Rashmika Mandanna Trolled: ಅಂಜನಿಪುತ್ರನಿಗೆ ವಿಶ್ ಮಾಡದ ರಶ್ಮಿಕಾ ಪುಲ್ ಟ್ರೋಲ್!

Published : Mar 18, 2022, 10:55 PM ISTUpdated : Mar 18, 2022, 11:00 PM IST

ಬೆಂಗಳೂರು (ಮಾ. 18)  ಸೋಶಿಯಲ್ ಮೀಡಿಯಾದಲ್ಲಿ (Social Media) ಅತಿ ಹೆಚ್ಚು  ಟ್ರೋಲ್ ಗೆ ಒಳಗಾಗುವ ರಶ್ಮಿಕಾ ಮಂದಣ್ಣ ((Rashmika Mandanna)) ಮತ್ತೊಮ್ಮೆ ಟ್ರೋಲ್ ಆಗಿದ್ದಾರೆ.  ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಜನ್ಮದಿನಕ್ಕೆ ವಿಶ್ ಮಾಡದ ರಶ್ಮಿಕಾ ಮೇಲೆ ಅಭಿಮಾನಿಗಳು ಮುನಿಸಿಕೊಂಡಿದ್ದಾರೆ.

PREV
16
Rashmika Mandanna Trolled: ಅಂಜನಿಪುತ್ರನಿಗೆ ವಿಶ್ ಮಾಡದ ರಶ್ಮಿಕಾ ಪುಲ್ ಟ್ರೋಲ್!

ರಶ್ಮಿಕಾ ಮಂದಣ್ಣ ಮತ್ತು ಪುನೀತ್ ರಾಜ್ ಕುಮಾರ್ ಅಂಜನಿ ಪುತ್ರ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ತೆರೆ ಶೇರ್ ಮಾಡಿದ್ದರು.

26

ಕನ್ನಡತಿ ರಶ್ಮಿಕಾ ಮಂದಣ್ಣ ಪರ ಭಾಷೆಯಲ್ಲಿ ದೊಡ್ಡ ಹೆಸರು ಸಂಪಾದನೆ ಮಾಡಿಕೊಂಡಿದ್ದಾರೆ. ರಶ್ಮಿಕಾ ವಿರುದ್ಧ ಆಗಾಗ ಸೋಶಿಯಲ್ ಮೀಡಿಯಾ ತಗಾದೆ ತೆಗೆಯುತ್ತಲೇ ಇರುತ್ತದೆ.

ನ್ಯಾಶನಲ್ ಕ್ರಶ್ ರಶ್ಮಿಕಾ ಡ್ರೆಸ್ ಡಿಸೈನರ್ ಯಾರು?

36

ಪುನೀತ್ ರಾಜ್ ಕುಮಾರ್ ಜನ್ಮದಿನದ ಸಂದರ್ಭ ಜೇಮ್ಸ್ ಬಿಡುಗಡೆಯಾಗಿತ್ತು. ಜೇಮ್ಸ್ ಚಿತ್ರ ಅಭಿಮಾನಿಗಳ ಮೆಚ್ಚುಗೆ ಪಡೆದುಕೊಂಡಿದ್ದು ಮುನ್ನುಗ್ಗುತ್ತಿದೆ.

46

ಬಾಲಿವುಡ್, ಟಾಲಿವುಡ್ ಮತ್ತು ಸ್ಯಾಂಡಲ್ ವುಡ್ ದಿಗ್ಗಜರು ಪುನೀತ್ ಜನ್ಮದಿನ ಸಂದರ್ಭ ಅವರ ನೆನಪು ಮಾಡಿಕೊಂಡಿದ್ದರು. ಜೇಮ್ಸ್ ಚಿತ್ರಕ್ಕೂ ಶುಭ ಹಾರೈಸಿದ್ದರು.

56

ಕಾರ್ಯಕ್ರಮವೊಂದರಲ್ಲಿ ಸಾಲು ಮರದ ತಿಮ್ಮಕ್ಕ ಅವರ ಬಗ್ಗೆ ಮಾತನಾಡಲೂ ರಶ್ಮಿಕಾ ತಡಬಡಾಯಿಸಿದ್ದರು.  ಆ ವೇಳೆ  ತಮಿಳು ನಟ  ಸಾಲು ಮರದ  ತಿಮ್ಮಕ್ಕನ ಸಾಧನೆ ಕೊಂಡಾಡಿ ಎಲ್ಲರಿಗೂ ತಿಳಿಸಿದ್ದರು.

66
Rashmika Mandanna

ನಮ್ಮ ಕನ್ನಡ ನಟ ನಟಿ ಮಣಿಯರು ಹಾಗೂ ಪರ ಭಾಷೆ ನಟ ನಟಿಯರು ನಮ್ಮ ಅಪ್ಪು ಹುಟ್ಟಿದ ಹಬ್ಬಕ್ಕೆ ವಿಶ್ ಮಾಡಿದ್ದಾರೆ. ಜೇಮ್ಸ್ ಗೆ ಶುಭ ಕೋರಿದ್ದಾರೆ. ಆದ್ರೆ ಕೆಲವು ನಿಯತ್ತಿರೋ .... ಮಾತ್ರ ಅವರ ಜತೆ ನಟಿಸಿ ಕೂಡ ಅವರ ಬಗ್ಗೆ ಒಂದು ಸ್ಟೇಟಸ್ ಕೂಡ ಹಾಕಿಲ್ಲ.. ಯಾರೋ ಅದು ರಶ್ಮಿಕಾ ಅಂದಿದ್ದು! ಹೀಗೆ ವ್ಯಂಗ್ಯವಾಡಿ ಆಡಿಕೊಂಡಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories