ಪಾಕ್ ಕ್ರಿಕೆಟಿಗ ಅಬ್ದುಲ್ ರಜಾಕ್ ವರಿಸಿದ ತಮನ್ನಾ ಭಾಟಿಯಾ!? ಏನೀ ಸುದ್ದಿ ಸತ್ಯಾಸತ್ಯತೆ?

Published : Jul 07, 2023, 05:58 PM IST

ಸೌತ್‌ ತಾರೆ ತಮನ್ನಾ ಭಾಟಿಯಾ (Tamannaah Bhatia) ಯಾವಾಗಲೂ ತನ್ನ ನಟನೆ ಮತ್ತು ಸೌಂದರ್ಯಕ್ಕಾಗಿ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಅವರು ನೆಟ್‌ಫ್ಲಿಕ್ಸ್‌ನ 'ಲಸ್ಟ್ ಸ್ಟೋರೀಸ್ 2' ನಲ್ಲಿ ನಟಿಸಿದ್ದಾರೆ. ನಟ ವಿಜಯ್ ವರ್ಮಾ (Viajy Varma) ಅವರೊಂದಿಗಿನ ಸಂಬಂಧದ ಚರ್ಚೆಯೂ ಸಾಕಷ್ಟು ಸುದ್ದಿಯಾಗಿದೆ. ಇದರ ನಡುವೆ ಈಗ ಹೊಸ ಕಥೆಯೂ ಮುನ್ನೆಲೆಗೆ ಬರುತ್ತಿದೆ. ತಮನ್ನಾ ಭಾಟಿಯಾ ಪಾಕಿಸ್ತಾನದ ಆಲ್‌ರೌಂಡರ್ ಅಬ್ದುಲ್ ರಜಾಕ್ (Abdul Razzaq Rumor) ಅವರನ್ನು ವಿವಾಹವಾಗಿದ್ದರು ಎಂದು ಚರ್ಚೆಯಾಗುತ್ತಿದೆ. ಅಷ್ಷಕ್ಕೂ  ಈ ವದಂತಿ ಹೇಗೆ ಪ್ರಾರಂಭವಾಯಿತು? ಇದು ದತ್ಯನಾ ಅಥವಾ ಸುಳ್ಳಾ?

PREV
17
ಪಾಕ್ ಕ್ರಿಕೆಟಿಗ ಅಬ್ದುಲ್ ರಜಾಕ್ ವರಿಸಿದ ತಮನ್ನಾ ಭಾಟಿಯಾ!? ಏನೀ ಸುದ್ದಿ ಸತ್ಯಾಸತ್ಯತೆ?

ನಟಿ ತಮನ್ನಾ ಭಾಟಿಯಾ ಅವರ ಹೆಸರು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಜೊತೆ ತಳುಕು ಹಾಕಿಕೊಂಡಿತ್ತು. ತಮನ್ನಾ ಅಬ್ದುಲ್ ರಜಾಕ್ ಜೊತೆ ಮದುವೆಯಾಗಿದ್ದಾರೆ ಎಂದು ಚರ್ಚೆಯಾಗಿತ್ತು. ಈ ವದಂತಿ ಏಕೆ ಮತ್ತು ಹೇಗೆ ಹುಟ್ಟಿಕೊಂಡಿತು? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. 

27

ಇದು ಸುಮಾರು 2017 ರ ವರ್ಷದಲ್ಲಿ ತಮನ್ನಾ ಮತ್ತು ರಜಾಕ್ ಇಬ್ಬರೂ ದುಬೈನಲ್ಲಿ ಆಭರಣ ಅಂಗಡಿಯೊಂದರ ಪ್ರಾರಂಭಕ್ಕೆ ಹೋಗಿದ್ದರು. ಅಲ್ಲಿ ಇಬ್ಬರು ಭೇಟಿಯಾದರು. ಇಬ್ಬರು ಒಟ್ಟಿಗೆ ಫೋಟೋ ತೆಗೆಸಿಕೊಂಡ್ಡಿದ್ದು, ವೈರಲ್ ಆಗಿದ್ದವು. 

37

ಇದಾದ ನಂತರ ಅವರಿಬ್ಬರ ಸಂಬಂಧದ ಸುದ್ದಿ ಮಾಧ್ಯಮಗಳಲ್ಲಿ ವೈರಲ್ ಆಗತೊಡಗಿತು. ತಮನ್ನಾ ಮತ್ತು ರಜಾಕ್ ದುಬೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ವದಂತಿಗಳು ಕೂಡ ಇದ್ದವು. ಆದರೂ ತಮನ್ನಾ ವರದಿಗಳನ್ನು ತಿರಸ್ಕರಿಸಿದ್ದರು.

47

 2020 ರಲ್ಲಿ, ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿವೆ. ಇತ್ತೀಚೆಗೆ ಬಿಡುಗಡೆಯಾದ ತಮನ್ನಾ ಅವರ ಹೊಸ ಚಿತ್ರ ಲಸ್ಟ್ ಸ್ಟೋರೀಸ್ 2 ಜೊತೆಗೆ, ಈ ಫೋಟೋಗಳು ಮತ್ತೆ ವೈರಲ್ ಆಗುತ್ತಿವೆ.
 

57

ಈ ಬಗ್ಗೆ ತಮನ್ನಾ ಅವರನ್ನು ಪ್ರಶ್ನಿಸಿದಾಗ ಅವರು, ಪಾಕಿಸ್ತಾನಿ ಕ್ರಿಕೆಟಿಗನನ್ನು ಮದುವೆಯಾಗುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ರಜಾಕ್ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳ ತಂದೆಯಾಗಿದ್ದಾರೆ. ಅವರುನು ತನ್ನ ಜೀವನದಲ್ಲಿ ಸಂತೋಷವಾಗಿರುತ್ತಾರೆ. ಇವೆಲ್ಲವೂ ಖಾಲಿ ವದಂತಿಗಳು ಮತ್ತು ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ತಮನ್ನಾ ಹೇಳಿದ್ದಾರೆ.

67

ಇದೇ ರೀತಿ ತಮನ್ನಾರ  ಮದುವೆಯ ಚರ್ಚೆಯ ಸುದ್ದಿ ಅನೇಕ ಬಾರಿ ಬೆಳಕಿಗೆ ಬಂದಿದೆ. ಆಕೆಯ ಹೆಸರು ಅಮೆರಿಕದಲ್ಲಿ ವಾಸಿಸುವ ವೈದ್ಯರೊಂದಿಗೆ ಸಹ ಲಿಂಕ್‌ ಆಗಿತ್ತು.

77

ಗಂಡ ಶಾಪಿಂಗ್ ಮಾಡುವಾಗ ಸಮಯದಲ್ಲಿ ನಾನು ಸಂತೋಷದಿಂದ ಒಂಟಿಯಾಗಿದ್ದೇನೆ ಮತ್ತು ನನ್ನ ಪೋಷಕರು ವರನನ್ನು ಹುಡುಕುತ್ತಿಲ್ಲ ಎಂದು ನಟಿ  ಸ್ಪಷ್ಟಪಡಿಸಿದ್ದರು.

Read more Photos on
click me!

Recommended Stories