ಮಾನಸಿಕ ಆರೋಗ್ಯದ ಸಮಸ್ಯೆ ಇದೆ: ಆಮೀರ್‌ ಪುತ್ರಿ ಇರಾ ಖಾನ್‌ ಹೇಳಿದ್ಯಾಕೆ?

First Published | Jul 10, 2023, 7:04 PM IST

ಸಿನಿಮಾ ಮತ್ತು  ಪ್ರಚಾರದ ಪ್ರಪಂಚವದಿಂದ ದೂರವಿರುವ  ಕೆಲವೇ ಸ್ಟಾರ್‌ ಮಕ್ಕಳಲ್ಲಿ ಇರಾ ಖಾನ್ (Ira Khan) ಒಬ್ಬರು. ಅವರು ಬಾಲಿವುಡ್ ನಟ ಆಮೀರ್ ಖಾನ್  (Aamir Khan ) ಮತ್ತು ಅವರ ಮಾಜಿ ಪತ್ನಿ ರೀನಾ ದತ್ತಾ ಅವರ ಪುತ್ರಿ. ಮತ್ತೊಂದೆಡೆ, ಇರಾ ಖಾನ್ ತನ್ನ ಪ್ರಾಮಾಣಿಕತೆ ಮತ್ತು ಬೋಲ್ಡ್‌ ವರ್ತನೆಯಿಂದ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ಧರಾಗಿದ್ದಾರೆ. ಈಗ ಮತ್ತೆ ಇರಾ ಸುದ್ದಿಯಲ್ಲಿದ್ದಾರೆ ಏಕೆಂದರೆ ಅವರು ಅಗಸ್ತು ಫೌಂಡೇಶನ್ ಅನ್ನು ಸ್ಥಾಪಿಸಿದ್ದು, ವಿವಿಧ ಮಾನಸಿಕ ಆರೋಗ್ಯದಿಂದ ಬಳಲುತ್ತಿರುವವರನ್ನು ಬೆಂಬಲಿಸಲು ಪ್ರಯತ್ನಿಸುವ ಲಾಭರಹಿತ ಸಂಸ್ಥೆ. ಈ ಸಮಯದಲ್ಲಿ ಇರಾ  ಖಿನ್ನತೆಯೊಂದಿಗಿನ ತಮ್ಮ ಹೋರಾಟದ ಬಗ್ಗೆ ತೆರೆದುಕೊಂಡಿದ್ದಾರೆ. 

ಐದು ವರ್ಷಗಳ ಹಿಂದೆ ಕ್ಲಿನಿಕಲ್ ಖಿನ್ನತೆಯನ್ನು ಗುರುತಿಸಿಕೊ0ಂಡ  ಇರಾ ಇತ್ತೀಚೆಗೆ ಟೈಮ್ಸ್ ಆಫ್ ಇಂಡಿಯಾದೊಂದಿಗೆ ಈ ಸ್ಥಿತಿಯೊಂದಿಗಿನ ತನ್ನ ಸುದೀರ್ಘ ಹೋರಾಟ ಮತ್ತು ತನ್ನ ಹೆತ್ತವರಾದ  ಆಮೀರ್ ಖಾನ್ ಮತ್ತು ರೀನಾ ದತ್ತಾ ಅವರಿಂದ ಪಡೆದ ಸಹಾಯದ ಬಗ್ಗೆ ಮಾತನಾಡಿದ್ದಾರೆ. 

ಇತ್ತೀಚಿನ ಸಂದರ್ಶನವೊಂದರಲ್ಲಿ, ನಟ ಆಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ಅವರು ಖಿನ್ನತೆಯೊಂದಿಗೆ ತಮ್ಮ ದೀರ್ಘಕಾಲದ ಹೋರಾಟದ ಬಗ್ಗೆ ಚರ್ಚಿಸಿದರು ಮತ್ತು ಕುಟುಂಬದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳಿವೆ ಎಂದು ಹೇಳಿದರು.

Tap to resize

Aamir khan celebrate christmas with daughter ira khan

ಇರಾ ಖಾನ್ ಖಿನ್ನತೆಯೊಂದಿಗಿನ ತನ್ನ ಅನುಭವಗಳ ಪರಿಣಾಮವಾಗಿ ತನ್ನ ನಡವಳಿಕೆಯು ಹೇಗೆ ಬದಲಾಯಿತು ಎಂಬುದನ್ನು ವಿವರಿಸಿದರು. ಅವರು ಆಗಾಗ್ಗೆ ಅಳುತ್ತಿದ್ದರು ಮತ್ತು ದಿನಗಟ್ಟಲೆ ಉಪವಾಸ ಇರುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. 

'ನಾನು ಜೀವಂತವಾಗಿರಲು ಬಯಸುವುದಿಲ್ಲ ಎಂಬ ವಿಷಯವನ್ನು ನನ್ನ ತಾಯಿ ಕಂಡುಕೊಂಡರು.ದಿನದಲ್ಲಿ ಕಡಿಮೆ ಅವಧಿ ಜೀವಂತ ಇರಬಹುದು ಎಂದು ನಾನು ದಿನದ ಹೆಚ್ಚು ಕಾಲ ಮಲಗುತ್ತಿದ್ದೆ' ಎಂದು ಇರಾ ಖಾನ್‌ TOI ಜೊತೆಗಿನ ತನ್ನ ಸಂಭಾಷಣೆಯಲ್ಲಿ ಒಪ್ಪಿಕೊಂಡಿದ್ದಾರೆ.

'ಪ್ರತಿ 8-10 ತಿಂಗಳಿಗೊಮ್ಮೆ ನಾನು ದೊಡ್ಡ ಡಿಪ್ರೆಷನ್‌ ಎದುರಿಸುತ್ತೇನೆ. ಇದು ಭಾಗಶಃ ಆನುವಂಶಿಕ, ಭಾಗಶಃ ಮಾನಸಿಕ ಮತ್ತು ಭಾಗಶಃ ಸಾಮಾಜಿಕ. ಅದನ್ನು ತಿಳಿದುಕೊಳ್ಳಲು ನನಗೆ ಸ್ವಲ್ಪ ಸಮಯ ಹಿಡಿಯಿತು. ಆದರೆ ನನ್ನ ಕುಟುಂಬದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳಿವೆ. ನಾನು ಆರೋಗ್ಯಕರ ಆಯ್ಕೆಗಳನ್ನು ಮಾಡಲಿಲ್ಲ ಮತ್ತು ನಾನು ವ್ಯವಸ್ಥಿತವಾಗಿ ಖಿನ್ನತೆಗೆ ಒಳಗಾದೆ' ಎಂದು ಇರಾ ಬಹಿರಂಗ ಪಡಿಸಿದ್ದಾರೆ. 

ಅಗಸ್ತು ಫೌಂಡೇಶನ್‌ನ ಸಲಹಾ ಮಂಡಳಿಯಲ್ಲಿ ಆಮೀರ್ ಮತ್ತು ರೀನಾ ಸದಸ್ಯತ್ವವನ್ನು ಇರಾ ಖಾನ್ ಬಹಿರಂಗಪಡಿಸಿದ್ದಾರೆ. ಇರಾ ಅವರು  NGO ಅನ್ನು ಪ್ರಾರಂಭಿಸಲು ತನ್ನ ತಂದೆ ತನಗೆ ಸಹಾಯ ಮಾಡಿದರು ಎಂದು ಹೇಳಿಕೊಂಡಿದ್ದಾರೆ.

Latest Videos

click me!