ರಶ್ಮಿಕಾ ಮಂದಣ್ಣ ಕೈಯಿಂದ ಫೋನ್ ಕಿತ್ತುಕೊಂಡು ಅಭಿಮಾನಿಯ ಅಸಭ್ಯ ವರ್ತನೆ, ವಿಡಿಯೋ ವೈರಲ್‌!

Published : Jul 11, 2023, 05:08 PM IST

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿರುತ್ತಾರೆ. ರಶ್ಮಿಕಾರ ವೀಡಿಯೋ ವೈರಲ್‌ ಆಗಿದೆ. Instagram  ವೈರಲ್ ವೀಡಿಯೊದಲ್ಲಿ, ಮುಂಬೈನಲ್ಲಿ  ತನ್ನ ವ್ಯಾನಿಟಿ ವ್ಯಾನ್‌ನ ಹೊರಗೆ ತನ್ನ ಅಭಿಮಾನಿಗಳೊಂದಿಗೆ ಫೋಟೋ ಸೆಷನ್ ಮಾಡುತ್ತಿರುವಾಗ ರಶ್ಮಿಕಾ ಮಂದಣ್ಣ ಅವರ ಕೈಯಿಂದ ಅಭಿಮಾನಿಯೊಬ್ಬರು ಅವರ ಫೋನ್ ಕಸಿದುಕೊಂಡಿದ್ದಾರೆ. ಅಭಿಮಾನಿಯ ಒರಟು ವರ್ತನೆ ವಿಡಿಯೋ ವೈರಲ್ ಆಗಿದೆ. 

PREV
18
ರಶ್ಮಿಕಾ ಮಂದಣ್ಣ ಕೈಯಿಂದ ಫೋನ್ ಕಿತ್ತುಕೊಂಡು ಅಭಿಮಾನಿಯ  ಅಸಭ್ಯ ವರ್ತನೆ,  ವಿಡಿಯೋ ವೈರಲ್‌!

ನಟಿ ಸೋಮವಾರ ಮುಂಬೈನಲ್ಲಿ ಕೆಲವು ಕೆಲಸಗಳನ್ನು ಪೂರ್ಣಗೊಳಿಸುತ್ತಿದ್ದಾಗ ತನ್ನ ವ್ಯಾನಿಟಿ ವ್ಯಾನ್‌ನ ಹೊರಗೆ ಕೆಲವು ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ದರ್ಶನ ಪಡೆಯಲು ಕಾತುರದಿಂದ ಕಾಯುತ್ತಿದ್ದರು. 

28

ಅವರೊಂದಿಗೆ ನಟಿ ಫೋಟೋ ತೆಗೆಸಿಕೊಳ್ಳಲು ಪೋಸ್ ನೀಡುತ್ತಿದ್ದಂತೆ ಆಕೆಯ ಅಭಿಮಾನಿಯೊಬ್ಬರು ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ.

38

 ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೊದಲ್ಲಿ, ಅಪರಿಚಿತ ಅಭಿಮಾನಿ ಆಕೆಯ ಕೈಯಿಂದ ಅವರ ಫೋನ್ ಕಸಿದುಕೊಂಡಿರುವುದು ಕಂಡುಬಂದಿದೆ.

 

48

ಅಭಿಮಾನಿಗಳಿಗೆ ತನ್ನೊಂದಿಗೆ ಫೋಟೊ ತೆಗೆದುಕೊಳ್ಳಲು ಅವಕಾಶ ಕಲ್ಪಿಸುತ್ತಿದ್ದರು. ತನ್ನ ಅಭಿಮಾನಿಗಳೊಂದಿಗೆ ಫೋಟೋ ಶೂಟ್ ಮಾಡಿದ ನಂತರ ತಮ್ಮ ಪಾಡಿಗೆ ವ್ಯಾನಿಟಿ ವ್ಯಾನ್‌ಗೆ ಹಿಂದಿರುಗಿದರು..

58

ನಂತರ  ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರಶ್ಮಿಕಾ ಅವರನ್ನು ನಿನ್ನೆ ರಾತ್ರಿ, ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕೂಡ ಸ್ಪಾಟ್‌ ಮಾಡಲಾಯಿತು. ಕೆಲಸ ಮುಗಿಸಿ ರಶ್ಮಿಕಾ ಮನೆಗೆ ಮರಳಿದ್ದಾರೆ.

68

ರಶ್ಮಿಕಾ ಇತ್ತೀಚೆಗೆ ಪುಷ್ಪಾ 2 ನ  ಶೂಟಿಂಗ್‌ ಪ್ರಾರಂಭಿಸಿದ್ದಾರೆ. ಅಲ್ಲು ಅರ್ಜುನ್ ನಾಯಕತ್ವದ ಚಿತ್ರದಲ್ಲಿ ಶ್ರೀವಲ್ಲಿ ಪಾತ್ರವನ್ನು ಪುನರಾವರ್ತಿಸಲಿದ್ದಾರೆ. ಈ ಚಿತ್ರದಲ್ಲಿ ಫಹಾದ್ ಫಾಸಿಲ್ ಕೂಡ ನಟಿಸಿದ್ದಾರೆ.ಜೊತೆಗೆ ಸಾಯಿ ಪಲ್ಲವಿ ನಟಿಸಲಿದ್ದಾರೆ ಎಂದು ವದಂತಿಗಳಿವೆ. 

78

 ಇದಲ್ಲದೆ, ರಶ್ಮಿಕಾ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಆನಿಮಲ್‌ ಸಿನಿಮಾವನ್ನು ಸಹ ಹೊಂದಿದ್ದಾರೆ. ಚಿತ್ರದಲ್ಲಿ ರಣಬೀರ್ ಕಪೂರ್ ನಾಯಕನಾಗಿ ನಟಿಸಿದ್ದಾರೆ.  

88

ರಶ್ಮಿಕಾ ಅವರು ಶಾಂತರುಬನ್ ನಿರ್ದೇಶನದ 'ರೇನ್ಬೋ' ಚಿತ್ರದಲ್ಲಿ 'ಶಾಕುಂತಲಂ' ಖ್ಯಾತಿಯ ದೇವ್ ಮೋಹನ್ ಮತ್ತು ರಾವ್ ರಮೇಶ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

Read more Photos on
click me!

Recommended Stories