ಆರ್ಯನ್ ಖಾನ್‌ಗೆ 4500 ಮನಿ ಆರ್ಡರ್: ಅಪ್ಪ ಶಾರೂಖ್, ಅಮ್ಮ ಗೌರಿ ಜೊತೆ ವಿಡಿಯೋ ಕಾಲ್

First Published Oct 15, 2021, 3:02 PM IST
  • ಆರ್ಯನ್ ಖಾನ್‌ಗೆ ಜೈಲಿಗೆ ಬಂತು ಮನಿ ಆರ್ಡರ್
  • ಅಪ್ಪ - ಅಮ್ಮನ ಜೊತೆ ವಿಡಿಯೋ ಕಾಲ್‌ಗೆ ಅವಕಾಶ

ಆರ್ಯನ್ ಖಾನ್ ಜೈಲಿನಲ್ಲಿ ಮನೆಯಿಂದ ಕಳುಹಿಸಲಾದ 4,500 ಮೌಲ್ಯದ ಮನಿ ಆರ್ಡರ್ ಪಡೆದಿದ್ದಾರೆ. ಅವರು ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿರುವ ಕ್ಯಾಂಟೀನ್ ನಿಂದ ಆಹಾರ ಮತ್ತು ಇತರ ವಸ್ತುಗಳನ್ನು ಖರೀದಿಸಲು ಇದನ್ನು ಬಳಸುವ ಸಾಧ್ಯತೆ ಇದೆ. ಜೈಲಿನಲ್ಲಿರುವ ಯಾರಿಗಾದರೂ ಕಳುಹಿಸಬಹುದಾದ ಗರಿಷ್ಠ ಮೊತ್ತ ಇದು.

ಆರ್ಯನ್ ಖಾನ್‌ಗೆ ತನ್ನ ಕುಟುಂಬದೊಂದಿಗೆ 10 ನಿಮಿಷಗಳ ಮೇಲ್ವಿಚಾರಣೆಯ ವೀಡಿಯೋ ಕಾಲ್ ಮಾಡಲು ಸಹ ಅನುಮತಿಸಲಾಗಿದೆ. ಕೊರೋನಾದಿಂದಾಗಿ ವಾರದಲ್ಲಿ ಎರಡು ಬಾರಿ ಕೈದಿಗಳಿಗೆ ತಮ್ಮ ಕುಟುಂಬದೊಂದಿಗೆ ವಿಡಿಯೋ ಕಾಲ್ ಮಾಡಲು ಅವಕಾಶವಿದೆ ಎಂದು ಹೇಳಿರುವ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನೀಡಲಾಗಿರುವ ಅವಕಾಶವಾಗಿದೆ.

ಆದರೂ ಆರ್ಯನ್ ಈ ಆಯ್ಕೆಯನ್ನು ಒಮ್ಮೆ ಮಾತ್ರ ಬಳಸಿದ್ದಾರೆ. ಹಣವನ್ನು ಸೋಮವಾರ  ಸ್ವೀಕರಿಸಲಾಗಿದ್ದು ಗುರುವಾರ ವೀಡಿಯೊ ಕಾಲ್ ಮಾಡಲಾಗಿದೆ ಎಂಬ ಮಾಹಿತಿ ಹೊರ ಬಿದ್ದಿದೆ.

ಜೈಲಿನ ಅಧೀಕ್ಷಕರಾದ ನಿತಿನ್ ವೇಚಲ್, ಆರ್ಯನ್ ಗೆ ಜೈಲು ಆಹಾರವನ್ನು ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ನ್ಯಾಯಾಲಯದ ಆದೇಶ ಹೊರಬೀಳುವವರೆಗೂ ಶಾರೂಖ್ ಮಗನಿಗೆ ಯಾವುದೇ ಮನೆ ಅಥವಾ ಹೊರಗಿನ ಆಹಾರವನ್ನು ನೀಡಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್‌ಗೆ(23)  ಮುಂಬೈ ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ನಾಲ್ಕನೇ ಬಾರಿಗೆ ಜಾಮೀನು ನಿರಾಕರಿಸಿದ ನಂತರ ನಿನ್ನೆ ಸಂಜೆ ಜೈಲಿಗೆ ಕಳುಹಿಸಲಾಗಿದೆ.

ಆರ್ಯನ್ ಅವರ ವಕೀಲರ ತಂಡ ಮತ್ತು ಎನ್‌ಸಿಬಿ ಸಾಲಿಸಿಟರ್  ವಾದಗಳನ್ನು ಆಲಿಸಿದ ಮುಂಬೈ ಸೆಷನ್ಸ್ ಕೋರ್ಟ್ ಆದೇಶವನ್ನು ಅಕ್ಟೋಬರ್ 20 ರವರೆಗೆ ಕಾಯ್ದಿರಿಸಿತು. ಈಗಾಗಲೇ 12 ದಿನಗಳನ್ನು ಜೈಲಿನಲ್ಲಿ ಕಳೆದಿರುವ ಆರ್ಯನ್ ಖಾನ್‌ ಇನ್ನೂ ಕನಿಷ್ಠ ಐದು ದಿನಗಳ ಕಾಲ ಜೈಲಿನಲ್ಲಿ ಉಳಿಯಬೇಕಾಗಿದೆ. 

ಹಬ್ಬದ ಕಾರಣ ನ್ಯಾಯಾಲಯಕ್ಕೆ ರಜೆ ಇರಲಿದ್ದು ಆರ್ಯನ್ ಖಾನ್ ಅವರನ್ನು ಈಗ 'ಅಂಡರ್ ಟ್ರಯಲ್ ಕೈದಿ ನಂಬರ್ ಎನ್ 956' ಎಂದು ಗೊತ್ತುಪಡಿಸಲಾಗಿದೆ. ಹಾಗೆಯೇ ಬ್ಯಾರಕ್ ಗೆ ಸ್ಥಳಾಂತರಿಸಲಾಗಿದೆ. ನಿನ್ನೆ COVID-19 ನೆಗೆಟಿವ್ ಫಲಿತಾಂಶದ ನಂತರ ಜನರಲ್ ಸೆಲ್‌ಗೆ ವರ್ಗಾಯಿಸಲಾಗಿದೆ.

click me!