ರಶ್ಮಿಕಾ ಮಂದಣ್ಣ ಹಾಗೂ ಸೌತ್‌ನ ನಟಿಯರ ವಿಥೌಟ್‌ ಮೇಕಪ್‌ ಫೋಟೋಸ್!

First Published | May 11, 2021, 6:54 PM IST

ತೆರೆ ಮೇಲೆ ಕಾಣುವ ನಮ್ಮ ನೆಚ್ಚಿನ ನಟಿಯರ ಸೌಂದರ್ಯವನ್ನು ನಾವು ಇಷ್ಷಪಡುತ್ತೇವೆ. ಆದರೆ ಅವರು ಮೇಕಪ್‌ ಇಲ್ಲದೇ ಅಫ್‌ಸ್ಕ್ರೀನ್‌ನಲ್ಲಿ ಹೇಗೆ ಕಾಣುತ್ತಾರೆ ಅನ್ನುವುದು ಎಲ್ಲರಿಗೂ ಇರುವ ಸಹಜ ಕುತೂಹಲ. ಹಾಗೇ ಯಾವುದೇ ಮೇಕಪ್‌ ಇಲ್ಲದೆಯೂ ಸ್ಟಾರ್‌ಗಳು ಕಾಣಿಸಿಕೊಳ್ಳುವುದು ತುಂಬಾ ಅಪರೂಪ. ಸೌತ್‌ನ ಟಾಪ್‌ ನಟಿಯರ ವಿಥೌಟ್‌ ಮೇಕಪ್‌ ಫೋಟೋಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ. ಹೇಗೆ ಕಾಣುತ್ತಾರೆ ನೋಡಿ.ನಿಮ್ಮ ಫೇವರೇಟ್‌ ಹೀರೊಯಿನ್‌ಗಳು.

ನಯನತಾರಾ: ಸೌತ್‌ನ ಲೇಡಿ ಸೂಪರ್‌ ಸ್ಟಾರ್‌ ನಯನಾತಾರಾ ಮೂಲ ಕೇರಳ. ನಟಿ ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಮೇಕಪ್‌ ಇಲ್ಲದ ನಟಿಯ ಫೋಟೋ ಫ್ಯಾನ್ಸ್‌ಗೆ ಆಘಾತವನ್ನುಂಟು ಮಾಡಿದೆ.ನಯನತಾರಾ ಈ ಪೋಟೋ ಇಂಟರ್‌ನೆಟ್‌ನಲ್ಲಿ ಸಾಕಷ್ಟು ಸದ್ದು ಮಾಡಿತ್ತು.
ರಶ್ಮಿಕಾ ಮಂದಣ್ಣ:ಸ್ಯಾಂಡಲ್ ವುಡ್‌ನ ಫೇಮಸ್‌ ನಟಿ ರಶ್ಮಿಕಾ ಮಂದಣ್ಣ ಈಗ ತೆಲುಗು ಸಿನಿಮಾಗಳಲ್ಲಿ ಬ್ಯುಸಿ.ನಟಿಯ ಫೋಟೋ ಸಖತ್‌ ವೈರಲ್‌ ಆಗಿತ್ತು. ಈ ಫೋಟೋದಲ್ಲಿ ರಶ್ಮಿಕಾ ಚಿಕ್ಕ ಹುಡುಗಿಯ ಹಾಗೆ ಕಾಣುತ್ತಿದ್ದಾರೆ.
Tap to resize

ಸಮಂತಾ:ದಕ್ಷಿಣ ಭಾರತದ ಫೇಮಸ್‌ ಸ್ಟಾರ್ ಸಮಂತಾ. ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಈ ನಟಿಯ ನೋ ಮೇಕಪ್‌ ಫೋಟೋದ್ಲಲೂ ಕೂಡ ಕ್ಯೂಟ್‌ ಅಂಡ್‌ ಫ್ರೆಶ್‌ ಆಗಿ ಕಾಣುತ್ತಾರೆ.
ಅನುಷ್ಕಾ ಶೆಟ್ಟಿ:ಮೇಕಪ್ ಇಲ್ಲದ ಬಾಹುಬಲಿ ನಟಿಯ ಫೋಟೋ ಇಲ್ಲಿದೆ. ಕರ್ನಾಟಕದ ಪುತ್ತೂರಿನ ಅನುಷ್ಕಾ ತೆಲುಗು ಸಿನಿಮಾದ ಟಾಪ್‌ ನಟಿಯರಲ್ಲಿ ಒಬ್ಬರು. ನಟಿ ನೋ-ಮೇಕಪ್ ಲುಕ್‌ ಹೀಗಿದೆ. ಆದರೆ ನಟಿಯ ಸ್ಮೈಲ್‌ ಮಾತ್ರ ಯಾವಾಗಲೂ ಆಕರ್ಷಕ.
ಕಾಜಲ್ ಅಗರ್ವಾಲ್:ದಕ್ಷಿಣದ ಅತ್ಯಂತ ಜನಪ್ರಿಯ ಹಾಗೂ ಸೆಕ್ಸಿನಾಯಕಿ ಕಾಜಲ್. ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿಯ ಲುಕ್ ಹೀಗಿದೆ ನೋಡಿ.
ಪ್ರಿಯಾ ಪ್ರಕಾಶ್‌ ವಾರಿಯರ್‌:ತಮ್ಮ ಚೊಚ್ಚಲ ಸಿನಿಮಾದ ಕಣ್ಸನ್ನೆ ಹಾಡಿನ ಮೂಲಕ ಸಖತ್‌ ಫೇಮಸ್‌ ಆದವರು ಪ್ರಿಯಾ ಪ್ರಕಾಶ್‌ ವಾರಿಯರ್‌. ತಮ್ಮ ಆಕ್ಟಿಂಗ್ ಮತ್ತು ಸ್ಮೈಲ್ ಮೂಲಕ ಕೋಟ್ಯಂತರ ಜನರ ಹೃದಯ ಗೆದ್ದಿದ್ದಾರೆ. 21 ವರ್ಷದ ಪ್ರಿಯಾ ಕೇರಳ ಮೂಲದವರು. ಅವರ ಅನೇಕ ಮ್ಯೂಸಿಕ್ ವೀಡಿಯೊಗಳು ಸಹ ಬಂದಿವೆ.
ತಮನ್ನಾ:ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಸಿನಿಮಾಗಳಲ್ಲೂ ನಟಿಸುವ 30 ವರ್ಷದ ನಟಿ ತಮ್ಮನ್ನಾ ಹಲವು ಹಿಟ್‌ ಫಿಲ್ಮ್‌ಗಳನ್ನು ನೀಡಿದ್ದಾರೆ. ಸೌತ್‌ನ ಈ ಮಿಲ್ಕಿ ಬ್ಯೂಟಿ ಮೇಕಪ್ ಇಲ್ಲದೆಯೂಮುದ್ದಾಗಿ ಸಿಂಪಲ್ಲಾಗಿ ಕಾಣುತ್ತಾರೆ. ನಟಿಯ ತೆರೆಮೇಲಿನ ಲುಕ್‌ಗೂ ಈ ಫೋಟೋಗೂ ಅಷ್ಟೊಂದು ವ್ಯತ್ಯಾಸವಿಲ್ಲ
ಇಲಿಯಾನಾ ಡಿ ಕ್ರೂಜ್:ಇಲಿಯಾನಾ ಕೇವಲ ದಕ್ಷಿಣದಲ್ಲಿ ಮಾತ್ರವಲ್ಲದೇ, ಬಾಲಿವುಡ್‌ನಲ್ಲೂ ಸಾಕಷ್ಟು ಹೆಸರು ಮಾಡಿದ್ದಾರೆ. ಅಕ್ಷಯ್‌ ಕುಮಾರ್‌, ಅಭಿಷೇಕ್‌ ಬಚ್ಚನ್‌,ರಣಬೀರ್‌ ಕಪೂರ್‌ ಮುಂತಾದ ಸ್ಟಾರ್‌ ನಟರ ಜೊತೆ ಕೆಲಸ ಮಾಡಿದ್ದಾರೆ.
ಶ್ರೀಯಾ ಶರನ್:ಕನ್ನಡ ತಮಿಳು ತೆಲಗು ಹಾಗೂ ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ ಶ್ರೀಯಾ ಶರನ್‌.
ತ್ರಿಶಾ ಕೃಷ್ಣನ್‌:ಸೌತ್‌ ನಟಿ ತ್ರಿಶಾ ಕೃಷ್ಣನ್ ಅಕ್ಷಯ್ ಕುಮಾರ್ ಜೊತೆ ಬಾಲಿವುಡ್ ಚಿತ್ರ 'ಖಟ್ಟ ಮೀಠಾ' ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ.
ನಮಿತಾ:ಸೋಂಥಮ್, ಚಾಣಕ್ಯ , ಕೋವಾಯಿ ಬ್ರದರ್ಸ್, ಬಿಲ್ಲಾ, ಇಂದ್ರ, ಸಿಂಹ, ಇಲಿಗನ್ನನ್, ಇಲಾಮೈ ಉಂಜಲ್, ಪೊಟ್ಟು ಮುಂತಾದ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ ನಮಿತಾ.
ಸ್ನೇಹಾ ಉಲ್ಲಾಳ್:ದಕ್ಷಿಣದ ನಟಿ ಸ್ನೇಹಾ ಉಲ್ಲಾಲ್ 2005ರಲ್ಲಿ ಸಲ್ಮಾನ್ ಖಾನ್ ಜೊತೆ ಚಿತ್ರ ಲಕ್ಕಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ನೇನು ಮೀಕು ತೆಲುಸಾ, ಸಿಮ್ಹಾ (2010), ದೇವಿ ಮೋಸ್ಟ್ ವೆಲ್ಕಮ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

Latest Videos

click me!