ಪ್ರತಿಯೊಬ್ಬರ ಲೈಫ್‌ನಲ್ಲೂ ವಿಜಯ್ ದೇವರಕೊಂಡ ಅವರಂತಹ ವ್ಯಕ್ತಿ ಇರುವುದು ಒಂದು ವರ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. 'ದಿ ಗರ್ಲ್‌ಫ್ರೆಂಡ್' ಸಕ್ಸಸ್ ಇವೆಂಟ್‌ನಲ್ಲಿ ವಿಜಯ್ ಆಕೆಯ ಕೈಗೆ ಕಿಸ್ ಮಾಡಿದ್ದು ಹೈಲೈಟ್ ಆಗಿತ್ತು.
ರಶ್ಮಿಕಾ ಮಂದಣ್ಣ ನಟನೆಯ 'ದಿ ಗರ್ಲ್‌ಫ್ರೆಂಡ್' ಚಿತ್ರದ ಸಕ್ಸಸ್ ಇವೆಂಟ್ ಹೈದರಾಬಾದ್‌ನಲ್ಲಿ ನಡೆಯಿತು. ಇದಕ್ಕೆ ವಿಜಯ್ ದೇವರಕೊಂಡ ಅತಿಥಿಯಾಗಿ ಬಂದಿದ್ದರು. ಈ ವೇಳೆ ರಶ್ಮಿಕಾ ಭಾವುಕರಾದರು.
25
ನನ್ನನ್ನು ಪ್ರೋತ್ಸಾಹಿಸುತ್ತಿದ್ದಾರೆ
ವಿಜಯ್ ದೇವರಕೊಂಡ ಬಗ್ಗೆ ಮಾತನಾಡಿದ ರಶ್ಮಿಕಾ, ನಮ್ಮ ಜೀವನದಲ್ಲಿ ಅವರಂತಹ ವ್ಯಕ್ತಿ ಇರುವುದು ಒಂದು ವರ ಎಂದರು. ವಿಜಯ್ ಮೊದಲಿನಿಂದಲೂ ನನ್ನನ್ನು ಪ್ರೋತ್ಸಾಹಿಸುತ್ತಿದ್ದಾರೆ, ಈ ಸಿನಿಮಾದ ಜರ್ನಿಯಲ್ಲೂ ಜೊತೆಗಿದ್ದರು ಎಂದರು.
35
ನನಗೆ ಸಿಕ್ಕ ದೊಡ್ಡ ಪ್ರಶಸ್ತಿ
ಈ ಕಥೆ ಕೇಳಿದ ತಕ್ಷಣ ಮಾಡಲೇಬೇಕು ಅನಿಸಿತು. ಯಾಕಂದ್ರೆ ಪಾತ್ರದ ಜೀವನದ ಕೆಲವು ಘಟನೆಗಳು ನನಗೂ ಎದುರಾಗಿದ್ದವು. ಪ್ರೇಕ್ಷಕರು ಈ ಚಿತ್ರವನ್ನು ಇಷ್ಟಪಡುತ್ತಿರುವುದೇ ನನಗೆ ಸಿಕ್ಕ ದೊಡ್ಡ ಪ್ರಶಸ್ತಿ ಎಂದು ರಶ್ಮಿಕಾ ಹೇಳಿದರು.
ಈ ಸಿನಿಮಾ ನೋಡಿದಾಗ ನನಗೆ ತುಂಬಾ ಬೇಜಾರಾಯ್ತು. ನಮ್ಮ ಸಂಗಾತಿಯನ್ನು ಕಂಟ್ರೋಲ್ ಮಾಡಬಾರದು, ಅವರ ಕನಸುಗಳಿಗೆ ರಕ್ಷಣೆಯಾಗಿರಬೇಕು. ಜೀವನ ತುಂಬಾ ಸರಳವಾಗಿ, ಖುಷಿಯಾಗಿರಬೇಕು ಎಂದು ವಿಜಯ್ ದೇವರಕೊಂಡ ಹೇಳಿದರು.
55
ಕೈಗೆ ಕಿಸ್ ಮಾಡಿದ್ದು ಹೈಲೈಟ್
ರಶ್ಮಿಕಾ ಬಗ್ಗೆ ಮಾತನಾಡಿದ ವಿಜಯ್, 'ಗೀತ ಗೋವಿಂದಂ'ನಿಂದ ಆಕೆಯ ಜರ್ನಿ ನೋಡುತ್ತಿದ್ದೇನೆ, ಹೆಮ್ಮೆ ಇದೆ. ಯಾರು ಏನೇ ಅಂದರೂ ತಲೆಕೆಡಿಸಿಕೊಳ್ಳದೆ ಬೆಳೆಯುತ್ತಿದ್ದಾಳೆ. ಈ ಇವೆಂಟ್‌ನಲ್ಲಿ ವಿಜಯ್ ರಶ್ಮಿಕಾ ಕೈಗೆ ಕಿಸ್ ಮಾಡಿದ್ದು ಹೈಲೈಟ್ ಆಯ್ತು.