. ಅದೇ ರೀತಿ ಅವರು ಬದಲಾಯಿಸದೆ ಇರುವ ಏಕೈಕ ವಿಷಯವೆಂದರೆ ನಾನು ಎಂದು ತಮಾಷೆಯಾಗಿ ಮಾತನಾಡಿದ್ದಾರೆ.

66

ಇದಲ್ಲದೆ ನನಗೆ ಯಾವಾಗಲೂ ಮನೆ ಸ್ವಚ್ಛವಾಗಿರಬೇಕು. ಅದರಲ್ಲೂ ಅಡುಗೆ ಮನೆ ಕ್ಲೀನ್ ಆಗಿರಬೇಕು ಎಂದು ಬಯಸುತ್ತೇನೆ. ಈ ಒಸಿಡಿ ಸಮಸ್ಯೆ ಅಪರೂಪದ ಸಮಸ್ಯೆಯಾಗಿದ್ದರೂ.  ಇದರಿಂದ ಹೆಚ್ಚು ಭಯಪಡುವ ಅಗತ್ಯವಿಲ್ಲ. ಪ್ರತಿಯೊಂದು ವಿಷಯವೂ ಸ್ವಚ್ಛವಾಗಿರಬೇಕು, ಸರಿಯಾಗಿರಬೇಕು ಎಂದು ಈ ಸಮಸ್ಯೆ ಇರುವವರು ನಿರೀಕ್ಷಿಸುತ್ತಾರೆ. 

click me!

Recommended Stories