ವಿಜಯ್‌ ದೇವರಕೊಂಡ ಅವರ ಲೀಗರ್‌ ಟ್ರೇಲರ್‌ ಲಾಂಚ್‌ನಲ್ಲಿ ರಣವೀರ್‌ ಪವರ್‌ ಪ್ಯಾಕ್‌ ಡ್ಯಾನ್ಸ್

First Published | Jul 22, 2022, 6:53 PM IST

ವಿಜಯ್ ದೇವರಕೊಂಡ(Viajy Devarakonda) ಮತ್ತು ಅನನ್ಯಾ ಪಾಂಡೆ(Ananya Panday)  ಅಭಿನಯದ ಬಹು ನಿರೀಕ್ಷಿತ ಚಿತ್ರ 'ಲೀಗರ್' (Liger) ಟ್ರೇಲರ್ ಜುಲೈ 21 ರಂದು ಬಿಡುಗಡೆಯಾಯಿತು.ಈ ಸಿನಿಮಾದ ತಯಾರಕರು ಮೊದಲು ಹೈದರಾಬಾದ್‌ನಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿದರು ಮತ್ತು ನಂತರ ಮುಂಬೈನಲ್ಲಿ ಟ್ರೇಲರ್‌ ಲಾಂಚ್‌ ಮಾಡಲಾಯಿತು. ಹೈದರಾಬಾದ್‌ನಲ್ಲಿ ವಿಜಯ್ ದೇವರಕೊಂಡ ಅವರನ್ನು 75 ಅಡಿ ಕಟೌಟ್‌ನೊಂದಿಗೆ ಸ್ವಾಗತಿಸಲಾಯಿತು. ಅದೇ ಸಮಯದಲ್ಲಿ, ಮುಂಬೈನ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ, ಪವರ್ ಹೌಸ್ ರಣವೀರ್ ಸಿಂಗ್ ಅತಿಥಿಯಾಗಿ ಆಗಮಿಸಿದರು. ಲೀಗರ್‌ ಸಿನಿಮಾದ ಟ್ರೇಲರ್‌ ಲಾಂಚ್‌ನ ಝಲಕ್‌ ಇಲ್ಲಿದೆ. 
 

ಕಾರ್ಯಕ್ರಮಕ್ಕೆ ಆಗಮಿಸುವ ಮೂಲಕ ರಣವೀರ್ ಸಿಂಗ್ ತಮ್ಮ ಎನರ್ಜಿಯಿಂದ ಎಲ್ಲರನ್ನು ರಂಜಿಸಿದರು. ಅವರು ವಿಜಯ್ ಮತ್ತು ಅನನ್ಯಾ ಅವರ ಜೊತೆ  ವೇದಿಕೆಯ ಮೇಲ ಹೆಜ್ಜೆ ಹಾಕಿದರು. ಲೈಗರ್' ಚಿತ್ರದ 'ಅಕ್ಡಿ ಪಕ್ಡಿ' ಹಾಡಿಗೆ ನೃತ್ಯ ಮಾಡಿದರು 

ವಿಜಯ್ ದೇವರಕೊಂಡ ತುಂಬಾ ಕ್ಯಾಶುಯಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಅವರು ಸ್ಲೀಪರ್ಸ್ ಧರಿಸಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.  ಇದಲ್ಲದೆ, ಅನನ್ಯಾ ಈವೆಂಟ್‌ಗೆ ಸ್ಟೈಲಿಸ್ಟ್‌  ಬ್ಲ್ಯಾಕ್‌ ಔಟ್‌ಫಿಟ್‌ ಆರಿಸಿಕೊಂಡರು.

Tap to resize

ಕಾರ್ಯಕ್ರಮದ ಸಮಯದಲ್ಲಿ, ರಣವೀರ್ ತನ್ನ ನೃತ್ಯ ಪ್ರದರ್ಶನವನ್ನು ಪೂರ್ಣಗೊಳಿಸಿದ ನಂತರ  ಕರಣ್ ಜೋಹರ್ ತನ್ನ ಕರವಸ್ತ್ರದಿಂದ ರಣವೀರ್‌ ಬೆವರು ಒರೆಸುವುದು ಕಂಡು ಬಂದಿದೆ. ರನವೀರ್‌ ಅವರ ಬಗ್ಗೆ ಕರಣ್ ಅವರ ಕಾಳಜಿಯ ಸ್ವಭಾವವನ್ನು ಎಲ್ಲರು ಮೆಚ್ಚಿಕೊಂಡರು. ಈ ದಿನಗಳಲ್ಲಿ ಕರಣ್ ಅವರ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದಲ್ಲಿ ರಣವೀರ್ ಕೆಲಸ ಮಾಡುತ್ತಿದ್ದಾರೆ.

ಕರಣ್ ಜೋಹರ್ ಬ್ಯಾನರ್‌ನಲ್ಲಿ ತಯಾರಾದ 'ಲೈಗರ್' ಚಿತ್ರವನ್ನು ಪೂರಿ ಜಗನ್ನಾಥ್ ನಿರ್ದೇಶಿಸಿದ್ದಾರೆ.  ಆಗಸ್ಟ್ 25 ರಂದು ಬಿಡುಗಡೆಯಾಗಲಿದೆ.
 

 ಹೈದರಾಬಾದ್‌ನಲ್ಲಿ ನಡೆದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ, ತಾನು ಮದುವೆಯಾಗುತ್ತಿರುವಂತೆ ಭಾಸವಾಯಿತು ಎಂದು ಅನನ್ಯಾ ಈ ಸಂದರ್ಭದಲ್ಲಿ ಹೇಳಿದರು. ಅಲ್ಲಿ ಅಭಿಮಾನಿಗಳು ವಿಜಯ್ ಮತ್ತು ಅನನ್ಯಾ ಅವರ ಮೇಲೆ ತಮ್ಮ ಪ್ರೀತಿಯ ಸುರಿಮಳೆಗೈದರು 

ವಿಜಯ್ ಮತ್ತು ಅನನ್ಯಾ ಅಲ್ಲದೆ  ರಮ್ಯಾ ಕೃಷ್ಣನ್, ರೆನಿತ್ ರಾಯ್ ಮತ್ತು ಮಕರಂದ್ ದೇಶಪಾಂಡೆ ಮುಂತಾದ ನಟರು ಸಹ ಕಾಣಿಸಿಕೊಳ್ಳಲಿದ್ದಾರೆ. ಅಮೇರಿಕನ್ ಬಾಕ್ಸರ್ ಮೈಕ್ ಟೈಸನ್ ಚಿತ್ರದಲ್ಲಿ ಅತಿಥಿ ಪಾತ್ರವನ್ನು ಹೊಂದಿದ್ದಾರೆ.
 

ಪ್ಯಾನ್ ಇಂಡಿಯಾ ಚಿತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂಬುದು ನನ್ನ ಕನಸಾಗಿತ್ತು ಮತ್ತು ಈ ಚಿತ್ರದ ಮೂಲಕ ಆ ಕನಸು ನನಸಾಗುತ್ತಿದೆ ಎಂದು ವಿಜಯ್ ದೇವರಕೊಂಡ ಹೇಳಿದರು. ಮತ್ತು ವಿಜಯ್ ಅವರು ಚಿತ್ರದಲ್ಲಿ ಮೈಕ್ ಟೈಸನ್ ಅವರೊಂದಿಗೆ ಮುಖಾಮುಖಿಯಾಗಿದ್ದಾರೆ ಎಂದು ತಿಳಿದಾಗ ಅವರ ತಾಯಿ ಗಾಬರಿಗೊಂಡಿದ್ದಾರೆ ಎಂದು ಬಹಿರಂಗಪಡಿಸಿದರು.

ಈ ಸಂದರ್ಭದಲ್ಲಿ ಕರಣ್ ಜೋಹರ್ ಅವರು ಶೀಘ್ರದಲ್ಲೇ ವಿಜಯ್ ಮತ್ತು ರಣವೀರ್ ಅವರೊಂದಿಗೆ ಆಕ್ಷನ್ ಚಿತ್ರ ಮಾಡುವುದಾಗಿ ಹೇಳಿದರು. ಆದರೆ, ಅದನ್ನು ಅವರೇ ನಿರ್ದೇಶನ ಮಾಡುತ್ತಾರೋ ಇಲ್ಲವೋ ಎನ್ನುವುದನ್ನು ಕರಣ್ ಹೇಳಿಲ್ಲ.

ಈ ಕಾರ್ಯಕ್ರಮದಲ್ಲಿ ರಣವೀರ್ ಸಿಂಗ್‌, ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಅವರಲ್ಲದೆ, ಕರಣ್ ಜೋಹರ್, ನಿರ್ಮಾಪಕಿ ಚಾರ್ಮಿ ಕೌರ್ ಮತ್ತು ನಿರ್ದೇಶಕ ಪುರಿ ಜಗನ್ನಾಥ್ ಸಹ ವೇದಿಕೆಯಲ್ಲಿದ್ದರು.

Latest Videos

click me!