ತಮ್ಮ ಫಾರ್ಮ್‌ಹೌಸ್‌ನ ಸಾವಯವ ಮಾವಿನಹಣ್ಣಿನ ಜೊತೆ ಜುಹಿ ಚಾವ್ಲಾ!

Published : May 11, 2021, 06:31 PM IST

80ರ ದಶಕದಲ್ಲಿ ಬಾಲಿವುಡ್‌ನ ಜನಪ್ರಿಯ ನಾಯಕಿಯರಲ್ಲಿ ಜುಹಿ ಚಾವ್ಲಾ ಒಬ್ಬರು. ಪ್ರಸ್ತುತ ಸಿನಿಮಾದಿಂದ ದೂರವಿದ್ದರೂ, ಸೋಷಿಯಲ್‌ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ ಜುಹಿ. ಆಗಾಗ ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಇತ್ತೀಚೇಗೆ ಜುಹಿ ಚಾವ್ಲಾ ತಮ್ಮ ಫಾರ್ಮ್ ಹೌಸ್‌ನಲ್ಲಿ ಬೆಳೆದಿರುವ ಮಾವಿನ ಹಣ್ಣುಗಳ ಫೋಟೋ ಪೋಸ್ಟ್‌ ಮಾಡಿದ್ದರು, ಈ ಫೋಟೋಗಳನ್ನು ಜುಹಿ ಚಾವ್ಲಾ  ಮಾವಿನ ಹಣ್ಣಿನ ರಾಶಿಯನ್ನು ಟೇಬಲ್ ಮೇಲೆ ಇಟ್ಟುಕೊಂಡು ಅದರ ಮುಂದೆ ಕುಳಿತಿದ್ದಾರೆ. 

PREV
112
ತಮ್ಮ ಫಾರ್ಮ್‌ಹೌಸ್‌ನ ಸಾವಯವ ಮಾವಿನಹಣ್ಣಿನ ಜೊತೆ ಜುಹಿ ಚಾವ್ಲಾ!

'ವಡಾ ಫಾರ್ಮ್‌ನಲ್ಲಿನ ನನ್ನ ಹೊಸ ಆಫಿಸ್‌ ಏರ್‌ಕಂಡಿಷನ್ಡ್‌ ಹಾಗೂ ಆಮ್ಲಜನಕದಿಂದ ತುಂಬಿದೆ. ಹೊಸ ಹಸುಗಳು, ಸ್ಟಾಫ್ ಕ್ವಾರ್ಟರ್ಸ್ ಮತ್ತು ಹೆಚ್ಚಿನ ಹಣ್ಣಿನ ಮರಗಳನ್ನು ನೆಡುತ್ತಿದ್ದೇನೆ,' ಎಂದು ಫೋಟೋ ಜೊತೆ ಬರೆದಿದ್ದಾರೆ ಜುಹಿ ಚಾವ್ಲಾ.

212

ಜುಹಿ ಚಾವ್ಲಾರ ಈ ಫೋಟೋಗಳನ್ನು ಫ್ಯಾನ್ಸ್‌ಗೆ ಸಖತ್‌ ಇಷ್ಟವಾಗಿದೆ. ಕೆಲವೇ ಗಂಟೆಗಳಲ್ಲಿ 60 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ.  

312

ಮುಂಬೈನ ಹೊರವಲಯದಲ್ಲಿರುವ ಮಾಂಡ್ವಾದಲ್ಲಿ  ಜುಹಿಗೆ ಕುಟುಂಬದ ಜಮೀನಿದೆ.  ಅಲ್ಲಿ ಕೆಲವು ತಜ್ಞರ ತಂಡ ಸಾವಯವ ಕೃಷಿ ಕೆಲಸ ಮಾಡುತ್ತದೆ.

412

ಕೃಷಿಗಾಗಿ ಭೂಮಿ ಇಲ್ಲದ ರೈತರಿಗೆ ಜುಹಿ ಈ ಭೂಮಿಯನ್ನು ಕೃಷಿಗಾಗಿ ನೀಡಿದ್ದಾರೆ. ಈ ಬಾರಿ ರೈತರಿಗೆ ಭತ್ತ ಬೆಳೆಯಲು ಸಹಾಯ ಮಾಡುತ್ತಿದ್ದಾರೆ.

512

ಲಾಕ್‌ಡೌನ್‌ ಕಾರಣದಿಂದ ಜನರಿಗೆ  ಕಷ್ಟ ಎದುರಾಗಿರುವುದರಿಂದ ಅವರು  ಸ್ವಂತ ಜಮೀನು ಇಲ್ಲದ ರೈತರಿಗೆ  ವ್ಯವಸಾಯ ಮಾಡಲು ತಮ್ಮ ಜಾಗ ನೀಡಬೇಕೆಂದು ನಿರ್ಧರಿಸಿದರು 

612

ಕೇವಲ ಪುಸ್ತಕಗಳನ್ನು ಓದಿ ಕಲಿತಿರುವ ಸಿಟಿಯ ಜನರಿಗಿಂತ ಚೆನ್ನಾಗಿ ರೈತರು ಭೂಮಿ, ಮಣ್ಣು, ಗಾಳಿಯನ್ನು ಅರ್ಥಮಾಡಿಕೊಳ್ಳುತ್ತಾರೆ, ಎಂದು ಜುಹಿ ನಂಬುತ್ತಾರೆ. 

712

ಇಲ್ಲಿ ಆರ್ಗ್ಯಾನಿಕ್‌ ಫಾರ್ಮಿಂಗ್‌ ಮಾಡುತ್ತಿದ್ದು, ಅಕ್ಕಿಯ ಗುಣಮಟ್ಟದ ಮೇಲೆ ಗಮನ ಹರಿಸಲು ಜುಹಿ ಕೇಳಿ ಕೊಂಡಿದ್ದಾರೆ.
52 ವರ್ಷದ ಜುಹಿ ಕಳೆದ 8 ವರ್ಷಗಳಿಂದ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ತೋಟದಲ್ಲಿ ತಮ್ಮ ಮನೆಗಾಗಿ ಸಾವಯವ ತರಕಾರಿ ಬೆಳೆಯುತ್ತಾರೆ.

812

200 ಕ್ಕೂ ಹೆಚ್ಚು ಮಾವಿನ ಮರಗಳ ಜೊತೆ ಸಪೋಟ, ಪಪ್ಪಾಯಿ ಮತ್ತು ದಾಳಿಂಬೆ ಮುಂತಾದ ಹಣ್ಣಿನ ಮರಗಳಿವೆ, ನಾನು ಸಾವಯವ ಬೆಳೆಗಳನ್ನು ಮಾತ್ರ ಬೆಳೆಯುತ್ತೇನೆ ಎಂದು ಜುಹಿ ಹೇಳಿದ್ದರು.

912

'ನನ್ನ ರೈತ ತಂದೆ ವಾಡಾದಲ್ಲಿ 20 ಎಕರೆ ಭೂಮಿಯನ್ನು ಖರೀದಿಸಿದರು. ನನಗೆ ಕೃಷಿಯ ಬಗ್ಗೆ ಏನೂ ತಿಳಿದಿರಲಿಲ್ಲ. ಅವರು ಕೃಷಿ ಭೂಮಿಯಲ್ಲಿ ಹೂಡಿಕೆ ಮಾಡಿದಾಗ ನಾನು ಚಲನಚಿತ್ರಗಳಲ್ಲಿ ಬ್ಯುಸಿಯಾಗಿದ್ದೆ. ಆದರೆ ಅವರ ಮರಣದ ನಂತರ ನಾನು ಈ ಎಲ್ಲದರ ಬಗ್ಗೆ ಗಮನ ಹರಿಸಬೇಕಾಯಿತು' ಎಂದು ಜುಹಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

1012

ಸಾವಯವ ಹಣ್ಣುಗಳ ಜೊತೆ ನಟಿ ಮಾಂಡ್ವಾದಲ್ಲಿರುವ ಮತ್ತೊಂದು ಫಾರ್ಮ್ ಹೌಸ್‌ನಲ್ಲಿ ಸಾವಯವ ತರಕಾರಿ  ಬೆಳೆಯುತ್ತಾರೆ. 'ನಾನು ಸ್ವಲ್ಪ ಹಣ ಹೊಂದಿದ್ದೆ. ಆಗ ನಾನು ಮಾಂಡ್ವಾದಲ್ಲಿ 10 ಎಕರೆ ಭೂಮಿಯನ್ನು ಖರೀದಿಸಿದೆ. ಇಲ್ಲಿ ಸಾವಯವ ತರಕಾರಿಗಳನ್ನು ಬೆಳೆಯುತ್ತೇನೆ,' ಎಂದು ಅವರು ಹೇಳುತ್ತಾರೆ.

1112

ಜುಹಿ ಚಾವ್ಲಾ 1986 ರಲ್ಲಿ 'ಸುಲ್ತಾನೇಟ್' ಚಿತ್ರದೊಂದಿಗೆ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಆದರೆ, 'ಕಯಾಮತ್ ಸೆ ಕಯಾಮತ್ ತಕ್' ಸಿನಿಮಾದ ಮೂಲಕ ಬ್ರೇಕ್‌ ಪಡೆದರು.

1212

1984 ರಲ್ಲಿ, ಜುಹಿ ಚಾವ್ಲಾ ಮಿಸ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದಿದ್ದರು. 

click me!

Recommended Stories