IMdBಯ ಅತ್ಯಂತ ಜನಪ್ರಿಯ ಸಿನಿಮಾ: ರಶ್ಮಿಕಾ ಮಂದಣ್ಣರ ಮಿಷನ್‌ ಮಜ್ನು!

Published : Jul 14, 2023, 03:58 PM IST

ಇಂಟರ್ನೆಟ್ ಮೂವಿ ಡೇಟಾಬೇಸ್ (IMdB) ಈ  ವರ್ಷದ ಇದುವರೆಗಿನ ಟಾಪ್ 10 ಭಾರತೀಯ ಚಲನಚಿತ್ರಗಳು ಮತ್ತು ವೆಬ್ ಸರಣಿ ಪಟ್ಟಿಯನ್ನು ಬಹಿರಂಗಪಡಿಸಿದೆ. ಪಠಾಣ್‌ 2023ರ ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರವಾಗಿದೆ.ಈ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ಮಿಷನ್‌ ಮಜ್ನು ಸಹ ಸ್ಥಾನ ಪಡೆದಿದೆ.

PREV
15
IMdBಯ ಅತ್ಯಂತ ಜನಪ್ರಿಯ ಸಿನಿಮಾ: ರಶ್ಮಿಕಾ ಮಂದಣ್ಣರ ಮಿಷನ್‌ ಮಜ್ನು!

2023 ರ ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳ ಪಟ್ಟಿಯಲ್ಲಿ ಶಾರುಖ್‌ ಖಾನ್‌ ಮತ್ತು ದೀಪಿಕಾ ಪಡುಕೊಣೆ ಅಭಿನಯದ ಪಠಾಣ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

25

'IMDb ಪಟ್ಟಿಯಲ್ಲಿ ಪಠಾಣ್ ಮೊದಲ ಸ್ಥಾನದಲ್ಲಿದೆ. ಪಠಾಣ್ ಪಡೆದ ಪ್ರೀತಿಯ ಪ್ರಮಾಣ ನೋಡಲು ಅದ್ಭುತವಾಗಿದೆ  ಮತ್ತು ಯಾವುದೇ ಕೆಲಸವು ಮೊದಲ ಸ್ಥಾನ ಪಡೆದಾಗ, ನಂತರ ಮಾಡಬೇಕಾದ ವಿಷಯವೆಂದರೆ ಈ ಮನ್ನಣೆಗಾಗಿ ಎಲ್ಲರಿಗೂ ಧನ್ಯವಾದ ಹೇಳಲು ಮುಂದಿನದರಲ್ಲಿ ದುಪ್ಪಟ್ಟು ಕಷ್ಟಪಟ್ಟು ಕೆಲಸ ಮಾಡುವುದು. ನಾನು ಪಠಾಣ್ ತಂಡಕ್ಕೆ ಮತ್ತು ಇದನ್ನು ಸಾಧ್ಯವಾಗಿಸಿದ ಜಗತ್ತಿನಾದ್ಯಂತದ ಪ್ರೇಕ್ಷಕರಿಗೆ ಧನ್ಯವಾದ ಹೇಳಲು ಬಯಸುತ್ತೇನೆ' ಎಂದು ಶಾರುಖ್ ಖಾನ್‌ ಸಂತಸ ವ್ಯಕ್ತಪಡಿಸಿದ್ದಾರೆ.

35

ಸಲ್ಮಾನ್ ಖಾನ್ ಅವರ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಎರಡನೇ ಸ್ಥಾನದಲ್ಲಿದೆ,  ಅದಾ ಶರ್ಮಾ ಅಭಿನಯದ 'ದಿ ಕೇರಳ ಸ್ಟೋರಿ' ಮೂರನೇ ಸ್ಥಾನದಲ್ಲಿದರೆ ‘ತು ಜೂಥಿ ಮೈನ್ ಮಕ್ಕರ್’ ನಾಲ್ಕನೇ ಸ್ಥಾನ ಪಡೆದಿದೆ.

45

ರಶ್ಮಿಕಾ ಮಂದಣ್ಣ ಅಭಿನಯದ  ಬಾಲಿವುಡ್‌ ಸಿನಿಮಾ ‘ಮಿಷನ್ ಮಜ್ನು’ ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ರಶ್ಮಿಕಾ ಈ ಸಿನಿಮಾದಲ್ಲಿ ಸಿದ್ಧಾರ್ಥ್‌ ಮಲ್ಹೋತ್ರ ಅವರೊಂದಿಗೆ ಕೆಲಸ ಮಾಡಿದ್ದಾರೆ

55

ಅದರ ನಂತರದ ಸ್ಥಾನದಲ್ಲಿ ‘ಚೋರ್ ನಿಕಲ್ ಕೆ ಭಾಗಾ’ 'ಬ್ಲಡಿ ಡ್ಯಾಡಿ', 'ಸಿರ್ಫ್ ಏಕ್ ಬಂದಾ ಕಾಫಿ ಹೈ', 'ವರಿಸು' ಮತ್ತು 'ಪೊನ್ನಿಯಿನ್ ಸೆಲ್ವನ್: ಭಾಗ ಎರಡು ಚಿತ್ರಗಳಿವೆ. 

Read more Photos on
click me!

Recommended Stories